![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 20, 2019, 5:44 AM IST
ಮಂಗಳೂರು: ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ಸಂಪರ್ಕ ಕಲ್ಪಿಸುವ ಸ್ಪೈಸ್ ಜೆಟ್ ವಿಮಾನ ಯಾನ ಆ.4ರಿಂದ ಆರಂಭವಾಗಲಿದೆ. ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸೇವೆಗೆ ಮರುಜೀವ ಸಿಗಲಿದೆ.
ಸದ್ಯದ ಮಾಹಿತಿ ಪ್ರಕಾರ ಸ್ಪೈಸ್‌ಜೆಟ್‌ನ ಒಂದು ವಿಮಾನ ಮಂಗಳೂರು-ಹೊಸದಿಲ್ಲಿ ಮಧ್ಯೆ ಸಂಚರಿಸಲಿದೆ. ಆ.4ರಿಂದ ಪ್ರತೀದಿನ ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಹೊರಡುವ ಈ ವಿಮಾನ ಬೆಳಗ್ಗೆ 8.55ಕ್ಕೆ ಹೊಸದಿಲ್ಲಿ ತಲುಪಲಿದೆ. ಪ್ರತೀ ದಿನ ರಾತ್ರಿ 8.30ಕ್ಕೆ ಹೊಸದಿಲ್ಲಿಯಿಂದ ಹೊರಡುವ ವಿಮಾನ ರಾತ್ರಿ 11.15ಕ್ಕೆ ಮಂಗಳೂರು ತಲುಪಲಿದೆ. ಮರುದಿನ ಬೆಳಗ್ಗೆ ಮತ್ತೆ ಸಂಚರಿಸಲಿದೆ.
ರಾಜಧಾನಿ ಹೊಸದಿಲ್ಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್‌ವೆàಸ್ ಈ ಹಿಂದೆ ಸಂಚರಿಸುತ್ತಿತ್ತು. ಆದರೆ ಕೆಲವು ತಿಂಗಳಿನಿಂದ ಆ ವಿಮಾನವೂ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಪರಿಣಾಮವಾಗಿ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆಯೇ ಇರಲಿಲ್ಲ. ದಿಲ್ಲಿಗೆ ಹೋಗಬೇಕಾದರೆ ಬೆಂಗಳೂರು ಅಥವಾ ಮುಂಬಯಿಗೆ ಹೋಗಿ ದಿಲ್ಲಿಗೆ ತೆರಳಬೇಕಾಗಿತ್ತು. ಹೀಗಾಗಿ ಹೊಸದಿಲ್ಲಿಗೆ ನೇರವಿಮಾನ ಸೇವೆ ಮರು ಆರಂಭಿಸುವ ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ್ದರು. ಸ್ಪೈಸ್‌ಜೆಟ್ ಮಂಗಳೂರು-ಹೊಸದಿಲ್ಲಿ ವಿಮಾನ ಸೇವೆಯನ್ನು ಆರಂಭಿಸಲಿದೆ.
ಸದ್ಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ಮಂಗಳೂರಿನಿಂದ ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ದುಬಾೖ, ದೋಹಾ, ಕತಾರ್, ಶಾರ್ಜಾ, ಬೆಹರೈನ್, ಕುವೈಟ್, ಮಸ್ಕತ್‌ಗೆ ಸೇವೆ ನೀಡುತ್ತಿವೆ.
You seem to have an Ad Blocker on.
To continue reading, please turn it off or whitelist Udayavani.