ಡಿಜಿಟಲ್ ನೀರಿನ ಬಿಲ್; ಗ್ರಾಮ ಪಂಚಾಯತ್‌ಗಳ ನಿರಾಸಕ್ತಿ!
Team Udayavani, Dec 3, 2019, 5:30 AM IST
ಮಂಗಳೂರು: ಡಿಜಿಟಲ್ ಮಾದರಿಯ ನೀರಿನ ಬಿಲ್ ಮತ್ತು ಘನತ್ಯಾಜ್ಯ ಸುಂಕ ವಸೂಲಾತಿ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೆ ತರುವ ವರ್ಷದ ಹಿಂದಿನ ಸರಕಾರದ ಯೋಜನೆ ಇನ್ನೂ ಕೂಡ ಪೂರ್ಣಮಟ್ಟದಲ್ಲಿ ಕರಾವಳಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ.
ಗ್ರಾಮಾಂತರ ಭಾಗದಲ್ಲಿ ನೀರಿನ ಬಿಲ್ ಅನ್ನು ಕೈಯಲ್ಲಿ ಬರೆದು ರಸೀದಿ ಮಾದರಿಯಲ್ಲಿ ನೀಡಲಾಗುತ್ತಿದೆ. ಇದರಿಂದಾಗಿ ಪಂಚಾಯತ್ ಮಟ್ಟದಲ್ಲಿ ನೀರಿನ ಸರಬರಾಜು ಮತ್ತು ನಿರ್ವಹಣೆ ಸರಿಯಾಗಿ ಆದರೂ ಕೂಡ, ಮಾಪನವನ್ನು ಸುಲಭವಾಗಿಸಲು ಯಾವುದೇ ನಿಖರ ತಂತ್ರಾಂಶವಿರಲಿಲ್ಲ.
ಹೀಗಾಗಿ ಎಲ್ಲ ಗ್ರಾಮ ಪಂಚಾಯತ್ ಮಟ್ಟದಲ್ಲಿ “ಡಿಜಿಟಲ್’ ಎಂಬ ಹೊಸ ಯೋಜನೆಗೆ ಸರಕಾರ ಮನಸ್ಸು ಮಾಡಿತ್ತು. ಆದರೆ ಯೋಜನೆಯನ್ನು ಪ್ರಕಟಿಸಿದ ಸರಕಾರ ಅದರ ಅನುಷ್ಠಾನಕ್ಕೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೂ ಕೆಲವು ಪಂಚಾಯತ್‌ಗಳಲ್ಲಿ ಜಿಲ್ಲಾ ಪಂಚಾಯತ್‌ನ ಮಾರ್ಗದರ್ಶನದಂತೆ ಆಯಾ ಪಂಚಾಯತ್‌ನ ಹಣದಿಂದಲೇ ಡಿಜಿಟಲ್ ಬಿಲ್ ಮಾದರಿಯನ್ನು ಜಾರಿಗೆ ತರಲಾಗಿದೆ.
ಸದ್ಯ ಪುತ್ತೂರು ತಾಲೂಕಿನ ನರಿಮೊಗರು, ರಾಮಕುಂಜ, ಉಪ್ಪಿನಂಗಡಿ, ಒಳಮೊಗರು, ಕುಟ್ರಾಪ್ಪಾಡಿ, ಮಂಗಳೂರು ತಾಲೂಕಿನ ತೆಂಕಮಿಜಾರು, ಮೂಡುಶೆಡ್ಡೆ, ಬಳುRಂಜೆ, ಕಂದಾವರ, ಮಂಜನಾಡಿ, ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾ.ಪಂ.ನಲ್ಲಿ ಡಿಜಿಟಲ್ ಮಾದರಿಯ ನೀರಿನ ಬಿಲ್ ವಿತರಣೆ ವ್ಯವಸ್ಥೆ ಇದ್ದು, ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಘನತ್ಯಾಜ್ಯ ವಸೂಲಾತಿಗೆ ಡಿಜಿಟಲ್ ವ್ಯವಸ್ಥೆ ಇದೆ. ಉಡುಪಿಯ ಕೆಲವು ಗ್ರಾ.ಪಂನಲ್ಲಿ ಮಾತ್ರ ಜಾರಿಯಾಗಿದ್ದು, ಬಹುತೇಕ ಗ್ರಾ.ಪಂ.ನಲ್ಲಿ ಇನ್ನಷ್ಟೇ ಜಾರಿಯಾಗಬೇಕಿದೆ.
ನಿರಾಸಕ್ತಿಗೆ ಕಾರಣವೇನು?
ನೀರಿನ ಬಿಲ್-ಘನತ್ಯಾಜ್ಯ ಸುಂಕ ವಸೂಲಾತಿಯನ್ನು ಡಿಜಿಟಲೀಕರಣ ಮಾಡಬೇಕಾದರೆ ಒಂದೊಂದು ಗ್ರಾಮ ಪಂಚಾಯತ್‌ಗೆ ಸಿಂಪ್ಯೂಟರ್ ಸೇರಿದಂತೆ ಇತರ ಪರಿಕರಗಳು ಬೇಕು. ಇದಕ್ಕೆ ಸುಮಾರು 45,000 ರೂ. ವೆಚ್ಚವಾಗುತ್ತದೆ.
ಒಂದು ಗ್ರಾಮ ಪಂಚಾಯತ್‌ಗೆ ಇಂತಹ ಕನಿಷ್ಠ 3 ಸಿಂಪ್ಯೂಟರ್‌ಗಳ ಅಗತ್ಯವಿದೆ. ಆದರೆ ಗ್ರಾಮ ಪಂಚಾಯತ್‌ಗಳಿಗೆ ಇದನ್ನು ಭರಿಸುವಷ್ಟು ಅನುದಾನವಿಲ್ಲದ ಕಾರಣದಿಂದ ಇಷ್ಟು ಮೊತ್ತವನ್ನು ಸಿಂಪ್ಯೂಟರ್‌ಗಳಿಗೆ ನೀಡಲು ಗ್ರಾ.ಪಂ. ಮನಸ್ಸು ಮಾಡುತ್ತಿಲ್ಲ. ಜತೆಗೆ ಗ್ರಾಮೀಣ ಭಾಗದಲ್ಲಿ ಪಂಪ್ ಆಪರೇಟರ್‌ಗಳು ವಿದ್ಯಾಭ್ಯಾಸ ಇಲ್ಲದೆ ಅಥವಾ ವಯಸ್ಸಾದವರು ಇರುವುದರಿಂದ ಅದರ ನಿರ್ವಹಣೆ ಕೂಡ ಕಷ್ಟ ಎಂದು ನಿರಾಕರಿಸುತ್ತಿದ್ದಾರೆ.
ಜತೆಗೆ, ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ ಇರುವುದರಿಂದ ಸಿಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಕಳುಹಿಸುವ ಹಂತದಲ್ಲಿಯೂ ಸಮಸ್ಯೆ ಎದುರಾಗುತ್ತಿದೆ ಎಂಬ ಭಾವನೆಯಿದೆ. ಇನ್ನೂ ಕೆಲವೆಡೆ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ತೋರದ ಕಾರಣದಿಂದ ಡಿಜಿಟಲ್ ವ್ಯವಸ್ಥೆ ಪೂರ್ಣಮಟ್ಟದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ.
“ಸರಕಾರದ ಅಭಿಪ್ರಾಯ ಪಡೆದು ಕ್ರಮ’
ಸರಕಾರದ ವತಿಯಿಂದಲೇ ಎಲ್ಲಾ ಗ್ರಾ.ಪಂಗಳಲ್ಲಿ ಗಣಕೀಕೃತ ನೀರಿನ ಮಾಪನ ಹಾಗೂ ಬಿಲ್ ವಿತರಿಸುವ ಯೋಜನೆ ಪ್ರಾರಂಭಿಸುವ ಬಗ್ಗೆ ತಿಳಿಸಿತ್ತು. ಬಳಿಕ ಜಿಲ್ಲಾ ಪಂಚಾಯತ್ ಮುಖೇನ ಕೆಲವು ಗ್ರಾ.ಪಂ.ನಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ಇದೀಗ ಸರಕಾರದಿಂದ ಅಭಿಪ್ರಾಯ ಪಡೆದು ಮುಂದಿನ ಹಂತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
– ಡಾ| ಸೆಲ್ವಮಣಿ, ದ.ಕ. ಜಿ.ಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.