ಮರಳು ನಿಕ್ಷೇಪ ಪತ್ತೆಗೆ ‘ಡಾಟಾ ಮ್ಯಾಟ್ರಿಕ್ಸ್‌ ಯಂತ್ರ’ಬಳಕೆ 


Team Udayavani, Jul 10, 2018, 11:06 AM IST

10-july-5.jpg

ಮಹಾನಗರ: ಜಿಲ್ಲೆಯ ನದಿಯ ಪಾತ್ರದ ಯಾವ ಭಾಗದಲ್ಲಿ ಮರಳು ನಿಕ್ಷೇಪ(ದಿಣ್ಣೆ)ವಿದೆ ಎಂಬುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿಗಳು ಈ ಹಿಂದೆ ಬೋಟ್‌ನಲ್ಲಿ ತೆರಳಿ ಜಿಪಿಎಸ್‌ ಸಹಾಯದಿಂದ ಪತ್ತೆ ಹಚ್ಚುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ವೈಜ್ಞಾನಿಕ ಸರ್ವೆ ನಡೆಸಿ, ಅತ್ಯಾಧುನಿಕ ತಂತ್ರಜ್ಞಾನದಡಿ ಮರಳು ದಿಣ್ಣೆಗಳನ್ನು ಪತ್ತೆ ಮಾಡಲು ವಿನೂತನ ‘ಡಾಟಾ ಮ್ಯಾಟ್ರಿಕ್ಸ್‌ ಯಂತ್ರ’ ಬಳಕೆಗೆ ಜಿಲ್ಲಾಡಳಿತ ತೀರ್ಮಾನಿಸಿದೆ.

ಇದರಿಂದ ಒಂದು ಕಡೆ ಗ್ರಾಹಕರಿಗೆ ಗುಣಮಟ್ಟದ ಮರಳು ಲಭ್ಯವಾದರೆ, ಅತ್ತ ನದಿ, ಭೂಮಿ ಸೇರಿದಂತೆ ಪರಿಸರಕ್ಕೂ ಹೆಚ್ಚಿನ ರೀತಿಯಲ್ಲಿ ಹಾನಿಯಾಗದಂತೆ ಮರಳುಗಾರಿಕೆ ನಡೆಸುವುದಕ್ಕೆ ಸಹಾಯವಾಗುತ್ತದೆ. ಈಗ ಲಭ್ಯವಿರುವ ವ್ಯವಸ್ಥೆಯಡಿ ಗಣಿ ಇಲಾಖೆ ಅಧಿಕಾರಿಗಳು ಖುದ್ದು ನದಿ ದಡದಲ್ಲಿ ಸುತ್ತಾಡಿ ಎಲ್ಲಿ ಮರಳು ಹೇರಳವಾಗಿ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತದೆಯೋ ಅಂಥ ಜಾಗಗಳನ್ನು ಗುರುತಿಸಿ ಅಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಕೆಲವು ಕಡೆ ಮರಳು ಗಣಿಗಾರಿಕೆ ಶುರುವಾದ ಬಳಿಕವಷ್ಟೇ ಅಲ್ಲಿ ಸರಿಯಾದ ಮರಳು ದೊರೆಯದೆ ಪರವಾನಿಗೆ ಪಡೆದವರಿಗೆ ಸಮಸ್ಯೆ ಎದುರಾಗುವ ಜತೆಗೆ ಪ್ರಾಕೃತಿಕವಾಗಿಯೂ ಸಾಕಷ್ಟು ನಷ್ಟ ಸಂಭವಿಸುತ್ತಿದೆ. ಇದೆಲ್ಲವನ್ನು ತಪ್ಪಿಸುವುದಕ್ಕೆ ಹೊಸ ಮಾದರಿ ತಂತ್ರಜ್ಞಾನ ಬಳಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಏನಿದು ಡಾಟಾ ಮ್ಯಾಟ್ರಿಕ್‌ ಯಂತ್ರ?
‘ಡಾಟಾ ಮ್ಯಾಟ್ರಿಕ್ಸ್‌ ಯಂತ್ರ’ದ ಮುಖೇನ ನದಿಯ ನೀರಿನ ಪ್ರಮಾಣ, ನದಿಯ ಆಳ, ಅಲ್ಲಿರುವ ಮರಳಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಸರ್ವೆ ನಡೆಸಲು ಸಾಧ್ಯವಾಗುತ್ತದೆ. ಎಷ್ಟು ಆಳದಲ್ಲಿ ಮರಳು ಇದೆ, ಆ ಮರಳು ಯಾವ ಗ್ರೇಡ್‌ನ‌ದ್ದು ಹಾಗೂ ಮರಳು ಮಣ್ಣು ಮಿಶ್ರಿತವಾಗಿದೆಯೇ ಎಂಬಿತ್ಯಾದಿ ವಿಚಾರಗಳನ್ನು ವೈಜ್ಞಾನಿಕ ದಾಖಲೆಯ ಮೂಲಕ ಪಡೆದುಕೊಳ್ಳಬಹುದು.

ಸದ್ಯ ಎಲ್‌ಎನ್‌ಟಿ ಸಂಸ್ಥೆಯು ಕರಾವಳಿ ಭಾಗದಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಬಳಕೆಗೆ ಆವಶ್ಯವಿರುವ ಮರಳನ್ನು ‘ಡಾಟಾ ಮ್ಯಾಟ್ರಿಕ್ಸ್‌ ಯಂತ್ರ’ದ ಮೂಲಕವೇ ಪತ್ತೆ ಮಾಡಿತ್ತು. ಕಾರವಾರ, ಮಂಗಳೂರು ಬಂದರು ಇಲಾಖೆಯಲ್ಲೂ ಈ ಯಂತ್ರವನ್ನು ಬೇರೆ ಬೇರೆ ಸಂದರ್ಭ ಬಳಸಲಾಗುತ್ತಿದೆ. ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ಸಂಸ್ಥೆಯಲ್ಲಿ ಇದೇ ಯಂತ್ರದ ಸಹಾಯ ಪಡೆಯಲಾಗುತ್ತಿದೆ. ಕೇಂದ್ರ ಸರಕಾರದ ಬೃಹತ್‌ ಯೋಜನೆಗಳಿಗೆ ಸಂಬಂಧಿಸಿ ಸರ್ವೆ ನಡೆಸಲು ಇದೇ ಯಂತ್ರವನ್ನು ಬಳಸಲಾಗುತ್ತಿದೆ.

21 ಮರಳು ದಿಣ್ಣೆ ಇತ್ತು
2017ರ ಸಾಲಿನಲ್ಲಿ ಮರಳುಗಾರಿಕೆ ಪರವಾನಿಗೆಗೆ ಮುಕ್ತ ಅರ್ಜಿ ಆಹ್ವಾನಕ್ಕೆ ಅವಕಾಶ ನೀಡಲಾಗಿತ್ತು. 1,340 ಅರ್ಜಿಗಳು ಬಂದಿದ್ದವು. ಸಾಂಪ್ರದಾಯಿಕ ಮರಳುಗಾರರು ಮಾತ್ರವಲ್ಲದೆ ಇತರರೂ ಕೂಡ ಅರ್ಜಿ ಸಲ್ಲಿಸಿದ್ದರು. ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ 1 ವರ್ಷದ ಅವಧಿಗೆ 21 ಮರಳು ದಿಣ್ಣೆಗಳಲ್ಲಿ 92 ಮಂದಿ (ಪ್ರಥಮ ಹಂತದಲ್ಲಿ 41 ಮತ್ತು ದ್ವಿತೀಯ ಹಂತದಲ್ಲಿ 51ಮಂದಿ)ಗೆ ಮರಳುಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಪರವಾನಿಗೆ ಜೂ. 14ಕ್ಕೆ ಅಂತಿಮಗೊಂಡಿದೆ. ಮುಂದಿನ ಬಾರಿ ಹೊಸ ತಂತ್ರಜ್ಞಾನ ಮುಖೇನ ದಿಣ್ಣೆಗಳನ್ನು ಗುರುತಿಸಿದ ಬಳಿಕ ಅರ್ಜಿ ಆಹ್ವಾನ ಪ್ರಕ್ರಿಯೆ ನಡೆಯಲಿದೆ.

ಸಾಂಪ್ರದಾಯಿಕ ಮರಳುಗಾರಿಕೆ ಅವಕಾಶ
ಮುಂದಿನ ಅವಧಿಗೆ ಸಾಂಪ್ರದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶ ನೀಡಲು ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದು, ಇದಕ್ಕೆ ಕೆಲವೊಂದು ಕಠಿನ ನಿಯಮ ಪಾಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಕನಿಷ್ಠ 5 ವರ್ಷ ಅಥವಾ ಹೆಚ್ಚು ವರ್ಷಗಳ ಕಾಲ ನಿರಂತರವಾಗಿ ಮರಳುಗಾರಿಕೆಯನ್ನು ನಡೆಸಿಕೊಂಡು ಬಂದಿರುವವರಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತನೆಯಿದ್ದು ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮರಳುಗಾರಿಕೆ; 2 ತಿಂಗಳ ರಜೆ
ನದಿ ಮೀನುಗಳ ಸಂತನೋತ್ಪತ್ತಿ ಉದ್ದೇಶದಿಂದ ಜೂ. 12ರಿಂದ ಎರಡು ತಿಂಗಳ ಕಾಲ (ಆ. 14) ಸಿಆರ್‌
ಝಡ್‌ ಮತ್ತು ನಾನ್‌ ಸಿಆರ್‌ ಝಡ್‌ನ‌ಲ್ಲಿ ಮರಳುಗಾರಿಕೆಗೆ ನಿಷೇಧಿಸಲಾಗಿದ್ದು, ನದಿಯಲ್ಲಿ ಯಾವುದೇ ಕಾರಣಕ್ಕೂ
ಮರಳುಗಾರಿಕೆ ಮತ್ತು ಮರಳು ಸಾಗಾಟ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ. ಎರಡು ತಿಂಗಳ ಬಳಿಕ ಮರಳುಗಾರಿಕೆ ಆರಂಭಿಸಲು ಮರಳು ಸಾಗಾಟಗಾರರು ಹೊಸ ಪರವಾನಿಗೆ ಪಡೆಯಬೇಕಾಗಿದೆ. 

ಡಾಟಾ ಮ್ಯಾಟ್ರಿಕ್ಸ್‌ ಯಂತ್ರಕ್ಕೆ ಟೆಂಡರ್‌
ವೈಜ್ಞಾನಿಕ ಆಧಾರದಲ್ಲಿ ಮರಳುಗಾರಿಕೆ ದಿಣ್ಣೆಗಳ ಸರ್ವೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದು, ಇದರಂತೆ ‘ಡಾಟಾ ಮ್ಯಾಟ್ರಿಕ್ಸ್‌ ಯಂತ್ರ’ ತರಿಸಿಕೊಂಡು ದಿಣ್ಣೆಗಳ ಪತ್ತೆ ಹಚ್ಚಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟೆಂಡರ್‌ ಕರೆದು ಪ್ರಕ್ರಿಯೆ ನಡೆಸಲಾಗುವುದು. ದಿಣ್ಣೆಗಳ ಗುರುತು ಆದ ಬಳಿಕ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವವರಿಂದ ಅರ್ಜಿ ಆಹ್ವಾನಿಸಲಾಗುವುದು.
– ನಿರಂಜನ್‌,
ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ

ವಿಶೇಷ ವರದಿ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.