ಗ್ರಾಮಾಂತರ ಭಾಗದ ನೀರಿನ ಬಿಲ್‌ಗೆ ಡಿಜಿಟಲ್‌ ಟಚ್‌!


Team Udayavani, Nov 27, 2018, 9:46 AM IST

tap.jpg

ಮಂಗಳೂರು: ಸದ್ಯ ನಗರ ಪ್ರದೇಶದಲ್ಲಿ ಮಾತ್ರ ಇರುವ ಡಿಜಿಟಲೀಕೃತ ನೀರಿನ ಬಿಲ್‌ ಹಾಗೂ ಘನತ್ಯಾಜ್ಯ ಸುಂಕ ವಸೂಲು ವ್ಯವಸ್ಥೆ ಇನ್ನು ಕೆಲವೇ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಜಾರಿಯಾಗಲಿದೆ. ಮನೆಗೆ ನೀರಿನ ಬಿಲ್‌ ನೀಡುವಾಗ ಸ್ಥಳದಲ್ಲೇ ಪಾವತಿ ವ್ಯವಸ್ಥೆ ಶೀಘ್ರವೇ ರಾಜ್ಯವ್ಯಾಪಿ ಅನುಷ್ಠಾನಗೊಳ್ಳಲಿದೆ.

ಇದುವರೆಗೆ ಗ್ರಾಮಾಂತರದಲ್ಲಿ ನೀರಿನ ಬಿಲ್‌ ಕೈಯಲ್ಲಿ ಬರೆದು ನೀಡಲಾಗುತ್ತಿತ್ತು. ಪಂಚಾಯತ್‌ ಮಟ್ಟದಲ್ಲಿ ನೀರಿನ ಬಳಕೆ ಮಾಪನವನ್ನು ಸುಲಭ ಮತ್ತು ನಿಖರವಾಗಿ ನಡೆಸಲು ಇದುವರೆಗೆ ತಂತ್ರಾಂಶವಿರಲಿಲ್ಲ. ಈಗ ಗ್ರಾ.ಪಂ. ಮಟ್ಟದಲ್ಲಿಯೂ ಒಂದೊಂದೇ ಸೇವೆಗಳನ್ನು ಡಿಜಿಟಲೀಕೃತಗೊಳಿಸಲು ಸರಕಾರ ಮುಂದಾಗಿದೆ. ಇದರ ಅಂಗವಾಗಿ ನೀರಿನ ಬಿಲ್‌ ಹಾಗೂ ಘನತ್ಯಾಜ್ಯ ಸುಂಕ ವಸೂಲಾತಿ ಬದಲಾಗಲಿದೆ.

ದ.ಕನ್ನಡ ಜಿಲ್ಲೆಯಲ್ಲಿ ಈಗ ಪ್ರಾಯೋಗಿಕ ನೆಲೆಯಲ್ಲಿ ಪುತ್ತೂರಿನ ರಾಮಕುಂಜ, ನರಿಮೊಗರು, ಉಪ್ಪಿನಂಗಡಿ, ಮಂಗಳೂರು ತಾಲೂಕಿನ ತೆಂಕಮಿಜಾರು ಹಾಗೂ ಮೂಡುಶೆಡ್ಡೆ ಗ್ರಾ.ಪಂ.ಗಳಲ್ಲಿಜಾರಿಯಾಗಿರುವ ವ್ಯವಸ್ಥೆಯನ್ನು ಎಲ್ಲ ಕಡೆಗೂ ವಿಸ್ತರಿಸುವ ಬಗ್ಗೆ ಜಿ.ಪಂ. ಉತ್ಸುಕತೆ ತೋರಿದೆ.

ಬಿಲ್‌ ಬಾಕಿ ಪತ್ತೆಗೆ ಸುಲಭ!
ನೀರಿನ ಬಿಲ್‌ ನೀಡುವ ಪಂಚಾಯತ್‌ನ ಮಾಪನ ಉದ್ಯೋಗಿಯು ತಂತ್ರಾಂಶದ ಮೂಲಕ ತನ್ನ ವ್ಯಾಪ್ತಿಯ ಬಳಕೆದಾರರ ವಿವರಗಳನ್ನು ದಾಖಲಿಸಬೇಕು. ಗ್ರಾಮದ ಒಟ್ಟು ನೀರಿನ ಮೀಟರ್‌ ಸಂಖ್ಯೆ, ಬಳಕೆದಾರರ ಸಂಖ್ಯೆ, ಮನೆ ಹೆಸರು, ಬಳಕೆದಾರರ ಸಂಖ್ಯೆ ಸಹಿತ ಎಲ್ಲ ಮಾಹಿತಿಗಳನ್ನು ಸೇರಿಸಬೇಕು. ಆ ಬಳಿಕ ಆ್ಯಂಡ್ರಾಯ್ಡ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಅನುಸಾರ ಮಾಪನ ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸಿಂಪ್ಯೂಟರ್‌ ಹಿಡಿದು ಮನೆ ಮನೆಗೆ ತೆರಳುವ ಸಿಬಂದಿ ಮೀಟರ್‌ ಪರಿಶೀಲಿಸಿ ಬಿಲ್‌ ನೀಡುತ್ತಾರೆ. ಇದು ವಿದ್ಯುತ್‌ ಬಿಲ್‌ ಮಾದರಿಯಲ್ಲಿರುತ್ತದೆ. ಈ ವಿವರಗಳು ಪಂಚಾಯತ್‌ ಕಂಪ್ಯೂಟರ್‌ನಲ್ಲಿ ದಾಖಲಾಗುವ ಕಾರಣ ಬಿಲ್‌ ಬಾಕಿ ಇತ್ಯಾದಿ ವಿವರ ಲಭ್ಯವಾಗುತ್ತದೆ. ಬಳಕೆದಾರ ಪ್ರತೀ ತಿಂಗಳು ಉಪಯೋಗಿಸಿದ ನೀರು, ಘನತ್ಯಾಜ್ಯದ ಲೆಕ್ಕಾಚಾರ, ಅದರ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕ ಸಂಬಂಧಿತ ಎಲ್ಲ ವಿವರಗಳನ್ನು ಪಡೆಯಬಹುದು.

ವಸೂಲಾತಿ ಸುಲಭ
ಬಳಕೆದಾರರ ಮಾಪನ ಹಾಗೂ ವಸೂಲಾತಿ ವಿವರ ಸ್ಥಳದಲ್ಲಿಯೇ ಸಿಗುವ ಕಾರಣ ಬಿಲ್‌ ಮೊತ್ತವನ್ನು ಮಾಪನದಾರನೇ ಸಂಗ್ರಹಿಸಬಹುದು. ಬಾಕಿ ವಸೂಲಾತಿಯೂ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜಿಲ್ಲಾ ಮಟ್ಟದಲ್ಲಿ ಈ ಎಲ್ಲ ವಿವರ ಪಡೆಯಬಹುದಾಗಿದೆ. ಆಫ್‌ಲೈನ್‌ ಆಗಿ ಈ ಮೊಬೈಲ್‌ ಆ್ಯಪ್‌ ಕಾರ್ಯ ನಿರ್ವಹಿಸಬಲ್ಲುದು. ಇಂಟರ್ನೆಟ್‌ ಸಂಪರ್ಕ ಲಭಿಸಿದ ಮಾಪನದ ಮಾಹಿತಿ ಕಚೇರಿಗೆ ರವಾನೆಯಾಗುತ್ತದೆ. 
ಸಾವಿರಾರು ರೂ. ವೆಚ್ಚದ ಇಂತಹ ತಂತ್ರಾಂಶವನ್ನು ಪ್ರಸ್ತುತ ಪಂಚಾಯತ್‌ನವರೇ ಮಾಡಿಸಬೇಕಾಗಿರುವುದು ಪಂಚಾಯತ್‌ಗೆ ಹೊರೆಯಾಗಬಹುದು. ಸರಕಾರ ಸಹಕಾರ ನೀಡಿದರೆ ಉತ್ತಮ ಎಂಬುದು ಪಂಚಾಯತ್‌ ಸಿಬಂದಿಯೊಬ್ಬರ ಅಭಿಪ್ರಾಯ.

ಬಿಲ್‌ ಕೊಟ್ಟ ತತ್‌ಕ್ಷಣ ಪಾವತಿ!
ನೂತನ ವ್ಯವಸ್ಥೆಯಲ್ಲಿ ಪಂಚಾಯತ್‌ ಸಿಬಂದಿ ವಿದ್ಯುತ್‌ ಬಿಲ್‌ ಮಾದರಿಯ ನೀರಿನ ಬಿಲ್‌ ನೀಡುತ್ತಾರೆ. ಮನೆಯವರು ಕೂಡಲೇ ಹಣ ಪಾವತಿಸಬಹುದು. ಸ್ಥಳದಲ್ಲಿಯೇ ಪಾವತಿಸಿದರೆ “ಬ್ಲೂಟೂಥ್‌ ಪ್ರಿಂಟರ್‌’ ಮೂಲಕ ರಸೀದಿ ನೀಡುವ ವ್ಯವಸ್ಥೆ ಇದೆ. ದಾಖಲಿಸಿದ ಎಲ್ಲ ಮಾಪನಗಳನ್ನು ಪಂಚಾಯತ್‌ ಕಚೇರಿಯಲ್ಲಿ ತತ್‌ಕ್ಷಣವೇ ಪರೀಕ್ಷಿಸಲು ಸಾಧ್ಯ. 

ಅನುಷ್ಠಾನಕ್ಕೆ ಸಿದ್ಧತೆ
ಗ್ರಾ.ಪಂ.ಗಳಿಗೆ ಡಿಜಿಟಲ್‌ ತಂತ್ರಜ್ಞಾನವನ್ನು ವಿಸ್ತರಿಸುವ ಗ್ರಾ.ಪಂ.ಗಳಲ್ಲಿ ಗಣಕೀಕೃತ ನೀರಿನ ಮಾಪನ ಹಾಗೂ ಬಿಲ್‌ ವಿತರಣೆ ಪ್ರಾರಂಭಿಸುವಂತೆ ಸರಕಾರ ನಿರ್ದೇಶನ ನೀಡಿದೆ. ಇದರಂತೆ ಎಲ್ಲ ಜಿ.ಪಂ.ಗಳಲ್ಲಿ ಇದು ಜಾರಿಯಾಗಲಿದೆ. ದಕ್ಷಿಣ ಕನ್ನಡದಲ್ಲಿಯೂ ಸಿದ್ಧತೆ ನಡೆಸಲಾಗುತ್ತಿದೆ.
ಡಾ| ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ
 

ದಿನೇಶ್‌ ಇರಾ

ಟಾಪ್ ನ್ಯೂಸ್

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.