ಶಿಥಿಲಗೊಂಡ ಕಟ್ಟಡ, ಶಿಕ್ಷಕರ ಕೊರತೆ
ನೂರಕ್ಕೂ ಅಧಿಕ ಮಕ್ಕಳಿರುವ ಬಂಗ್ಲೆಗುಡ್ಡೆ ಸರಕಾರಿ ಶಾಲೆ
Team Udayavani, Jun 28, 2023, 3:52 PM IST
ಸುಬ್ರಹ್ಮಣ್ಯ: ಸರಕಾರಿ ಶಾಲೆಗೆ ಹೆಚ್ಚು ಮಕ್ಕಳನ್ನು ಕಳುಹಿಸಿ ದ್ದಲ್ಲಿ ಅಲ್ಲಿಗೆ ಪೂರಕ ಸೌಲಭ್ಯಗಳನ್ನು ನೀಡುತ್ತೇವೆ ಎನ್ನುವ ಸರಕಾರ, ಶಿಕ್ಷಣ ಇಲಾಖೆ ಶಾಲೆಯಿಂದ ಬೇಡಿಕೆ ಸಲ್ಲಿಸಿದರೂ ಈವರೆಗೆ ಈಡೇರಿಸಿಲ್ಲ.
ಸುಳ್ಯ ತಾ|ನ ಕೊಲ್ಲಮೊಗ್ರುವಿನ ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಸಮಸ್ಯೆ ಹಾಗೂ ಶಿಕ್ಷಕರ ಕೊರತೆ ಎದುರಾಗಿದ್ದು, ಇಲ್ಲಿನ ಸಮಸ್ಯೆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
70 ವರ್ಷ ಹಳೆಯ ಶಾಲೆ
ವಿವಿಧ ಸವಾಲುಗಳ ಮಧ್ಯೆ ಅಭಿವೃದ್ಧಿ ಹೊಂದುತ್ತಿರುವ ಕೊಲ್ಲಮೊಗ್ರುವಿನ ಬಂಗ್ಲೆ ಗುಡ್ಡೆ ಸರಕಾರಿ ಶಾಲೆಗೆ ಅಭಿವೃದ್ಧಿ ಭಾಗ್ಯ ಮಾತ್ರ ಇಂದಿಗೂ ಲಭಿಸಿಲ್ಲ. ಇಲ್ಲಿನ ಬಂಗ್ಲೆ ಗುಡ್ಡೆ ಶಾಲೆಗೆ ಸುಮಾರು 70 ವರ್ಷಗಳಾ ಗಿದ್ದು, ಇಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿದೆ.
ಸರಕಾರಿ ಶಾಲೆಗಳಲ್ಲಿ ಹಿಂದೆ ಮಕ್ಕಳ ಸಂಖ್ಯೆ ಹೆಚ್ಚಿದ್ದ ಸಮಯದಲ್ಲಿ ಇಲ್ಲೂ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಬಳಿಕ ಮಕ್ಕಳ ಸಂಖ್ಯೆ ಕುಸಿಯತೊಡಗಿ ಒಮ್ಮೆ 40ಕ್ಕೆ ಇಳಿದಿತ್ತು. ಬಳಿಕ ಶಾಲೆ, ಎಸ್‌ಡಿಎಂಸಿ, ಪೋಷಕರ ಪ್ರಯತ್ನದಿಂದ ಮಕ್ಕಳ ಸಂಖ್ಯೆ ಹೆಚ್ಚಳಗೊಂಡಿದ್ದು, ಇದೀಗ 1ರಿಂದ 7ನೇ ತರಗತಿ ವರೆಗೆ 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಲಿ-ಕಲಿ ವಿಭಾಗದಲ್ಲೇ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.
ಶಿಥಿಲ ಕಟ್ಟಡ
70 ವರ್ಷಗಳ ಹಿಂದೆ ನಿರ್ಮಾಣ ಗೊಂಡ ಶಾಲಾ ಕಟ್ಟಡದಲ್ಲೇ 4 ರಿಂದ 7ನೇ ತರಗತಿಗಳು ನಡೆಯುತ್ತಿದೆ. ಸುಣ್ಣ-ಬಣ್ಣ ಬಳಿದು ಹೊಸತರಂತೆ ಕಟ್ಟಡವನ್ನು ಅಂದಗೊಳಿಸಿದರೂ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಗೋಡೆ, ಮೇಲ್ಛಾವಣಿ, ಪೀಠೊಪಕರಣ ಶಿಥಿಲಗೊಂಡಿದೆ ಎನ್ನು ತ್ತಾರೆ ಪೋಷಕರು. ಇಲ್ಲಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾದ ನಲಿ -ಕಲಿ ಕಟ್ಟಡವೂ ಶಿಥಿಲಾವಸ್ಥೆ ತಲುಪಿದ್ದು, ಮಳೆ ನೀರು ಸೋರುತ್ತಿದೆ. ಮುಂಜಾಗ್ರತೆ ದೃಷ್ಟಿಯಿಂದ ಪೋಷಕರು ಹಣ ಸಂಗ್ರ ಹಿಸಿ ಮೇಲ್ಛಾವಣಿಗೆ ಟಾರ್ಪಾಲು ಹಾಕಿಸಿ ದ್ದಾರೆ. ವಿದ್ಯುತ್ ಉಪಕರಣಗಳು ದುರಸ್ತಿ ಆಗಬೇಕಿದೆ.
ಶಿಕ್ಷಕರ ಕೊರತೆ
ಕಟ್ಟಡ ಸಮಸ್ಯೆ ಜತೆಗೆ ಇಲ್ಲಿ ಶಿಕ್ಷಕರ ಕೊರತೆಯೂ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಮೂವರು ಸರಕಾರಿ ಶಿಕ್ಷಕರಿ ದ್ದಾರೆ. ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. 100ಕ್ಕೂ ಅಧಿಕ ಮಕ್ಕಳಿರುವ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು ಎಂಬ ನಿಯಮವಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಈವರೆಗೆ ಆಗಿಲ್ಲ. ಕಳೆದ ವರ್ಷ ಪೋಷಕರೇ ಹಣ ಸಂಗ್ರಹಿಸಿ ನಾಲ್ವರು ಶಿಕ್ಷಕರನ್ನು ನೇಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದರು.
ಅನುದಾನ ಬಂದಿಲ್ಲ
ನಲಿ-ಕಲಿ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಹಾಗೂ ಈಗಿರುವ ನಲಿ-ಕಲಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಸರಕಾರದಿಂದ ಅನುದಾನವೇ ಬಂದಿಲ್ಲ. ದಾನಿಗಳು, ಪೋಷಕರಿಂದ ಸಂಗ್ರಹಿಸಿದ 12 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷರು. ಈ ಮೊದಲು ರಂಗ ಮಂದಿರ ನಿರ್ಮಾಣದ ವೇಳೆಯೂ ಸರಕಾರದಿಂದ 3.95 ಲಕ್ಷ ರೂ. ಅನುದಾನ ಮಾತ್ರ ಬಂದಿತ್ತು. ಶಾಲೆಯವರ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಶಾಲೆಯ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಿ ಅಭಿ ವೃದ್ಧಿಗೆ ಸ್ಪಂದಿಸಲಿ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊ ಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.
ಕೂಡಲೇ ಕ್ರಮ ಕೈಗೊಳ್ಳಲಿ
ಬಂಗ್ಲೆಗುಡ್ಡೆ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಹೊಸ ಕಟ್ಟ ಡದ ಆವಶ್ಯಕತೆ ಇದೆ. ಇಲ್ಲಿಗೆ ಇನ್ನೂ ಮೂವರು ಶಿಕ್ಷಕರ ಅಗತ್ಯ ವಿದ್ದು, ಇವುಗಳ ಬಗ್ಗೆ ಇಲಾಖೆ ಕೂಡಲೇ ಕ್ರಮಕೈಗೊಳ್ಳಲಿ.
-ಬಾಲಸುಬ್ರಹ್ಮಣ್ಯ ಕೊಲ್ಲಮೊಗ್ರು,
ಎಸ್‌ಡಿಎಂಸಿ ಅಧ್ಯಕ್ಷರು
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.