ಶಿಥಿಲಗೊಂಡ ಕಟ್ಟಡ: ಕ್ರೀಡಾಭ್ಯಾಸಕ್ಕೆ ನಿಷೇಧ
Team Udayavani, Sep 27, 2018, 5:13 PM IST
ಮಹಾನಗರ: ಮಂಗಳಾ ಕ್ರೀಡಾಂಗಣದ ಪೆವಿಲಿಯನ್ ಕಟ್ಟಡ ಸುಮಾರು 40 ವರ್ಷಗಳ ಹಳೆಯದಾಗಿದ್ದು, ಮೇಲ್ಫಾವಣಿಯು ಶಿಥಿಲ ಗೊಂಡಿರುವುದರಿಂದ ಸಿಮೆಂಟ್, ಸ್ಲ್ಯಾಬ್‌ನ ತುಂಡುಗಳ ಬೀಳುತ್ತಿವೆ. ಇದಕ್ಕಾಗಿ ಪೆವಿಲಿಯನ್‌ನಲ್ಲಿ ಕ್ರೀಡಾಭ್ಯಾಸ ಮಾಡುವುದನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿಷೇಧಿಸಿದೆ.
ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳು, ಅಭ್ಯಾಸ ಪ್ರಕ್ರಿಯೆಗಳು ಎಂದಿನಂತೆ ನಡೆಯುತ್ತಿವೆ. ಕ್ರೀಡಾಕೂಟಗಳು ಆಯೋಜನೆಗೊಂಡರೆ ವೀಕ್ಷಕರು ಪೆವಿಲಿಯನ್‌ನಲ್ಲೇ ಕುಳಿತುಕೊಳ್ಳಬೇಕಾಗಿರುವುದರಿಂದ ಅಪಾಯ ಸಾಧ್ಯತೆ ಹೆಚ್ಚು. ಇನ್ನೂ ಬಹುತೇಕ ಕ್ರೀಡಾಳುಗಳು ಕ್ರೀಡಾಂಗಣದಲ್ಲೇ ಅಭ್ಯಾಸ ಮಾಡುತ್ತಾರೆ. ಆದರೆ ಅವರ ಹೆತ್ತವರು ಅಥವಾ ಇತರರು ಪೆವಲಿಯನ್‌ನಲ್ಲಿ ಕುಳಿತುಕೊಂಡು ಅಭ್ಯಾಸ ವೀಕ್ಷಿಸುತ್ತಾರೆ.
ಗೋಡೆಯಲ್ಲಿ ನೋಟಿಸ್
ಇಲಾಖೆ ವತಿಯಿಂದ ಪೆವಿಲಿಯನ್ ಗೋಡೆಯಲ್ಲಿ ನೋಟಿಸ್ ಹಚ್ಚಲಾಗಿದ್ದು, ಇಲ್ಲಿ ಯಾವುದೇ ಅಭ್ಯಾಸ ಮಾಡಬಾರದು. ಮಾಡಿದರೆ ಮುಂದಾಗುವ ಅಪಾಯಗಳಿಗೆ ಅವರೇ ಹೊಣೆಗಾರರು ಎಂದು ಬರೆಯಲಾಗಿದೆ.
ಎನ್‌ಐಟಿಕೆಯಿಂದ ವರದಿ
1978ರಲ್ಲಿ ಕ್ರೀಡಾಂಗಣದ ಪೆವಿಲಿಯನ್ ನಿರ್ಮಾಣಗೊಂಡಿದ್ದು, ಹವಾಮಾನ ವೈಪರೀತ್ಯ ಮತ್ತು ಮಳೆಯ ಕಾರಣ ಕಟ್ಟಡ ಶಿಥಿಲಗೊಂಡಿದೆ. ಮೇಲ್ಛಾವಣಿಯ ಕೆಲವೆಡೆಗಳಲ್ಲಿ ಬಿರುಕು ಉಂಟಾಗಿ ಮಳೆಗಾಲದಲ್ಲಿ ಸೋರುತ್ತಿತ್ತು. ಈ ನಡುವೆ ಕ್ರೀಡಾಂಗಣದ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಸ್ಥಾವರ ಅಳವಡಿಸುವ ಯೋಜನೆಗೆ ಪೂರಕವಾಗಿ ಎನ್‌ಐಟಿಕೆಯ ತಜ್ಞ ಎಂಜಿಯರ್‌ಗಳಲ್ಲಿ ವರದಿ ಕೇಳಿದಾಗ, ಪೆವಿಲಿಯನ್ ಬಹಳ ಹಳೆಯದಾಗಿದ್ದು, ಮೇಲ್ಛಾವಣಿಯ ಸರಳುಗಳು ತುಕ್ಕು ಹಿಡಿದಿವೆ. ಅವುಗಳನ್ನು ಸರಿಪಡಿಸದೆ ಮುಂದಿನ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ವರದಿ ನೀಡಿದೆ. ಹಾಗಾಗಿ ಪೆವಿಲಿಯನ್ ಮೇಲ್ಛಾವಣಿಯಲ್ಲಿ 20 ಕಿ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಫ್ಯಾನಲ್ ಆಳವಡಿಸುವ ಕುರಿತು ಕಾಮಗಾರಿ ಕೂಡ ವಿಳಂಬವಾಗುತ್ತಿದೆ.
ಕಾಮಗಾರಿ ಆರಂಭಗೊಂಡರೆ ಕ್ರೀಡಾಂಗಣ ಬಂದ್?
ಪೆವಿಲಿಯನ್ ಕಾಮಗಾರಿಗೆ ಬೇಕಾದ ಆಡಳಿತಾತ್ಮಕ ಪ್ರಕ್ರಿಯೆಗಳು ಮುಗಿದ ಬಳಿಕ ಕಾಮಗಾರಿ ಆರಂಭಗೊಂಡು ಮುಕ್ತಾಯಗೊಳ್ಳುವವವರೆಗೆ ಸುಮಾರು ಮೂರು ತಿಂಗಳು ಕ್ರೀಡಾಂಗಣ ಬಂದ್ ಆಗಲಿದೆ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಆದರೆ ಸುರಕ್ಷೆ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಜಿಲ್ಲಾ ಪಂಚಾಯತ್‌ನ ಎಂಜಿನಿಯರ್ ಪತ್ರಿಕೆಗೆ ತಿಳಿಸಿದ್ದಾರೆ.
ಅಂದಾಜು ಪಟ್ಟಿ ಸಲ್ಲಿಕೆ
ಕಟ್ಟಡ ಶಿಥಿಲವಾಗಿರುವುದರಿಂದ ಅದನ್ನು ದುರಸ್ತಿಪಡಿಸುವಂತೆ ಎನ್‌ಐಟಿಕೆ ಅಧಿಕಾರಿಗಳು ವರದಿ ನೀಡಿದ ಹಿನ್ನಲೆಯಲ್ಲಿ ಕ್ರೀಡಾಂಗಣ ನಿರ್ವಹಣೆ ಮತ್ತು ನಿರ್ಮಾಣ ಅಡಿಯಲ್ಲಿ 2017-18ನೇ ಸಾಲಿನಲ್ಲಿ16 ಲಕ್ಷ ರೂ. ಹಾಗೂ 2018-19ನೇ ಸಾಲಿನಲ್ಲಿ 18 ಲಕ್ಷ ರೂ. ಅನುದಾನ ಕಾದಿರಿಸಲಾಗಿದ್ದು, ಅಂದಾಜು ಪಟ್ಟಿ ಮಂಜೂರಾತಿಗಾಗಿ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗಕ್ಕೆ ಕಳುಹಿಸಲಾಗಿದೆ. ಅದಾದ ಬಳಿಕ ಕಾಮಗಾರಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ.
– ಪ್ರದೀಪ್ ಡಿ’ಸೋಜಾ, ಉಪನಿರ್ದೇಶಕ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.