ನಾಳೆ ಚೆನ್ನಾವರದಲ್ಲಿ ಜಿಲ್ಲಾ ಮಟ್ಟದ ಜಾನಪದ ಕ್ರೀಡಾಕೂಟ
Team Udayavani, Aug 11, 2018, 12:30 PM IST
ಸವಣೂರು: ನೆಹರು ಯುವ ಕೇಂದ್ರ ಮಂಗಳೂರು, ತಾ| ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಆಶ್ರಯದಲ್ಲಿ 2ನೇ ವರ್ಷದ ಆಟಿದ ಕೂಟದ ಅಂಗವಾಗಿ ಜಿಲ್ಲಾ ಮಟ್ಟದ ಜಾನಪದ ಕ್ರೀಡಾಕೂಟವು ಪಾಲ್ತಾಡಿ ಗ್ರಾಮದ ಚೆನ್ನಾವರ ಕೆಸರು ಗದ್ದೆಯಲ್ಲಿ ಆ. 12ರಂದು ನಡೆಯಲಿದೆ.
ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರು ಗುತ್ತು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಹಿಸುವರು. ತುಳು ಸಾಹಿತಿ, ಬಾಳಿಲ ಪಿಡಿಒ ಚಂದ್ರಾವತಿ ರೈ ಪಾಲ್ತಾಡಿ ಆಟಿ ತಿಂಗಳ ವಿಶೇಷತೆ ಕುರಿತು ಉಪನ್ಯಾಸ ನೀಡುವರು.
ಅತಿಥಿಗಳಾಗಿ ಕಡಬ ನವಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕಿಶನ್ ಕುಮಾರ್ ರೈ, ಬೆಳ್ಳಾರೆ ಟೌನ್ ರೋಟರಿಕ್ಲಬ್‌ನ ನಿರ್ದೇಶಕ ವೆಂಕಪ್ಪ ಗೌಡ ನಾರ್ಕೋಡು, ಯುವ ಮುಂದಾಳು ಸಹಜ್ ರೈ ಬಳಜ್ಜ, ಚೆನ್ನಾವರ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷ ಸಿ.ಎ.ಕರೀಂ, ಭಾಗವಹಿಸಲಿದ್ದಾರೆ.
ಪ್ರತಿಭಾ ಪುರಸ್ಕಾರ
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಕೆಸರುಗದ್ದೆ ಓಟ, ತುಳು ಜಾನಪದ ಸ್ಪರ್ದೆ, ತುಳು ಪಾಡ್ದನ ಸ್ಪರ್ಧೆ ಮತ್ತು ಶಾಲಾ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ತುಳು ರಸಪ್ರಶ್ನೆ, ತುಳು ಭಾಷಣ, ಜಾನಪದ ಸ್ಪರ್ಧೆ, ನಿಧಿಶೋಧ ಸ್ಪರ್ಧೆಗಳು ನಡೆಯಲಿದೆ.
ವಿಶೇಷ ಖಾದ್ಯಗಳು
ಆಟಿತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡು ಮಧ್ಯಾಹ್ನ ‘ಆಟಿದ ತೆನಸ್, ವನಸ್’ ಸಹಭೋಜನ ನಡೆಯಲಿದೆ.
ಸಮಾರೋಪ
ಸಂಜೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ವಹಿಸಲಿದ್ದು, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ ಕೆರೆಮೂಲೆ ಬಹುಮಾನ ವಿತರಿಸಲಿದ್ದಾರೆ. ಅತಿಥಿಗಳಾಗಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಪ್ರಗತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ ಚೆನ್ನಾವರ, ಸವಣೂರು ಪ.ಪೂ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಯಾನಂದ ಮಾಲೆತ್ತಾರು ಮೊದಲಾದವರು ಉಪಸ್ಥಿತರಿರರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.