ಜಿಲ್ಲಾ ಯುವ ಸಮ್ಮೇ ಳನ, ಯುವ ಪ್ರಶಸ್ತಿ ಪ್ರದಾನ
Team Udayavani, Feb 18, 2018, 1:27 PM IST
ಪುತ್ತೂರು : ಯುವಜನತೆ ಸಶಕ್ತರಾಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರಗಳು ಅನೇಕ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಳ್ಳುತ್ತಿವೆ. ಇವುಗಳ ಸದುಪಯೋಗಪಡೆದುಕೊಂಡು ಯುವಕ -ಯುವತಿ ಸಂಘಗಳು ಗ್ರಾಮೀಣ ಮಟ್ಟದಿಂದಲೇ ಬಲವರ್ಧನೆಗೊಳ್ಳಬೇಕಾಗಿದೆ ಎಂದು ದ. ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ದ.ಕ. ಜಿಲ್ಲಾಡಳಿತ ಮಂಗಳೂರು, ದ.ಕ. ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ನಗರಸಭೆ ಪುತ್ತೂರು, ತಾ.ಪಂ. ಪುತ್ತೂರು, ದ.ಕ. ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುವ ಸಮ್ಮೇಳನ, ಕಾರ್ಯಾಗಾರ, ತರಬೇತಿ ಹಾಗೂ ಜಿಲ್ಲಾ ಮಟ್ಟದ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದರು.
ಯುವಸಮೂಹ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಅವರಲ್ಲಿ ನಾಯಕತ್ವ ಬೆಳೆಸುವ, ಸ್ಫೂರ್ತಿ ತುಂಬುವ ಕಾರ್ಯ ನಡೆಯಬೇಕು. ಪ್ರಧಾನಿ ಮೋದಿ ಅವರ ಕನಸಿನಂತೆ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಸ್ವಚ್ಛತೆಗೆ ಯುವಕ -ಯುವತಿ ಮಂಡಳಿಯ ಸದಸ್ಯರು ಆದ್ಯತೆ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಸಾಮಾಜಿಕ ಬದ್ಧತೆಯಿರಲಿ
ಅಧ್ಯಕ್ಷತೆ ವಹಿಸಿದ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಯುವಕ ಮಂಡಲವಾಗಲಿ ಅಥವಾ ಯುವತಿ ಮಂಡಲವಾಗಲಿ, ಯಾರು ಸಾಮಾಜಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾರೋ ಅವರಿಗೆ ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಯುವಜನತೆಯಲ್ಲಿ ಶಕ್ತಿ ಇದೆ. ಆದರೆ ಆ ಶಕ್ತಿಯನ್ನು ಸಮಾಜಕ್ಕೆ ಒಳಿತು ಮಾಡಲು ಉಪಯೋಗಿಸಬೇಕು ಎಂದರು.
ದ.ಕ. ಜಿ.ಪಂ. ಶಿಕ್ಷಣ, ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಶುಭಹಾರೈಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಭೇಟಿ ನೀಡಿ ಶುಭಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ಸಂತ ಫಿ ಲೋಮಿನಾ ಕಾಲೇಜಿನ ರಂಗ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಮತ್ತು ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹಾ, ತಾಲೂಕು ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್ ಎಂ., ಸುಳ್ಯ ತಾಲೂಕಿನ ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಮೊದಲಾದವರು ಪಾಲ್ಗೊಂಡರು.
ದ. ಕ. ಜಿಲ್ಲೆಯ ಯುವಸಬಲೀಕರಣ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರವೀಣ್ ಡಿ’ಸೋಜಾ ಸ್ವಾಗತಿಸಿ, ತಾಲೂಕು
ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು. ನೆಹರೂ ಯುವ ಕೇಂದ್ರದ ತಾಲೂಕು ಪ್ರತಿನಿಧಿ ಗುರುಪ್ರಿಯ ನಾಯಕ್, ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾನಿಲಯದ ಉಪನ್ಯಾಸಕ ಡಾ| ಪ್ರವೀಣ್ ಎಸ್. ಡಿ. ನಿರೂಪಿಸಿದರು.
ಪ್ರಶಸ್ತಿ ಪ್ರದಾನ
2017-18ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿಗೆ ಆಯ್ಕೆಯಾದ ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಎಸ್.ವಿ., ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ನಿಕಟಪೂರ್ವಾಧ್ಯಕ್ಷ ಸಚಿನ್ ಭಂಡಾರಿ, ಸುಳ್ಯದ ಫ್ರೆಂಡ್ಸ್ ಕ್ಲಬ್ ಪೈಲಾರು ಸಂಘದ ತೇಜಸ್ವಿ ಕಡಪಳ, ಮಂಗಳೂರಿನ ಸಸಿಹಿತ್ಲು ಯುವಕ ಮಂಡಲದ ನರೇಶ್ ಕುಮಾರ್ ಸಸಿಹಿತ್ಲು, ಬಂಟ್ವಾಳದ ಅಳಿಕೆ ನವಚೇತನ ಯುವತಿ ಮಂಡಲದ ಅಮಿತಾ ಕಲಾ ಅವರಿಗೆ ಜಿಲ್ಲಾಯುವ ಪ್ರಶಸ್ತಿ ಮತ್ತು ಮಂಗಳೂರು ತಾಲೂಕಿನ ಎಕ್ಕಾರು ವಿಜಯ ಯುವ ಸಂಗಮ, ಬೆಳ್ತಂಗಡಿ ತಾಲೂಕಿನ ಶ್ರೀ ಗುರು ಮಿತ್ರ ಸಮೂಹಕ್ಕೆ ಜಿಲ್ಲಾ ಸಾಂಘಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮ್ಮಾನ
ಸವಣೂರು ಯುವಕ ಮಂಡಲದ ಅಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ವಿಜೇತ, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಾಗಾರ
ಸಭಾ ಕಾರ್ಯಕ್ರಮದ ಬಳಿಕ ಯುವಜನತೆ ಮತ್ತು ನಾಯಕತ್ವದ ಕುರಿತು ಸವಣೂರು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹಾಗೂ ಆರೋಗ್ಯಯುಕ್ತ ಸಮಾಜಕ್ಕೆ ಯುವಜನರ ಪಾತ್ರದ ಕುರಿತು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಕಾರ್ಯಾಗಾರ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?
Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.