ಆಗಲಿಲ್ಲ ಮಾತೃಪೂರ್ಣ, ಬರಲಿದೆ ಮಾತೃವಂದನ


Team Udayavani, Dec 17, 2017, 5:37 PM IST

1412bel1ph1.jpg

ಬೆಳ್ತಂಗಡಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿಲ್ಲ. ದ.ಕ. ಜಿಲ್ಲೆಯದ್ದು ರಾಜ್ಯದಲ್ಲಿಯೇ ಕನಿಷ್ಠ ಯೋಜನಾ ಪ್ರಗತಿ. ಈ ಮಧ್ಯೆ ಕೇಂದ್ರ ಸರಕಾರ ಜ. 1ರಿಂದ ಮಾತೃವಂದನ ಯೋಜನೆ ಜಾರಿಗೆ ತರುತ್ತಿದೆ.

ಅಪೂರ್ಣ ಮಾತೃಪೂರ್ಣ ಗರ್ಭಿಣಿ/ಬಾಣಂತಿಯರಿಗೆ ಅಂಗನವಾಡಿ ಗಳಲ್ಲಿ ಪೌಷ್ಟಿಕ ಆಹಾರ ತಯಾರಿಸಿ ಒದಗಿಸುವ ಯೋಜನೆ ಮಾತೃಪೂರ್ಣ. ಅ. 2ರಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಅಕ್ಟೋಬರ್‌ನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 1,920 ಗರ್ಭಿಣಿ ಯರು, 1,780 ಬಾಣಂತಿಯರನ್ನು ಗುರುತಿಸಲಾಗಿತ್ತು. ಈ ಪೈಕಿ 436 ಗರ್ಭಿಣಿಯರು, 517 ಬಾಣಂತಿಯರಷ್ಟೇ ಅಂಗನವಾಡಿಗೆ ತೆರಳಿ ಪೌಷ್ಟಿಕ ಆಹಾರ ಸೇವಿಸಿದ್ದರು. ನವೆಂಬರ್‌ನಲ್ಲಿ ಬೆಳ್ತಂಗಡಿ ಯಲ್ಲಿ 1,693 ಗರ್ಭಿಣಿಯರು, 1,992 ಬಾಣಂತಿ ಯರ ಪೈಕಿ ಅನುಕ್ರಮವಾಗಿ 367 ಮತ್ತು 353 ಮಂದಿಯಷ್ಟೇ ಮಾತೃಪೂರ್ಣದ ಫಲಾನುಭವಿಗಳಾಗಿದ್ದಾರೆ. ತಾಲೂಕಿನಲ್ಲಿ 324 ಅಂಗನವಾಡಿಗಳಿವೆ. ಜಿಲ್ಲೆಯಲ್ಲಿ 2,104 ಅಂಗನವಾಡಿ ಕೇಂದ್ರಗಳಿದ್ದು 28,849 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಆದರೆ ಪ್ರಯೋಜನ ಪಡೆದಿರುವುದು 2,400 ಮಂದಿ ಮಾತ್ರ.

ಬಿಸಿಯೂಟ ಮಾತೃಪೂರ್ಣದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿಗಳಲ್ಲಿ ಮಧ್ಯಾಹ್ನ ಬಿಸಿ ಊಟ, ಮೊಟ್ಟೆ, ನೆಲಗಡಲೆ – ಬೆಲ್ಲದ ಚಿಕ್ಕಿಯನ್ನು ನೀಡಲಾಗುತ್ತದೆ. ಗರ್ಭಿಣಿ, ಬಾಣಂತಿ ಮತ್ತು ಮಗು ಅಪೌಷ್ಟಿಕತೆಯಿಂದ ನರಳ ಬಾರದು ಎನ್ನುವುದು ಯೋಜನೆಯ ಉದ್ದೇಶ. ಫಲ ನೀಡಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬಂದಿ ಕೊರತೆಯಿಂದ ಸಂಕಷ್ಟದಲ್ಲಿದೆ. ಈ ಮಧ್ಯೆಯೇ ಹತ್ತಾರು ಯೋಜನೆಗಳು ನೂತನವಾಗಿ ಜಾರಿಯಾಗಿ ಸಿಬಂದಿಯ ಪ್ರಾಣ ಹಿಂಡುತ್ತಿವೆ. ಮಕ್ಕಳ ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಸಾಲದು ಎಂಬಂತೆ ಈಗ ಮನೆ ಮನೆಗೆ ತೆರಳಿ ಯೋಜನೆಯ ಮಹಣ್ತೀ ವಿವರಿಸಿ, ಪ್ರಯೋಜನ ಪಡೆದುಕೊಳ್ಳುವಂತೆ ದುಂಬಾಲು ಬೀಳಬೇಕಾಗಿದೆ. ಆದರೂ ಯೋಜನೆಯ ಫ‌ಲಿ ತಾಂಶ ಪ್ರಗತಿ ಕಂಡಿಲ್ಲ.

ಮನೆ ಮನೆಗೆ ಇಲ್ಲ ಆಹಾರದ ಪೊಟ್ಟಣಗಳನ್ನು ಗರ್ಭಿಣಿ/ಬಾಣಂತಿ ಇರುವ ಮನೆಗಳಿಗೆ ವಿತರಿಸುವ ಕುರಿತು ಒಮ್ಮೆ ಚಿಂತನೆ ನಡೆದಿತ್ತು. ಆದರೆ ಅದು ನೇರ ಫಲಾನುಭವಿಗೆ ತಲುಪದೆ, ಮನೆಯ ಇತರ ಸದಸ್ಯರೂ ಸೇವಿಸಬಹುದಾದ ಸಾಧ್ಯತೆ ಕಾಣಿಸಿ ಅದನ್ನು ಕೈ ಬಿಡಲಾಯಿತು.  

ಫಲಾನುಭವಿಗಳ ಮನೆಗಳು ಚದುರಿ ಹೋಗಿರುವ ಕಾರಣ ಮಧ್ಯಾಹ್ನ ವೇಳೆಗೆ ಊಟ ತಲುಪಿಸುವುದು ಕಷ್ಟ, ವಿಳಂಬ ಸಾಧ್ಯತೆಯೂ ಇದೆ. ಈ ಎಲ್ಲ ಕಾರಣಗಳಿಂದ ಫಲಾನುಭವಿಯೇ ಅಂಗನವಾಡಿಗೆ ಬಂದು ಆಹಾರ ಸ್ವೀಕರಿಸುವ ಯೋಜನೆ ಬಂತು. ಆದರೆ ಕರಾವಳಿಯ ಭೌಗೋಳಿಕ ಪರಿಸ್ಥಿತಿ ಈ ಯೋಜನೆಗೆ ಪೂರಕವಾಗಿಲ್ಲ. ಮಾತೃವಂದನ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದ ಸಹಯೋಗದಲ್ಲಿ ಸೆಪ್ಟಂಬರ್‌ನಲ್ಲಿ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಅನುಷ್ಠಾನಗೊಂಡಿದ್ದು, ಜ.1ರಿಂದ ಜಾರಿಗೆ ಬರಲಿದೆ. ಇದರನ್ವಯ ಜ.1ರ ಅನಂತರ ಚೊಚ್ಚಲ ಗರ್ಭಿಣಿ ಮಹಿಳೆಯರು ಇದರ ಫಲಾನುಭವಿಗಳಾಗಲಿದ್ದಾರೆ. ಗರ್ಭಿಣಿ ಅಂಗನವಾಡಿಯಲ್ಲಿ ನೋಂದಣಿ ಮಾಡಿದಾಗ 1 ಸಾವಿರ ರೂ., 6 ತಿಂಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ 2 ಸಾವಿರ ರೂ., ಪ್ರಸವಿಸಿ ಮಗುವಿಗೆ 1 ತಿಂಗಳಾದಾಗ 2 ಸಾವಿರ ರೂ. ದೊರೆಯಲಿದೆ. ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ 1 ಸಾವಿರ ರೂ. ರಾಜ್ಯ ವತಿಯಿಂದ ದೊರೆಯಲಿದೆ. ಹಣ ಬ್ಯಾಂಕ್‌ ಖಾತೆಗೆ ನೇರ ಜಮೆಯಾಗಲಿದೆ. ದ.ಕ. ಜಿಲ್ಲೆಯಲ್ಲಿ 

ದ. ಕ.ಕ್ಕೆ ಕೊನೇ ಸ್ಥಾನ 
ರಾಜ್ಯದಲ್ಲಿ ದ.ಕ. ಜಿಲ್ಲೆಯ ಸಾಧನೆ ಶೇ. 8 ಮಾತ್ರ. ಅನಂತರದ ಸ್ಥಾನಗಳಲ್ಲಿ ಉಡುಪಿ, ಕೊಡಗು, ಉತ್ತರಕನ್ನಡ ಇವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಇದು ಕಳಪೆ ಸಾಧನೆ ಎನ್ನುವುದು ಇಲಾಖೆಯ ವಾದ. ಇದಕ್ಕಾಗಿ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಈ 4 ಜಿಲ್ಲೆಗಳ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಸಭೆ ಕರೆಯಲಾಗಿತ್ತು.

ಕಾರಣ ಏನು?
ಮುಖ್ಯವಾಗಿ ಕರಾವಳಿಯ ಭೌಗೋಳಿಕ ಪರಿಸ್ಥಿತಿ ಇಲ್ಲಿ ಮಾತೃಪೂರ್ಣ ಯೋಜನೆ ವಿಫಲವಾಗಲು ಕಾರಣ. ಜತೆಗೆ ಇಲ್ಲಿನ ಜನ ಸ್ವಾಭಿಮಾನಿಗಳಾಗಿದ್ದು, ಅಂಗನವಾಡಿ ಊಟ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ. ಗರ್ಭಿಣಿ ಅಥವಾ ಬಾಣಂತಿಯರು ಕಿ.ಮೀ.ಗಟ್ಟಲೆ ಗದ್ದೆ, ಗುಡ್ಡ ಏರಿ ಇಳಿದು, ತೋಡು ದಾಟಿ ಅಂಗನವಾಡಿಗೆ ಹೋಗುವುದು ಕಷ್ಟ. ಊಟಕ್ಕಾಗಿ ಬಾಡಿಗೆ ವಾಹನದಲ್ಲಿ ಪ್ರಯಾಣ ವೆಚ್ಚದಾಯಕ. ಕೂಲಿ, ಗೇರುಬೀಜ ಫ್ಯಾಕ್ಟರಿ ಇತ್ಯಾದಿ ಕೆಲಸಕ್ಕೆ ಹೋಗುವ ಗರ್ಭಿಣಿ, ಬಾಣಂತಿಯರಿಗೆ ತಮ್ಮ ವ್ಯಾಪ್ತಿಯ ಅಂಗನವಾಡಿಗೆ ತೆರಳುವುದು ಕಷ್ಟ.

ಮನ ಒಲಿಸಲಾಗುತ್ತಿದೆ
ಮಾತೃಪೂರ್ಣದಲ್ಲಿ ದ.ಕ. ಜಿಲ್ಲೆ ಶೇ.8 ಪ್ರಗತಿಯಷ್ಟೇ ಸಾಧಿಸಿದೆ. ಇದಕ್ಕಾಗಿ ಗ್ರಾಮ ಸಭೆ, ಮನೆಮನೆ ಭೇಟಿ ಮೂಲಕ ಪೌಷ್ಟಿಕ
ಆಹಾರದ ಮಹಣ್ತೀ ವಿವರಿಸಿ ಫಲಾನು ಭವಿಗಳ ಮನ ಒಲಿಸಲಾಗುತ್ತಿದೆ. ಉತ್ತಮ ಯೋಜನೆಯ ಪ್ರಯೋಜನ ಪಡೆದು
ಕೊಳ್ಳಿ ಎನ್ನುವುದು ನಮ್ಮ ವಿನಂತಿ. ಹಾಗೆಯೇ ಮಾತೃವಂದನ ಜಾರಿಯಾಗ ಲಿದೆ. ಇದಕ್ಕಾಗಿ ತರಬೇತಿ ಪೂರ್ಣವಾಗಿದೆ.
– ಸುಂದರ ಪೂಜಾರಿ,  ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.