ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ
Team Udayavani, Nov 27, 2017, 2:08 PM IST
ಪುತ್ತೂರು: ದಯೆ, ಕರುಣೆ, ಕ್ಷಮೆ, ತ್ಯಾಗ, ಬಲಿದಾನದ ಸಂಕೇತ ಪರಮ ಪ್ರಸಾದ. ಈ ಪವಿತ್ರ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕುಟುಂಬ ಹಾಗೂ ಸಮುದಾಯದ ಪಾವಿತ್ರ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ| ಸುನಿಲ್ ಜಾರ್ಜ್ ಡಿ’ಸೋಜಾ ಅವರು ಹೇಳಿದರು.
ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ರವಿವಾರ ನಡೆದ ಪವಿತ್ರ ಪರಮ ಪ್ರಸಾದದ ಭಾತೃತ್ವದ ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು.
ನಮ್ಮೊಳಗೆ ಬದಲಾವಣೆಯಾಗಲಿ
ಸಮುದಾಯ ಒಂದು ಕುಟುಂಬದಂತೆ. ಒಳ್ಳೆಯವರಾಗಿ, ಪ್ರೀತಿಯಿಂದ ಜೀವಿಸಿದರೆ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ. ಬದಲಾವಣೆ ಮೊದಲು ನಮ್ಮೊಳಗೆ ಆಗಬೇಕು. ಬಳಿಕ ಸಮಾಜದ ಬದಲಾವಣೆಯನ್ನು ಬಯಸಬೇಕು. ಮಕ್ಕಳನ್ನು ಸಮಾಜದಲ್ಲಿ, ಕುಟುಂಬದಲ್ಲಿ ಹೇಗೆ ಬೆಳೆಸಬೇಕು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು ಎಂದರು.
ಮರೀಲು ಸೇಕ್ರೆಡ್‌ಹಾರ್ಟ್ ಚರ್ಚ್‌ನ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ. ಅಲ್ಮೇಡ, ಪಾಲೋಟಾಯ್ನ ಪ್ರಾವಿನ್ಸ್‌ನ ಕೋಶಾಧಿಕಾರಿ, ಚರ್ಚ್ ಸದಸ್ಯ ವಂ| ವಿಕ್ಟರ್ ಮಾರ್ಟಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಪ್ರೊ| ಎಡ್ವಿನ್ ಡಿ’ಸೋಜಾ, ಕಾರ್ಯದರ್ಶಿ ಲಿಗೋರಿ ಸೆರಾವೋ, ಚರ್ಚ್ ಪಾಲನ ಸಮಿತಿ ಸದಸ್ಯರು, ವೇದಿಕೆ ಸದಸ್ಯರು, ಚರ್ಚ್‌ನ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಾಯನ ಮಂಡಳಿಯವರು ಉಪಸ್ಥಿತರಿ ದ್ದರು. ಬಲಿಪೂಜೆ ಬಳಿಕ ಚರ್ಚ್‌ನ ಪ್ರತಿಯೊಂದು ವಾಳೆಯ ಸದಸ್ಯರಿಂದ ಸ್ವತ್ಛತಾ ಕಾರ್ಯಕ್ರಮ ಜರಗಿತು.
ಸಂಘಟನೆಗೆ ಸಹಕಾರಿ
ಪವಿತ್ರ ಪರಮ ಪ್ರಸಾದದ ಸಂಸ್ಕಾರದಿಂದ ವೈಯಕ್ತಿಕವಾಗಿ, ಕುಟುಂಬದಲ್ಲಿ, ಚರ್ಚ್‌ನಲ್ಲಿ ಹಾಗೂ ಸಮಾಜದಲ್ಲಿ ಜೀವಿಸಲು ನೆರವಾಗುವುದಲ್ಲದೆ ಸಕ್ರಿಯ ಸಮುದಾಯವನ್ನು ಸಂಘಟಿಸಲು ಸಾಧ್ಯ. ಸಮುದಾಯದ ನಡುವೆ ಜೀವನ ನಡೆಸುವುದು ಹೇಗೆ, ಇದರ ಒಳಿತ್ತನ್ನು ಪರರಿಗೆ ಹಂಚುವುದು ಹೇಗೆ ಎನ್ನುವುದರ ಬಗ್ಗೆ ವಂ| ಸುನಿಲ್ ಜಾರ್ಜ್ ಡಿ’ಸೋಜಾ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.