ಪಿಂಚಣಿದಾರರ ಡಿಜಿಟಲ್ ಲೈಫ್ ಸರ್ಟಿಫಿಕೆಟ್: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ
Team Udayavani, Nov 8, 2024, 10:31 AM IST
ಮಂಗಳೂರು: ಸರಕಾರದಿಂದ ಪಿಂಚಣಿ ಪಡೆಯುವ 80 ವರ್ಷ ದಾಟಿದವರು 2024ರ ಅ.1ರಿಂದ 2024 ನ.30ರೊಳಗೆ ಹಾಗೂ 80 ವರ್ಷ ಒಳಗಿನವರು 2024ರ ನ.1ರಿಂದ 2024ರ ನ.30ರೊಳಗೆ ತಮ್ಮ ಪಿಂಚಣಿ ಮುಂದುವರಿಯಲು ಜೀವನ ಪ್ರಮಾಣ ಸರ್ಟಿಫಿಕೆಟ್ ಕೊಡಬೇಕಾಗುತ್ತದೆ.
ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಅನ್ನು ತಮ್ಮ ಆಧಾರ್ ಆಧಾರಿತ ಬಯೋಮೆಟ್ರಿಕ್ ಬೆರಳಚ್ಚು ಕೊಟ್ಟು ಎಲ್ಲಿಂದ ಬೇಕಾದರೂ ಮಾಡಬಹುದು. ಪಿಂಚಣಿದಾರರ ಅನುಕೂಲಕ್ಕಾಗಿ ತಮ್ಮ ಮನೆ ಬಾಗಿಲಲ್ಲೇ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಮಾಡಿ ಕೊಡುವ ವ್ಯವಸ್ಥೆಯನ್ನು ಅಂಚೆ ಇಲಾಖೆ ಮತ್ತು ಐಪಿಪಿಬಿ ವ್ಯವಸ್ಥೆ ಮಾಡಿರುತ್ತದೆ. ಇದಕ್ಕಾಗಿ ಎಲ್ಲ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ /ಶಾಖಾ ಅಂಚೆ ಕಚೇರಿಯಲ್ಲಿ ತಮ್ಮಲ್ಲಿರುವ ಮೊಬೈಲ್ ಮೂಲಕ ಜೀವನ ಪ್ರಮಾಣ ಸರ್ಟಿಫಿಕೆಟ್ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪಿಂಚಣಿದಾರರು ಯಾವುದೇ ಕಾಗದ ಪತ್ರ ಕೊಡಬೇಕಾಗಿಲ್ಲ. ಡಿಜಿಟಲ್ ಜೀವನ ಪ್ರಮಾಣ ಪತ್ರವು ಪಿಂಚಣಿ ಪಡೆಯುವ ಕಚೇರಿಗೆ ತಂತ್ರಾಂಶ ಮೂಲಕ ರವಾನೆಯಾಗುತ್ತದೆ ಹಾಗೂ ನಿಮ್ಮ ಮೊಬೈಲ್‌ಗೆ ಇದರ ಸಂದೇಶ ಬರುತ್ತದೆ. 2023-24ರಲ್ಲಿ ಅಂಚೆ ಇಲಾಖೆ ಮಂಗಳೂರು ವಿಭಾಗವು 4,279 ಪಿಂಚಣಿದಾರರಿಗೆ ಯಶಸ್ವಿ ಸೇವೆ ನೀಡಿರುತ್ತದೆ.
ಮನೆ ಬಾಗಿಲಲ್ಲಿ ಕೊಡುವ ಈ ಸೇವೆಗೆ 70 ರೂ. ಶುಲ್ಕವನ್ನು ತೆರಬೇಕಾಗಿದೆ. ಪಿಂಚಣಿದಾರರ ಪ್ರಯಾಣ ಹಾಗೂ ಸಮಯವನ್ನು ಉಳಿಸುವ ಪ್ರಯತ್ನವಾಗಿ ನೀವು ನಿಮ್ಮ ಪೋಸ್ಟ್ ಮ್ಯಾನ್ /ಶಾಖಾ ಅಂಚೆ ಕಚೇರಿಯನ್ನು ಅಥವಾ ವಿಭಾ ಗೀಯ ಕಚೇರಿಯನ್ನು ಇಮೇಲ್ [email protected] ಮೂಲಕ ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ ತಿಳಿಸಿದ್ದಾರೆ.
ಇದನ್ನೂ ಓದಿ: Mangaluru: ಲಾಟರಿ, ಬೆಟ್ಟಿಂಗ್, ಮಟ್ಕಾ ನಿಯಂತ್ರಿಸಲು ಫ್ಲೈಯಿಂಗ್ ಸ್ಕ್ವಾಡ್ ಸಕ್ರಿಯವಾಗಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.