ಕನಸು ಕೂಡ ಕಂಡಿರಲಿಲ್ಲ…
Team Udayavani, Jan 27, 2020, 7:06 AM IST
ತನಗೆ ಲಭಿಸಿರುವ ಪ್ರಶಸ್ತಿ - ಪುರಸ್ಕಾರ, ಸ್ಮರಣಿಕೆಗಳ ಜತೆಗೆ ಅಕ್ಷರ ಸಂತ ಹರೇಕಳ ಹಾಜಬ್ಬ.
ಉಳ್ಳಾಲ: ಇಂಥ ಪ್ರಶಸ್ತಿ ಬರುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ. ನನಗೆ ಈ ಪ್ರಶಸ್ತಿ ಲಭ್ಯವಾಗಲು ಎಲ್ಲರ ಸಹಕಾರ ಕಾರಣ. ಈ ಬಡವನಿಗೆ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸರಕಾರಿ ಪ.ಪೂರ್ವ ಕಾಲೇಜು ಸ್ಥಾಪನೆ ನನ್ನ ಕನಸು…
ಹರೇಕಳ ಹಾಜಬ್ಬ ಅವರು ಪದ್ಮ ಪ್ರಶಸ್ತಿಗೆ ಪ್ರತಿಕ್ರಿಯಿಸಿದ್ದು ಹೀಗೆ.
ಶನಿವಾರ ಮಧ್ಯಾಹ್ನ ರೇಶನ್‌ಗಾಗಿ ಸಾಲು ನಿಂತಿದ್ದಾಗ ಒಂದು ಕರೆ ಬಂತು. ದಿಲ್ಲಿಯಿಂದ ಬಂದ ಕರೆ ಅದಾಗಿದ್ದು, ಅವರು ಹಿಂದಿಯಲ್ಲಿ ಮಾತನಾಡಿದ ಕಾರಣ ನನಗೆ ಅರ್ಥ ಆಗಲಿಲ್ಲ. ನನ್ನ ಹತ್ತಿರವಿದ್ದ ಒಬ್ಬರಿಗೆ ಮಾತನಾಡಲು ಹೇಳಿದೆ. ಪ್ರಶಸ್ತಿ ಬಂದ ವಿಚಾರ ತಿಳಿದು ಗಾಬರಿಯಾಯಿತು. ಶಾಸಕ ಯು.ಟಿ. ಖಾದರ್ ಅವರೂ ಸಂಪರ್ಕಕ್ಕೆ ಸಿಗಲಿಲ್ಲ. ರಾತ್ರಿ ಟಿ.ವಿ.ಯಲ್ಲಿಪ್ರಶಸ್ತಿ ಘೋಷಣೆಯಾದ ವಿಚಾರ ನೋಡಿ ಹಿತೈಷಿಗಳು ದೂರವಾಣಿ ಕರೆ ಮಾಡಿದರು. ನಾನು ಆ ಸಂದರ್ಭದಲ್ಲಿ ಬಸ್‌ನಲ್ಲಿ ಮನೆಗೆ ಬರುತ್ತಿದ್ದೆ. ಸಹಾಯಕ ಜಿಲ್ಲಾ ಆಯುಕ್ತರು ದೂರವಾಣಿ ಕರೆ ಮಾಡಿ ರವಿವಾರ ನೆಹರೂ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮ್ಮಾನ ಮಾಡುವ ವಿಚಾರ ತಿಳಿಸಿದ್ದಾರೆ ಎಂದು ಹಾಜಬ್ಬ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.