“ವಿದ್ಯಾರ್ಥಿ ಜೀವನದಲ್ಲಿ ಶಿಸ್ತು,ಸಾಮತ್ಯೆ ಬೆಳೆಸಿಕೊಳ್ಳಿ ’
ಸುವರ್ಣ ಸಂಸ್ಕೃತಿ ವಾರ್ಷಿಕ ದಿನಾಚರಣೆ
Team Udayavani, Apr 14, 2019, 6:25 AM IST
ಮಹಾನಗರ: ನಗರದ ಮೀನುಗಾರಿಕೆ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆಯನ್ನು ಇತ್ತೀ ಚೆಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿ ಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ನರೇಂದ್ರ ಎಲ್. ನಾಯಕ್,ಇಂದಿನ ಯುವ ಜನಾಂಗದವರು ವ್ಯಾಸಂಗದಲ್ಲಿ ಆಸಕ್ತಿ ತೋರಿಸಿ ವಿದ್ಯಾಬ್ಯಾಸದ ಜತೆಗೆ ಶಿಸ್ತು ಮತ್ತು ಸಾಮ್ಯತೆಯನ್ನು ಬೆಳೆಸಿ ಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ಸಲ್ಲಿಸುವ ಪ್ರಾಮುಖ್ಯವನ್ನು ಯುವ ಪೀಳಿಗೆಯಲ್ಲಿರಬೇಕು ಎಂದರು.
ಕಾಲೇಜು,ಬಹುತೇಕ ಮಹನೀ ಯರನ್ನು ಪಾಠ ಕಲಿಸಿದೆ ಮತ್ತು ಅನೇಕ ಪದವೀಧರರು ಉನ್ನತ ಸ್ಥಾನದಲ್ಲಿ ರುವುದನ್ನು ಸಾಬೀತುಪಡಿಸಿದೆ. ವ್ಯಾಸಂಗದ ಜತೆ ಸಂಶೋಧನೆಅತೀ ಮುಖ್ಯವಾದುದು ಮತ್ತು ಇಂತಹ ಸಂಸ್ಥೆಗಳಿಂದ ಪದವಿ ಗಳಿಸಬೇಕಾದರೆ, ಸಂಶೋಧನೆಯ ಪ್ರವೃತ್ತಿ ಬೆಳೆಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂದರು.
ವಿದ್ಯಾರ್ಥಿ ಜೀವನ ದೇವರ ಕೊಟ್ಟ ವರ
ಅಧ್ಯಕ್ಷತೆ ವಹಿಸಿದ್ದ ಡೀನ್ ಡಾ| ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ವಿದ್ಯಾರ್ಥಿ ಜೀವನ ನಮಗೆಲ್ಲರಿಗೂ ಆ ದೇವರು ಕೊಟ್ಟ ವರ ಮತ್ತು ಮರೆಯಲಾಗದಂಥಹ ಸಮಯ. ಅದೇ ರೀತಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದ ರೂಪುರೇಖೆಗಳನ್ನು ರಚಿಸುವರೇ ಆದರೆ ಅದು ಇಂತಹ ಕಾಲೇಜು ಮಟ್ಟದಲ್ಲಿ ಸಾಧ್ಯ ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಡಾ| ಇ.ಜಿ. ಜಯರಾಜ್, ಡಾ| ಶಿವಕುಮಾರ್ ಎಂ., ಡಾ| ಲಕ್ಷಿ$¾àಪತಿ ಎಂ.ಟಿ., ಡಾ| ಮಾನ್‌ಸಿಂಗ್ ನಾಯ್ಕ, ಡಾ| ಕುಮಾರ್ ನಾಯ್ಕ ಎ.ಎಸ್., ಡಾ| ಅಣ್ಣಪ್ಪಸ್ವಾಮಿ ಟಿ.ಎಸ್., ಡಾ| ಅಭಿಮಾನ್ ಮತ್ತು ಡಾ| ಅಜಯ್ ಎಸ್.ಕೆ., ವಿದ್ಯಾರ್ಥಿ ಮುಂದಾಳು ಆದಿಲ್ ಮೊದಲಾದವರು ಉಪಸ್ಥಿತರಿದ್ದರು.
ಸಿಬಂದಿ ಸಲಹೆಗಾರರಾದ ಮನೋಜ್ ಕುಮಾರ್ ಆಟೋಟ ಸ್ಪರ್ಧೆಗಳನ್ನು ನಡೆಸಿದ ವರದಿಯನ್ನು ಮಂಡಿಸಿದರು. ಡಾ| ಸುರೇಶ್ ಟಿ. ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ತೃತಿಯ ಬಿ.ಎಫ್.ಎಸ್ಸಿ. ವಿದ್ಯಾರ್ಥಿ ಗಳಾದ ವೇವ್ ರೈಡರ್ಸ್ ಕಾಲೇಜಿನ ವಾರ್ಷಿಕ ದಿನಾಚರಣೆಯ ನಾಮಾಂಕಿ ತವಾದ ಸ್ವರ್ಣ ತರಂಗದ ಮುಖ್ಯ ಭೂಮಿಕೆಯನ್ನು ವಹಿಸಿದ್ದರು.
ವಿಜೇತರು
ದ್ವಿತೀಯ ಬಿ.ಎಫ್.ಎಸ್ಸಿ.ಯ ವಿದ್ಯಾ ರ್ಥಿಗಳು ಸಾಂಸ್ಕೃತಿಕ, ಆಟೋಟ ಸ್ಪರ್ದೆಗಳಲ್ಲಿ ಮೊದಲ ವಿಜೇತರರಾಗಿ ಬಹುಮಾನ ಸ್ವೀಕರಿಸಿದರೆ, ತೃತೀಯ ಬಿ.ಎಫ್.ಎಸ್ಸಿ. ವಿದ್ಯಾರ್ಥಿಗಳು ದ್ವಿತೀಯ ವಿಜೇತರಾಗಿ ಬಹುಮಾನ ಸ್ವೀಕರಿಸಿದರು.ವಿದ್ಯಾರ್ಥಿನಿ ಪೂರ್ಣಾ ಶ್ರೀ ಮತ್ತು ವಿದ್ಯಾರ್ಥಿ ಪುನೀತ್ ಕುಮಾರ್ ನಿರೂಪಿಸಿದರು. ನಿರ್ಮಿತಾ ಉಚ್ಚಿಲ್ ವಂದಿಸಿದರು.
ಬಹುಮಾನ ವಿತರಣೆ
ಸಾಂಸƒತಿಕ ಮತ್ತು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕಾಲೇಜಿನ ಸಿಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ವೇಳೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ, ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.