‘ಕ್ರಮಬದ್ಧವಾದ ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ’


Team Udayavani, Dec 25, 2018, 1:45 AM IST

hainugarike-24-12.jpg

ಕೊಕ್ಕಡ : ದ.ಕ. ಜಿ.ಪಂ., ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು, ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು ಇದರ ವತಿಯಿಂದ ಗ್ರಾ.ಪಂ. ಪಟ್ರಮೆ, ಆಡಳಿತ ಮಂಡಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪಟ್ರಮೆ ಅನಾರು, ಹಾಲು ಉತ್ಪಾದಕರ ಸ.ಸಂಘ ಅನಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನಾರು ಪಟ್ರಮೆ, ರಾಜ್ಯ ಸರಕಾರಿ ನೌಕರರ ವಿವಿದ್ದೋದ್ದೇಶ ಸ.ಸಂಘ ನಿ. ಬೆಳ್ತಂಗಡಿ, ದ.ಕ. ಸ. ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು, ಮೊದಲಾದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲಾ ಮಟ್ಟದ ಜಾನುವಾರು ಜಾತ್ರೆ ಮತ್ತು ಜಾನುವಾರು/ ಕರುಗಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ ಹಾಗೂ ವಿಚಾರಗೋಷ್ಠಿಯು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಗ್ರಾಮೀಣ ಪ್ರದೇಶದ ಕೃಷಿಕರಿಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ. ಗ್ರಾಮೀಣ ಭಾಗದ ಜನರು ಹೈನುಗಾರಿಕೆ ಯಲ್ಲಿ ಹೊಸದಾಗಿ ಬಂದಿರುವ ಉಪಕರಣ ಗಳು ಹಾಗೂ ಸರಿಯಾದ ಮಾಹಿತಿ ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸುವಂತಾಗಲಿ ಎಂದರು. ಸ್ಥಳೀಯರಿಂದ ಬಂದ ಬೇಡಿಕೆಗಳಿಗೆ ಉತ್ತರಿಸಿದ ಅವರು, ಪಟ್ರಮೆಯ ಪ್ರಮುಖ ಸಂಪರ್ಕ ರಸ್ತೆಗೆ ಈಗಾಗಲೇ 8 ಕೋಟಿ ರೂ. ಪ್ರಸ್ತಾವನೆ ಕಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಂಜೂರಾತಿಯಾಗಬಹುದು ಎಂದರು. ಅನಾರು ಸರಕಾರಿ ಶಾಲೆಯ ದುಸ್ಥಿತಿ ಬಗ್ಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸ್ಥಳೀಯರು ಮುತುವರ್ಜಿ ವಹಿಸಬೇಕು. ಪ್ರಸ್ತುತ ಕೊಠಡಿಗಳ ಕೊರತೆಯಿಂದಾಗಿ ಊರವರು ದಾನಿಗಳ ನೆರವಿನಿಂದ ನಿರ್ಮಿ ಸುತ್ತಿರುವ 20 ಲಕ್ಷ ರೂ. ವೆಚ್ಚದ ಸಭಾಂಗಣಕ್ಕೆ 2 ಲಕ್ಷ ರೂ. ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ಹೈನುಗಾರಿಕೆ ಲಾಭದಾಯಕ
ಬೆಳಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಶ್ರೀ ವಿಲಿಯಂ ಲೋಬೋ ಕರಾಯ ಅವರು ಆಧುನಿಕ ಲಾಭದಾಯಕ ಹೈನುಗಾರಿಕಾ ಅನುಭವ ವಿಷಯದ ಬಗ್ಗೆ ಮಾತನಾಡಿ, ಉತ್ತಮ ಮಟ್ಟದ ರಾಸುಗಳ ಆಯ್ಕೆ, ಹಾಲು ಉತ್ಪಾದಕರ ಸಂಘವು ನೀಡುತ್ತಿರುವ ಹಿಂಡಿಗಳ ಸರಿಯಾದ ಪ್ರಮಾಣದ ಬಳಕೆ, ಹೈನುಗಾರಿಕೆಯ ಉಪ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಕೃಷಿಯಲ್ಲಿ ತೊಡಗಿ ಸುವಿಕೆ ಮೊದಲಾದ ಕ್ರಮಬದ್ಧವಾದ ರೀತಿ ಯಲ್ಲಿ ಹೈನುಗಾರಿಕೆ ನಡೆಸುವುದರಿಂದ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ ಎಂದರು.

ಪಶು ವೈದ್ಯಾಧಿಕಾರಿ ಡಾ| ಮನೋಹರ ಉಪಾಧ್ಯಾಯ ಅವರು, ಜಾನುವಾರುಗಳಿಗೆ ಬರುವ ರೋಗಗಳ ತಡೆಗಟ್ಟುವಿಕೆಯಲ್ಲಿ ಸ್ಥಳೀಯ ನಾಟಿ ಔಷಧಿಗಳ ಬಗ್ಗೆ ಮಾಹಿತಿ ನೀಡಿ ಹಲವು ರೋಗಗಳಿಗೆ ಶಮನ ಮಾಡುವುದಕ್ಕಾಗಿ ಹಾಗೂ ರೋಗ ಬರದಂತೆ ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಪಟ್ರಮೆ ಗ್ರಾಮ ಪಂಚಾಯತ್‌ ಅಧ್ಯಕ್ಷ ನವೀನ್‌ ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ಡಾ| ಜಯಕೀರ್ತಿ ಜೈನ್‌ ಅವರ ಉಸ್ತುವಾರಿಯಲ್ಲಿ ಅನಾರು ಹಾಲು ಉತ್ಪಾದಕರ ಸ.ಸಂಘದ ಸದಸ್ಯರು, ಹಾಗೂ ಸ್ವ ಸಹಾಯ ಸಂಘಗಳ ಸ್ವಯಂ ಸೇವಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಭಾರೀ ಗಾತ್ರದ ಎಮ್ಮೆ, ಹಾಗೂ ಹಲವು ದೇಶೀ ಹಾಗೂ ಇನ್ನಿತರ ತಳಿಗಳ ರಾಸುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.

ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ನಿತೇಶ್‌ ಬಲ್ಲಾಳ್‌, ದ.ಕ.ಜಿ.ಸ. ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ. ಸತ್ಯನಾರಾಯಣ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇದರ ಉಪನಿರ್ದೇಶ‌ಕ ಡಾ| ಮೋಹನ್‌ ಎಸ್‌., ಪಶು ಸಂಗೋಪನ ಇಲಾಖೆ ಬೆಳ್ತಂಗಡಿ ಸಹಾಯಕ ನಿರ್ದೇಶಕ ಡಾ| ರತ್ನಾಕರ್‌ ಮಲ್ಯ, ಪಶು ಸಂಗೋಪನಾ ಇಲಾಖೆ ಸುಳ್ಯ ಉಪನಿರ್ದೇಶಕ ಡಾ| ಗುರುಮೂರ್ತಿ ಉಪಸ್ಥಿತರಿದ್ದರು. ಡಾ| ಮೋಹನ್‌ ಸ್ವಾಗತಿಸಿದರು. ರತ್ನಾಕರ ಮಲ್ಯ ವಂದಿಸಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು.

ಪ್ರದರ್ಶನ
ಜಾನುವಾರು ಜಾತ್ರೆಯಲ್ಲಿ 100ಕ್ಕೂ ಅಧಿಕ ವಿವಿಧ ತಳಿಯ ಜಾನುವಾರು ಹಾಗೂ ಕರುಗಳ ಪ್ರದರ್ಶನ ನಡೆಯಿತು. ಹೈನುಗಾರಿಕೆಗೆ ಸಂಬಂಧಪಟ್ಟ ಔಷಧ ಹಾಗೂ ಯಂತ್ರೋಪಕರಣಗಳು, ವಿವಿಧ ರೀತಿಯ ಹಿಂಡಿಗಳ ಮಳಿಗೆಗಳ ಪ್ರದರ್ಶನ ಕೂಡಾ ನಡೆಯಿತು. ಗ್ರಾಮೀಣ ಭಾಗದಲ್ಲಿ ನಡೆದ ಜಾನುವಾರು ಜಾತ್ರೆಗೆ ಜನರು ಕೂಡಾ ಉತ್ಸಾಹದಿಂದ ಭಾಗವಹಿಸಿ ಮಾಹಿತಿ ಪಡಕೊಂಡರು.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Bantwal: ಅಪಘಾತ; ಗಾಯಾಳು ಸಾವು

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

3(1

Sullia: ಬಸ್‌ ತಂಗುದಾಣ ನಿರ್ವಹಣೆಗೆ ನಿರಾಸಕ್ತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.