ಸಂಪರ್ಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ‘ಸರ್ಕಲ್‌’ಗಳೇ ಅಡ್ಡಿ


Team Udayavani, Sep 20, 2018, 10:20 AM IST

20-sepctember-2.jpg

ಸುಳ್ಯ : ನಗರದ ಮಧ್ಯ ಭಾಗದಲ್ಲಿ ಹಾದು ಹೋಗುವ ಮಾಣಿ-ಮೈಸೂರು ಹೆದ್ದಾರಿಯಿಂದ ಕವಲೊಡೆದು ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ತಿರುವು ರಸ್ತೆಗಳಲ್ಲಿ ಸರ್ಕಲ್‌ (ವೃತ್ತ) ಅವ್ಯವಸ್ಥೆ ಸಂಚಾರಕ್ಕೆ ಸಂಕಟ ತಂದೊಡ್ಡಿದೆ. ನಗರದೊಳಗೆ ಹಲವು ಭಾಗಕ್ಕೆ ಸಂಪರ್ಕಿಸುವ ಸಂದರ್ಭದಲ್ಲಿ ಸೂಕ್ತ ಸರ್ಕಲ್‌ ಇಲ್ಲದೆ ವಾಹನಗಳು, ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ. ಸಿಗ್ನಲ್‌ ಸಹಿತ ಸುರಕ್ಷಿತ ಕ್ರಮ ಅನುಷ್ಠಾನಿಸಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ.

ಸರ್ಕಲ್‌ ಸಮಸ್ಯೆ
ಮಡಿಕೇರಿಗೆ ಪರ್ಯಾಯ ಮಾರ್ಗವಾಗಿರುವ ಸುಳ್ಯ – ಆಲೆಟ್ಟಿ – ಭಾಗಮಂಡಲ – ಮಡಿಕೇರಿ ರಸ್ತೆ ನಗರದ ಗಾಂಧಿನಗರ ಮುಖ್ಯ ರಸ್ತೆಯಿಂದ ತಿರುವು ಪಡೆದುಕೊಳ್ಳುತ್ತದೆ. ಪ್ರಸ್ತುತ ಕೆಎಸ್‌ ಆರ್‌ಟಿಸಿ ಬಸ್‌ ಸಹಿತ ಹಲವು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಇಲ್ಲಿ ವೃತ್ತ ಇಲ್ಲದೆ ತಿರುವಿನಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ನಗರದ ಹೃದಯ ಭಾಗದಿಂದ ಜೂನಿಯರ್‌ ಕಾಲೇಜು, ತಾ.ಪಂ. ಸಹಿತ ಹಲವು ಸರಕಾರಿ ಕಚೇರಿಗಳಿಗೆ ಸಂಪರ್ಕ ರಸ್ತೆಯಲ್ಲಿ ಸರ್ಕಲ್‌ ಇಲ್ಲ. ಸರಕಾರಿ ಬಸ್‌, ಖಾಸಗಿ ವಾಹನಗಳು ಗರಿಷ್ಠ ಸಂಖ್ಯೆಯಲ್ಲಿ ಸಂಚರಿಸುವ ಮುಖ್ಯ ರಸ್ತೆಯಿಂದ ಈ ರಸ್ತೆ ತಿರುವು ಪಡೆದುಕೊಳ್ಳುತ್ತದೆ. ಪ್ರತಿ ದಿನ ಇಲ್ಲಿ ಸಂಚಾರ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತ ಇಲ್ಲದೆ ಆಗಾಗ್ಗೆ ಸಾಲು ವಾಹನ ನಿಲುಗಡೆ ಸಮಸ್ಯೆ ತಪ್ಪಿಲ್ಲ.

ಮಾರ್ಗಸೂಚಿ ಇಲ್ಲ
ಬೆಳ್ಳಾರೆ, ಸುಬ್ರಹ್ಮಣ್ಯ ಭಾಗದಿಂದ ನಗರವನ್ನು ಪ್ರವೇಶಿಸುವ ಪೈಚಾರು ಬಳಿ ಮಾರ್ಗಸೂಚಿ ವ್ಯವಸ್ಥೆ ಇಲ್ಲ. ಮೂರು ದಿಕ್ಕುಗಳಿಂದ ವಾಹನಗಳು ಏಕಾಏಕಿ ಪ್ರವೇಶಿಸುತ್ತವೆ. ಜ್ಯೋತಿ ಆಸ್ಪತ್ರೆ ತಿರುವು ಬಳಿ ಸರ್ಕಲ್‌ ಇದೆ. ಶಾಲೆ, ಆಸ್ಪತ್ರೆ ಸನಿಹದಲ್ಲಿರುವ ಕಾರಣ ಬೆಳಗ್ಗೆ ಹೊತ್ತು ಟ್ರಾಫಿಕ್‌ ಸಮಸ್ಯೆ ಇದ್ದದ್ದೆ. ಜಟ್ಟಿಪಳ್ಳ ತಿರುವು ಬಳಿ ಹೈಮಾಸ್ಟ್‌ ದೀಪದ ಕಂಬ ಇದ್ದರೂ ರಸ್ತೆಯ ಕೇಂದ್ರ ಭಾಗದಲ್ಲಿ ಇಲ್ಲದೆ ಪ್ರಯೋಜನಕ್ಕಿಲ್ಲದಂತಾಗಿದೆ.

ಅಧಿಕೃತ ಸರ್ಕಲ್‌ 4 ಮಾತ್ರ..!
ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ ಅಧಿಕೃತ ಸರ್ಕಲ್‌ಗ‌ಳ ಸಂಖ್ಯೆ 4. ಕುರುಂಜಿ, ವಿವೇಕಾನಂದ, ಚೆನ್ನಕೇಶವ, ಶಾಸ್ತ್ರಿ ವೃತ್ತಗಳು. ಇವುಗಳ ಅಭಿವೃದ್ಧಿಗೆ ನ.ಪಂ. ಯಾವುದೇ ಯೋಜನೆ ರೂಪಿಸಿಲ್ಲ. ಇವುಗಳಲ್ಲದೆ ನಗರದ ವಿವಿಧ ಭಾಗದಲ್ಲಿ ಸರ್ಕಲ್‌ ನಿರ್ಮಾಣ ಅಗತ್ಯವಿರುವ ತಿರುವುಗಳಿವೆ. ಅವುಗಳ ಸುಧಾರಣೆಗೆ ನ.ಪಂ. ಮುಂದಾಲೋಚನೆ ಮಾಡಬೇಕಿದೆ.

ಸಂಚಾರ ಠಾಣೆಯಿಲ್ಲ
ಸಂಚಾರ ನಿಯಂತ್ರಣಕ್ಕೆ ಅಗತ್ಯವಾಗಿ ಇರಬೇಕಾಗಿದ್ದ ಸಂಚಾರ ಠಾಣೆಯೇ ಇಲ್ಲಿಲ್ಲ. ಹಾಗಾಗಿ ನಗರ ಠಾಣಾ ಪೊಲೀಸರು, ಗೃಹರಕ್ಷಕ ಸಿಬಂದಿಗೆ ನಿಯಂತ್ರಣ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಗೊಳ್ಳಲಿರುವ ಮಾಣಿ-ಮೈಸೂರು ರಸ್ತೆ ಹಾದು ಹೋಗಿರುವ ತಾಲೂಕಿನಲ್ಲಿ ಬೆಂಗಳೂರು, ಮೈಸೂರು, ಕೊಡಗು ಹಾಗೂ ಕೇರಳ ರಾಜ್ಯಗಳಿಂದ ನೂರಾರು ವಾಹನಗಳು ಸಂಚರಿಸುತ್ತಿವೆ.

ರಸ್ತೆ ದಾಟುವುದೇ ಸವಾಲು
ಜ್ಯೋತಿ ಸರ್ಕಲ್‌, ಜೂನಿಯರ್‌ ಕಾಲೇಜು ತಿರುವು ರಸ್ತೆ, ಗಾಂಧಿನಗರ ತಿರುವು ಬಳಿ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟುತ್ತಾರೆ. ಬೆಳಗ್ಗೆ, ಸಂಜೆ ವೇಳೆ ರಸ್ತೆ ದಾಟುವ ಸಂದರ್ಭದಲ್ಲಿ ಯಾವುದೇ ಸುರಕ್ಷಿತ ಕ್ರಮಗಳು ಇಲ್ಲಿಲ್ಲ. ವಾಹನಗಳ ನಡುವೆ ನುಸುಳಿಕೊಂಡು ರಸ್ತೆ ದಾಟುವ ದೃಶ್ಯಗಳು ಕಂಡು ಬರುತ್ತವೆ. ಇಲ್ಲಿ ವಾಹನ/ಪಾದಚಾರಿ ಸಂಚಾರಕ್ಕೆ ನಿಯಮಗಳು ಇಲ್ಲ. ಬೆರಳೆಣಿಕೆಯ ಸಂಚಾರಿ ಸಿಬಂದಿಗೆ ಸಂಚಾರ ನಿಯಂತ್ರಣ ಸವಾಲೆನಿಸಿದೆ.

ಪ್ರಮುಖ ಸಂಪರ್ಕ ರಸ್ತೆಗಳು
. ಪೈಚಾರು-ಸೋಣಗೇರಿ ರಸ್ತೆ ( ಮೂರು ಮಾರ್ಗ)
. ಶಾಸ್ತ್ರಿ ವೃತ್ತ-ಚರ್ಚ್‌ ಶಾಲೆ ರಸ್ತೆ (ನಾಲ್ಕು ಮಾರ್ಗ)
. ಜಟ್ಟಿಪಳ್ಳ-ಕೊಡಿಯಾಲಬೈಲು ರಸ್ತೆ (ಮೂರು ಮಾರ್ಗ)
. ಶ್ರೀರಾಂಪೇಟೆ-ಜೂನಿಯರ್‌ ಕಾಲೇಜು ರಸ್ತೆ (ಮೂರು ಮಾರ್ಗ)
. ಗಾಂಧಿನಗರ-ನಾಗಪಟ್ಟಣ ರಸ್ತೆ (ಮೂರು ಮಾರ್ಗ)

ಬೇಡಿಕೆ ಬಂದಿಲ್ಲ
ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ನಾಲ್ಕು ಸರ್ಕಲ್‌ಗ‌ಳು ಇವೆ. ಬೇರೆ ಬೇಡಿಕೆ ಬಂದಿಲ್ಲ. ವೈಯಕ್ತಿಕವಾಗಿ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿಲ್ಲ. ಪ್ರತ್ಯೇಕವಾಗಿ ಮಾಸ್ಟರ್‌ ಪ್ಲಾನ್‌ ರೂಪಿಸುವ ಸಂದರ್ಭದಲ್ಲಿ ನಿರ್ದಿಷ್ಟ ನಿಯಮಾನುಸಾರ ಅಭಿವೃದ್ಧಿ ಮಾಡಬಹುದಾಗಿದೆ.
 – ಶಿವಕುಮಾರ್‌
 ಸುಳ್ಯ ನ.ಪಂ. ಎಂಜಿನಿಯರ್‌

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.