ಜಿಲ್ಲಾ ಉಸ್ತುವಾರಿ ಸಚಿವರಿಂದ ಡಾ| ಚಿದಾನಂದ ಭೇಟಿ
Team Udayavani, Dec 7, 2017, 2:19 PM IST
ಸುಳ್ಯ : ಸುಳ್ಯ ನ.ಪಂ. ಆಡಳಿತ ಗಿಡ ನಾಶಗೊಳಿಸಿದ ಕ್ರಮದಿಂದ ಬೇಸತ್ತು ಸ್ವತ್ಛತಾ ರಾಯಭಾರಿ ಸ್ಥಾನಕ್ಕೆ ರಾಜೀನಾಮೇ ನೀಡಿದ್ದ ಡಾ| ಕೆ.ವಿ. ಚಿದಾನಂದ ಅವರ ಮನೆಗೆ ಮಂಗಳವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದಾರೆ.
ಈ ಸಂದರ್ಭ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ವೆಂಕಪ್ಪ ಗೌಡರು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರಲ್ಲದೆ, ಸಮಾನ ಮನಸ್ಕ ಸಂಘಟನೆಗಳಿಂದ ಡಿ. 12ರಂದು ಬಂಟ್ವಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ‘ಸಾಮರಸ್ಯನಡಿಗೆ ಸೌಹಾರ್ದ ಕಡೆಗೆ’ ಪಾಲ್ಗೊಳ್ಳುವಂತೆಯೂ ಮನವಿ ಮಾಡಿದರು.
ಸಾಮರಸ್ಯವೇ ಧ್ಯೇಯ
ಮನವಿಗೆ ಪ್ರತಿಕ್ರಿಯಿಸಿದ ಡಾ| ಕೆ.ವಿ. ಚಿದಾನಂದ ಅವರು, ಹಿಂದೆ ನ.ಪಂ. ಕಸದ ರಾಶಿ ತಮ್ಮ ಮನೆಯಂಗಳಕ್ಕೆ ಬಿದ್ದು ತೊಂದರೆ ಆಗುತ್ತಿದ್ದ ಕುರಿತು ತಿಳಿಸಿದ್ದರೂ ಪಂಚಾಯತ್ ಆಡಳಿತ ಸ್ಪಂದಿಸಿರಲಿಲ್ಲ. ನ.ಪಂ. ನಡೆದುಕೊಂಡ ರೀತಿ ಬೇಸರ ತರಿಸಿದೆ ಎಂದು ವಿವರಿಸಿದರು. ಸಾಮರಸ್ಯವೇ ನಮ್ಮ ಧ್ಯೇಯ. ಸಾಮರಸ್ಯ ಕಾರ್ಯಕ್ರಮಕ್ಕೆ ನಮ್ಮ ಪೂರ್ಣ ಸಹಕಾರವಿದೆ ಎಂದರು.
ನ.ಪಂ. ಸದಸ್ಯ ಕೆ.ಎಂ. ಮುಸ್ತಫಾ ಮಾತನಾಡಿ, ಡಾ| ಚಿದಾನಂದ ಅವರು ಸಾಮರಸ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಈ ಸಂದರ್ಭ ಕೆಪಿಸಿಸಿ ಸದಸ್ಯ ಡಾ| ರಘು, ಕೆವಿಜಿ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ| ಲೀಲಾಧರ್, ಸಿಬಂದಿ ರಜತ್ ಅಡ್ಯಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸಹಾನುಭೂತಿ
ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ವೆಂಕಪ್ಪ ಗೌಡ ಅವರು, ಗಿಡ ನಾಶಗೊಳಿಸಿರುವುದರ ಹಿಂದೆ ನ.ಪಂ. ಆಡಳಿತದ ಕೈವಾಡವಿದೆ. ಬಿಜೆಪಿ ನ.ಪಂ. ಆಡಳಿತದ ಆವಶ್ಯಕ ಸಂದರ್ಭ ಡಾ| ಚಿದಾನಂದ ಅವರನ್ನು ಬಳಸಿಕೊಂಡು ಈಗ ಅವಮಾನಿಸುತ್ತಿರುವುದು ಖಂಡನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಎರಡೇ ದಿನದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿರುವುದು ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.