ಶಿಥಿಲಾವಸ್ಥೆಯಲ್ಲಿ ಮಾಡದಗುಡ್ಡೆ ಅಂಗನವಾಡಿ ಕೇಂದ್ರ

ಕಡತದಲ್ಲೇ ಬಾಕಿ ಉಳಿದ ನಿರ್ಮಾಣ ಕಾರ್ಯ

Team Udayavani, Dec 12, 2019, 5:23 AM IST

sx-13

ಬೋಳಿಯಾರ್‌: ಮುರಿದು ಬೀಳುವ ಹಂತದಲ್ಲಿರುವ ಛಾವಣಿ, ನೇತಾಡುತ್ತಿರುವ ಬಾಗಿಲು ಇದು ಬೋಳಿಯಾರು ಮಾಡದಗುಡ್ಡೆ ಅಂಗನವಾಡಿ ಕೇಂದ್ರದ ಕಟ್ಟಡದ ದುರಾವಸ್ಥೆ. ಪುಟ್ಟ ಪುಟ್ಟ ಕಂದಮ್ಮಗಳು ಯಾವುದೇ ಪರಿವಿಲ್ಲದೆ ಈ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಹೆಜ್ಜೆ ಹಾಕಿ ಆಟವಾಡುತ್ತಿದ್ದರೆ, ಕಟ್ಟಡ ನಿರ್ಮಾಣಕ್ಕೆ ಪಂಚಾಯತ್‌ ಅಧಿಕಾರಿಗಳಿಗೆ ಅಂಗನವಾಡಿ ಸಹಾಯಕಿಯರು ಮತ್ತು ಮಕ್ಕಳ ಹೆತ್ತವರು ಮಾಡಿದ ಮನವಿ ಕೇವಲ ಕಡತದಲ್ಲಿಯೇ ಧೂಳು ತಿನ್ನುತ್ತಿದೆ.

ಮಂಗಳೂರು ತಾಲೂಕಿನ ಬೋಳಿಯಾರ್‌ ಗ್ರಾ.ಪಂ. ವ್ಯಾಪ್ತಿಯ ಮಾಡದಗುಡ್ಡೆ ಅಂಗನವಾಡಿ ಕೇಂದ್ರ ಪಂಚಾಯತ್‌ ಕಚೇರಿಯ ಬದಿಯಲ್ಲೇ ಇದ್ದರೂ ಅಂಗನವಾಡಿ ಕೇಂದ್ರದ ದುರವಸ್ಥೆ ಪಂಚಾಯತ್‌ನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದಿನಾಲೂ ಕಣ್ಣಿಗೆ ಕಂಡರೂ ಕೇಂದ್ರಕ್ಕೆ ನೂತನ ಕಟ್ಟಡ ಕಲ್ಪಿಸುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎನ್ನುತ್ತಾರೆ ಅಂಗನವಾಡಿ ಕೇಂದ್ರದ ಮಕ್ಕಳ ಹೆತ್ತವರು.

6 ವರ್ಷದಿಂದ ಪಂಚಾಯತ್‌ಗೆ ಮನವಿ
ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಆರು ವರ್ಷಗಳಿಂದ ಅಂಗನವಾಡಿ ಸಹಾಯಕಿಯರು ಮತ್ತು ಮಕ್ಕಳ ಹೆತ್ತವರು ಪ್ರತೀ ಗ್ರಾಮ ಸಭೆಯಲ್ಲಿ ಮನವಿ ಮಾಡಿ ಒತ್ತಾಯಿಸುತ್ತಿದ್ದಾರೆ. ಆದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರೂ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಮನವಿ ಸಲ್ಲಿಸಿದರೂ ಪಂಚಾಯತ್‌ ಸ್ಪಂದಿಸದೇ ಇರುವಾಗ ಹಿಂದಿನ ಗ್ರಾಮಸಭೆಯಲ್ಲಿ ಮನವಿ ಸಲ್ಲಿಸುವುದನ್ನೇ ಕೈಬಿಡಲಾಗಿದೆ ಎನ್ನುತ್ತಾರೆ ಅಂಗನವಾಡಿ ಕೇಂದ್ರದ ಮಕ್ಕಳ ಹೆತ್ತವರು.

ಮಳೆಗಾಲದಲ್ಲಿ ಹಾವುಗಳ ಕಾಟ
ಒಂದೆಡೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಮಕ್ಕಳ ದೈನಂದಿನ ಕಲಿಕೆ ನಡೆದರೆ ಮಳೆಗಾಲ ಬಂತೆಂದರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರಲು ಹೆದರುವ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ನೀರಿಗೆ ಅಂಗನವಾಡಿ ಕೇಂದ್ರ ಜಲಾವೃತಗೊಂಡರೆ ಮಕ್ಕಳಿಗೆ ಪಂಚಾಯತ್‌ ಕಚೇರಿಗೆ ಸ್ಥಳಾಂತರಗೊಳ್ಳುತ್ತದೆ. ಇನ್ನೊಂದೆಡೆ ಮುರಿದಿರುವ ಕಿಟಕಿಗಳ ಎಡೆಯಿಂದ ಹಾವುಗಳು ಅಂಗನವಾಡಿ ಕೇಂದ್ರದ ಒಳಗೆ ನುಸುಳುತ್ತವೆ. ಹಲವಾರು ಬಾರಿ ಮಕ್ಕಳು ಹಾವಿಗೆ ಹೆದರಿ ಹೊರ ಓಡಿ ಬಂದಿರುವ ಘಟನೆ ಸಂಭವಿಸಿದ್ದುಂಟು. ಹಾವಿನ ಭಯದಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೆಲವು ಹೆತ್ತವರು ಹಾವು ಬರುವ ಕಾರಣದಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸುತ್ತಿಲ್ಲ ಎನ್ನುತ್ತಾರೆ ಸ್ತ್ರೀ ಶಕ್ತಿ ಸಂಘದಲ್ಲಿ ಸಕ್ರಿಯವಾಗಿರುವ ಆಸಿಯಾ ಅವರು. ನಾವು ಹೆಚ್ಚಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು ಹಲವು ಬಾರಿ ಹಾವುಗಳನ್ನು ಕೇಂದ್ರದಿಂದ ಹೊರ ಓಡಿಸಲು ಸ್ಥಳೀಯರಿಗೆ ಮೊರೆ ಹೋಗಿದ್ದೇವೆ ಎನ್ನುತ್ತಾರೆ.

ಕುಸಿಯುವ ಹಂತದಲ್ಲಿರುವ ಬಾಗಿಲು
ಸುಮಾರು 25ಕ್ಕೂ ಹೆಚ್ಚು ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸಹಿತ ಇಬ್ಬರು ಕಾರ್ಯನಿರ್ವಹಿಸುತ್ತಾರೆ.

ಸ್ಥಳೀಯ ಸ್ತ್ರೀಶಕ್ತಿ ಸಂಘದ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವಾಗ ಮಕ್ಕಳನ್ನು ಆಟವಾಡಿಸುತ್ತಿದ್ದರೆ, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಇಬ್ಬರೇ ಇರುವ ಸಂದರ್ಭದಲ್ಲಿ ಮಕ್ಕಳು ಅವರಿಂದ ತಪ್ಪಿಸಿಕೊಂಡು ಮುರಿದು ಬೀಳುವ ಹಂತದಲ್ಲಿರುವ ಬಾಗಿಲು ಮತ್ತು ದಾರಂದದ ಎಡೆಯಲ್ಲಿ ಆಟವಾಡುತ್ತಿದ್ದು ಅಪಾಯಕಾರಿಯಾಗಿರುವ ಈ ಅಂಗನವಾಡಿಗೆ ಸುಸಜ್ಜಿತ ಕಟ್ಟಡವಾದರೆ ಮಾತ್ರ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯ. ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಟ್ಟಡಕ್ಕೆ ಅನುದಾನ ನೀಡಲು ಪಂಚಾಯತ್‌ಗೆ ಅಧಿಕಾರವಿದ್ದು, ಶೀಘ್ರವೇ ಅನುದಾನ ಬಿಡುಗಡೆ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕಾಗಿದೆ.

ನೂತನ ಕಟ್ಟಡದಿಂದ ಸಮಸ್ಯೆ ಪರಿಹಾರ
ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕಟ್ಟಡದೊಳಗೆ ಹಾವು, ಇಲಿಗಳ ಕಾಟ ಹೆಚ್ಚಿದೆ. ಮಳೆಗಾಲದಲ್ಲಿ ನೀರು ಒಳಬರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ನೂತನ ಕಟ್ಟಡ ನಿರ್ಮಾಣವಾದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ
– ರಂಜಿನಿ ಬೋಳಿಯಾರ್‌, ಸ್ತ್ರೀ ಶಕ್ತಿ ಸಂಘದ ಸದಸ್ಯೆ

ತಾಂತ್ರಿಕ ತೊಂದರೆಯಿಂದ ಅನುದಾನ ದೊರೆತಿಲ್ಲ
ಬೋಳಿಯಾರ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಡದಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಕೆಲವೊಂದು ತಾಂತ್ರಿಕ ತೊಂದರೆಯಿಂದಾಗಿ ಅನುದಾನ ಹೊಂದಿಸಲು ಸಾಧ್ಯವಾಗಿಲ್ಲ. ಮಾಡದಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ಸತೀಶ್‌ ಆಚಾರ್ಯ, ಅಧ್ಯಕ್ಷರು, ಬೋಳಿಯಾರು ಗ್ರಾ.ಪಂ.

ಅಧಿಕಾರಿಗಳ ಸ್ಪಂದನೆ ಸಿಗಬೇಕಿದೆ
ಅಂಗನವಾಡಿ ಕಟ್ಟಡ ದುರಸ್ತಿಗೆ ತಾ.ಪಂ.ನಿಂದ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆಯೂ ಕಟ್ಟಡದ ಛಾವಣಿ ದುರಸ್ತಿ ನಡೆದಿತ್ತು. ಆದರೆ ಇಡೀ ಕಟ್ಟಡವೇ ಶಿಥಿಲಾವಸ್ಥೆಯಲ್ಲಿರುವುದರಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾದರೆ ಮಾತ್ರ ಸಮಸ್ಯೆ ಪರಿಹಾರವಾಗಲು ಸಾಧ್ಯ.
– ಕೆ.ಪಿ. ಪೂರ್ಣಿಮಾ, ಅಂಗನವಾಡಿ ಶಿಕ್ಷಕಿ

– ವಸಂತ್‌ ಎನ್‌. ಕೊಣಾಜೆ

ಟಾಪ್ ನ್ಯೂಸ್

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Mangaluru: ಅಪರಿಚಿತ ವ್ಯಕ್ತಿ ಸಾವು

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.