ಡಿಜಿಟಲ್ ಪಬ್ಲಿಕ್ ಲೈಬ್ರೆರಿ: ದ.ಕ. ಜಿಲ್ಲೆಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ
Team Udayavani, Sep 19, 2021, 3:10 AM IST
ಮಹಾನಗರ: ಸಾರ್ವಜನಿಕ ಗ್ರಂಥಾಲಯ ಇಲಾಖೆ ಆರಂಭಿಸಿದ “ಡಿಜಿಟಲ್ ಪಬ್ಲಿಕ್ ಲೈಬ್ರೆರಿ’ಗೆ ದ.ಕ. ಜಿಲ್ಲೆ ಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ನೋಂದಣಿಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಇದುವರೆಗೆ 17,14,579 ಮಂದಿ ಡಿಜಿಟಲ್ ಲೈಬ್ರೆರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ 18,76, 677 ಸದಸ್ಯರನ್ನು ಹೊಂದಿ ಪ್ರಥಮ, ಕಲಬುರಗಿ ತೃತೀಯ ಸ್ಥಾನದಲ್ಲಿದೆ. ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿ
ಯಲ್ಲಿರುವ ಗ್ರಂಥಾಲಯಗಳಲ್ಲಿ ಸೆ. 15ರ ವರೆಗೆ ಒಟ್ಟು 9,33,340 ಮಂದಿ ಡಿಜಿಟಲ್ ನೋಂದಣಿ ಮಾಡಿ ಕೊಂಡಿದ್ದಾರೆ. ನಗರ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಗ್ರಂಥಾಲಯ ಗಳಲ್ಲಿ 7,81,239 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ನೋಂದಣಿ ಹೇಗೆ ? :
www.karnatakadig italpublic library.orgಅಥವಾ ಸಾರ್ವಜನಿಕ ಗ್ರಂಥಾಲಯ ಆ್ಯಪ್ ಮೂಲಕ ಉಚಿತ ವಾಗಿ ನೋಂದಣಿಯಾಗಬಹುದು. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮೂಲಕ ಡಿಜಿಟಲ್ ಲೈಬ್ರೆರಿಯಲ್ಲಿ ಇ- ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆಗಳು, ಶೈಕ್ಷಣಿಕ ವೀಡಿಯೋಗಳು ಲಭ್ಯ ಇವೆ. ಹಳೆಯ, ಹೊಸ ಪುಸ್ತಕಗಳು ಸಹಿತ ಗ್ರಂಥಾಲಯದ ಸಮಗ್ರ ಅನುಭವ ಪಡೆಯಬಹುದಾ ಗಿದೆ. ಗ್ರಂಥಾಲಯಗಳಲ್ಲಿಯೂ ಡಿಜಿಟಲ್ ಲೈಬ್ರೆರಿ ಬಳಕೆದಾರರಿಗಾಗಿ ಕಂಪ್ಯೂಟರ್ ಸಿಸ್ಟಂಗಳನ್ನು ಒದಗಿಸಲಾಗುತ್ತದೆ.
ಯಾವ ಗ್ರಂಥಾಲಯ ಎಷ್ಟು ಮಂದಿ ನೋಂದಣಿ ?
ಬಾವುಟಗುಡ್ಡೆ 7,78,416
ಕದ್ರಿ 2,823
ಬಂಟ್ವಾಳ 24,082
ಬೆಳ್ತಂಗಡಿ 26,311
ಕಡಬ 20,724
ಮೂಡುಬಿದಿರೆ 22,256
ಮೂಲ್ಕಿ 37,748
ಪುತ್ತೂರು 1,14,122
ಸುಳ್ಯ 21,265
ಉಳ್ಳಾಲ 21,825
2020 ಫೆಬ್ರವರಿಯಲ್ಲಿ ಕೊರೊನಾ ಸಂದರ್ಭ ಡಿಜಿಟಲ್ ಲೈಬ್ರೆರಿ ಸೇವೆ ಆರಂಭಿಸಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಅನೇಕ ಮಂದಿ ಹಿರಿಯ ನಾಗರಿಕರು ಕೂಡ ಡಿಜಿಟಲ್ ಗ್ರಂಥಾಲಯದ ಮೂಲಕ ಓದುತ್ತಿದ್ದಾರೆ.–ರಾಘವೇಂದ್ರ ಕೆ.ವಿ.,ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.