ವಿಕೋಪ: ಜಿಲ್ಲೆಗೆ 9ಕೋ.ರೂ.ನಷ್ಟ
Team Udayavani, Sep 7, 2018, 11:17 AM IST
ಮೂಲ್ಕಿ: ಈ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಜಿಲ್ಲೆಗೆ ಸುಮಾರು 9 ಕೋಟಿ ರೂ.ಮೊತ್ತದ ನಷ್ಟ ಉಂಟಾಗಿದೆ. ಇಲಾಖೆ ತನ್ನ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಸೇವೆಯನ್ನು ನೀಡುವಲ್ಲಿ ಸನ್ನದ್ಧವಾಗಿದೆ ಎಂದು ಮೆಸ್ಕಾಂ ಮಂಗಳೂರು ವಲಯದ ಸುಪರಿಟೆಂಡೆಂಟ್ ಎಂಜಿನಿಯರ್ ಮಂಜಪ್ಪ ಹೇಳಿದರು. ಅವರು ಇಲಾಖೆಯಿಂದ ಸಂಯೋಜಿಸಲಾದ ಮೂಲ್ಕಿ ಮೆಸ್ಕಾಂ ಉಪ ವಿಭಾಗದ ಗ್ರಾಹಕರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ವಿದ್ಯುತ್ ಕೊರತೆ ಇಲ್ಲ
ಮೆಸ್ಕಾಂ ತನ್ನ ಗ್ರಾಹಕರಿಗೆ ಸಾಕಾಗುವಷ್ಟು ಪ್ರಮಾಣದಲ್ಲಿ ವಿದ್ಯುತ್ ಹೊಂದಿದ್ದು ಯಾವುದೇ ರೀತಿಯ ಕೊರತೆ ಈ ಬಾರಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಂದಿನ ದಿನಗಳಲ್ಲಿ ಮೂಲ್ಕಿ ವಿಭಾಗದ ಗ್ರಾಹಕರಿಗೆ ಯಾವುದೇ ಅಡೆ ತಡೆ ಇಲ್ಲದೆ ವಿದ್ಯುತ್ ಒದಗಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
110 ಕೆ.ವಿ. ವಿತರಣೆ ಕೇಂದ್ರ
8 ವರ್ಷಗಳ ಹಿಂದೆ ನಿರ್ಮಿಸಲು ಉದ್ದೇಶಿಸಲಾಗಿದ್ದ 110 ಕೆ.ವಿ. ಮೂಲ್ಕಿ ವಿದ್ಯುತ್ ವಿತರಣೆ ಕೇಂದ್ರದ ಕಾಮಗಾರಿ ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸುವ ಹಂತದಲ್ಲಿದೆ ಎಂದರು. ಮಂಗಳೂರಿನ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಸತೀಶ್ಚಂದ್ರ ಅವರು ಇಲಾಖೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಿದರು.
ಗೆಲ್ಲು ತೆರವಿಗೆ ಸೂಚನೆ
ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರ ಗಿಡಗಳ ಗೆಲ್ಲುಗಳನ್ನು ತತ್‌ಕ್ಷಣದಿಂದ ಕಡಿದು ತೆರವುಗೊಳಿಸುವ ಮೂಲಕ ಯಾವುದೇ ತೊಂದರೆ ರಹಿತ ಸಂಪರ್ಕ ಒದಗಿಸುವಲ್ಲಿ ಎಸ್.ಇ. ಮಂಜಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮೂಲ್ಕಿ ಕಾರ್ನಾಡು ಕೈಗಾರಿಕಾ ಪ್ರದೇಶ ಉದ್ಯಮಿಗಳ ಸಂಘದ ಅಧ್ಯಕ್ಷ ಜಯ ಎನ್.ಶೆಟ್ಟಿ ಮತ್ತು ಕಾರ್ಯದರ್ಶಿ ಪ್ರಶಾಂತ್ ಕಾಂಚನ್ ಕೆಲವೊಂದು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಸುರತ್ಕಲ್ ಉಪ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಭಿಷೇಕ್ ಮತ್ತು ಮೂಲ್ಕಿ ಉಪ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಮಕೃಷ್ಣ ಐತಾಳ್ ಹಾಗೂ ಮೂಲ್ಕಿ ಸೆಕ್ಷನ್ ಆಫೀಸರ್ ವಿವೇಕನಂದ ಶೆಣೈ ಉಪಸ್ಥಿತರಿದ್ದರು.
ಸಿಬಂದಿ ನೇಮಿಸಿ
ಬಿಲ್ ಪಾವತಿ ಕೌಂಟರ್‌ನಲ್ಲಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸಿ ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಿ ಎಂದು ಗ್ರಾಹಕರು ಒತ್ತಾಯಿಸಿದರು. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜತೆಗೆ ಮೂಲ್ಕಿ ಉಪ ವಿಭಾಗಕ್ಕೆ ಬಂದು ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯಕ್ರಮವನ್ನು ನಡೆಸುವುದಾಗಿ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.