ಗ್ರಾಹಕರಿಂದ ಪಟಾಕಿ ಖರೀದಿ ಭರಾಟೆ
Team Udayavani, Nov 4, 2021, 6:26 AM IST
ಮಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಆರಂಭಗೊಂಡಿದ್ದು, ಈ ಬಾರಿ ಜನರು ಸಾಂಪ್ರದಾಯಿಕ ಪಟಾಕಿಗಳ ಬದಲಾಗಿ ಪರಿಸರ ಸ್ನೇಹಿ ಹಸುರು ಪಟಾಕಿಯತ್ತ ಚಿತ್ತಹರಿಸಿದ್ದಾರೆ. ಸರಕಾರದ ಆದೇಶದಂತೆ ಪಟಾಕಿ ಅಂಗಡಿಗಳಲ್ಲಿ ಹಸುರು ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಲಾ ಗಿದ್ದು ವ್ಯಾಪಾರಿಗಳು ಮಾತ್ರವಲ್ಲದೆ ಜನರೂ ಕೂಡ ಇದಕ್ಕೆ ಸ್ಪಂದಿಸಿದ್ದಾರೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಇದೊಂದು ಪ್ರಶಂಸನೀಯ ಕ್ರಮವಾಗಿದ್ದು, ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಪಟಾಕಿ ಅಂಗಡಿಗಳಿಗೆ ಪಟಾಕಿ ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮುಗಿಬೀಳುತ್ತಿದ್ದಾರೆ.
ಪಟಾಕಿ ಅಂಗಡಿ ಮಾಲಕರು ಹೇಳುವಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿಗೆ ಬೇಡಿಕೆ ಹೆಚ್ಚಿದೆ. ಆದರೆ ಅದಕ್ಕೆ ತಕ್ಕಂತೆ ಸ್ಟಾಕ್‌ಗಳು ಬರುತ್ತಿಲ್ಲ. ತಮಿಳುನಾಡಿನಲ್ಲಿ ಮಳೆ ಬಂದ ಕಾರಣ ಪಟಾಕಿ ಉತ್ಪಾದನೆ ಕಡಿಮೆಯಾಗಿದೆ. ಆದರೆ ಜಿಲ್ಲೆಯ ಕೆಲವೊಂದು ವ್ಯಾಪಾರಿಗಳು ಕಳೆದ ವರ್ಷವೇ ಆರ್ಡರ್ ನೀಡಿದ್ದ ಪರಿಣಾಮ ಬೇಡಿಕೆಗೆ ತಕ್ಕಷ್ಟು ಪಟಾಕಿಗಳು ಸರಬರಾಜು ಆಗಿವೆ.
ಮಂಗಳೂರಿನ “ಮಾಯಾ ಟ್ರೇಡರ್’ ಮಾಲಕ ಅನಂತ್ ಕಾಮತ್ ಅವರ ಪ್ರಕಾರ, ಈ ವರ್ಷ ದೀಪಾವಳಿ ಹಬ್ಬಕ್ಕೂ ಮುನ್ನವೇ ಜನರು ಬಿರುಸಿ ನಿಂದ ಪಟಾಕಿಯನ್ನು ಖರೀದಿಸ ಲಾರಂಭಿಸಿದ್ದಾರೆ. ಇದೀಗ ಹಬ್ಬ ಆರಂಭ ಗೊಳ್ಳುತ್ತಿದ್ದಂತೆಯೇ ಗ್ರಾಹಕರು ನಿರೀಕ್ಷೆಗೂ ಮೀರಿ ಪಟಾಕಿಗಳ ಖರೀದಿಯಲ್ಲಿ ತೊಡಗಿ ದ್ದಾರೆ. ವರ್ಷದ ಹಿಂದೆಯೇ ಪಟಾಕಿಗಾಗಿ ಆರ್ಡರ್ ನೀಡಿದ್ದರಿಂದ ಶಿವಕಾಶಿಯಿಂದ ಬೇಡಿಕೆಗೆ ತಕ್ಕಷ್ಟು ಪಟಾಕಿಗಳು ಪೂರೈಕೆಯಾಗಿವೆ. ಹೀಗಾಗಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪಟಾಕಿಗಳ ಬೆಲೆಯಲ್ಲೂ ಅಷ್ಟೇನೂ ಏರಿಕೆಯಾಗಿಲ್ಲ. ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ಪಟಾಕಿ ನೀಡುತ್ತಿದ್ದೇವೆ ಎಂದರು.
ಹಸುರು ಪಟಾಕಿ ಪರಿಸರಕ್ಕೆ ಪೂರಕ
ಹಸುರು ಪಟಾಕಿಗಳನ್ನು ಸಿಡಿಸಿದಾಗ ಕಡಿಮೆ ಶಬ್ಧ ವನ್ನುಂಟು ಮಾಡುತ್ತವೆಯಲ್ಲದೆ ಕಡಿಮೆ ಪ್ರಮಾಣದಲ್ಲಿ ಹೊಗೆಯನ್ನು ಹೊರಸೂಸುತ್ತವೆ. ಇದರಿಂದಾಗಿ ಪರಿಸರಕ್ಕೆ ಹೆಚ್ಚಿನ ರೀತಿಯಲ್ಲಿ ಹಾನಿಯುಂಟಾಗದು. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದಲ್ಲಿ ಹಸುರು ಪಟಾಕಿಗಳು ಉಂಟು ಮಾಡುವ ಮಾಲಿನ್ಯದ ಪ್ರಮಾಣ ಶೇ. 30ರಷ್ಟು ಕಡಿಮೆಯಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಾಜ್ಯ ಸರಕಾರ ಮಾಲಿನ್ಯಕಾರಕ ಪಟಾಕಿಗಳ ಬದಲಾಗಿ ಹಸುರು ಪಟಾಕಿಗಳ ಬಳಕೆಗೆ ಅನುಮತಿ ನೀಡಿದೆ. ಹಸುರು ಪಟಾಕಿಗಳ ಬಾಕ್ಸ್ ಮತ್ತು ಅದರೊಳಗಿನ ಪ್ಯಾಕ್ ಮೇಲೆ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನ ಮಂಡಳಿ, ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನ ಸಂಸ್ಥೆ (ಸಿಎಸ್‌ಐಆರ್-ನೀರಿ)ಗಳ ಹಸುರು ಲೋಗೋ ಇರಲಿದೆ. ನೀರಿ ಮೊಬೈಲ್ ಆ್ಯಪ್ಲಿಕೇಶನ್‌ಗಾಗಿ ಕ್ಯು ಆರ್ ಕೋಡ್ ಇರಲಿದೆ. ಹೀಗಾಗಿ ಜನರು ಹಸುರು ಪಟಾಕಿಗಳನ್ನು ಬಲು ಸುಲಭವಾಗಿ ಗುರುತಿಸಬಹುದಾಗಿದೆ.
ಇದನ್ನೂ ಓದಿ:ರಾಜ್ಯ ಸರ್ಕಾರದಿಂದ 7 ರೂ. ಗಳಷ್ಟು ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ
ಹಸುರು ಪಟಾಕಿ ಬಳಸಿ; ಪಾಲಿಕೆಯಿಂದ ಜಾಗೃತಿ
ಮಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಸಂಘ ಸಂಸ್ಥೆಗಳ ಜತೆಗೂಡಿ ಪಟಾಕಿ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಪಟಾಕಿ ಅಂಗಡಿಗಳ ಪರವಾನಿಗೆ ನೀಡುವ ವೇಳೆ ಹಸುರು ಪಟಾಕಿ ಮಾತ್ರ ಕಡ್ಡಾಯವಾಗಿ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ. ನಗರದ ವಸತಿ ಸಮುತ್ಛಯಗಳು, ಹೆಚ್ಚಿನ ಕಾರ್ಮಿಕರು ಕೆಲಸ ಮಾಡುವಂತಹ ಕೈಗಾರಿಕ ಪ್ರದೇಶ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಹಸುರು ಪಟಾಕಿ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪಾಲಿಕೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ತರಹೇವಾರಿ ಪಟಾಕಿಗಳು
ಈ ಬಾರಿ ಮಾರುಕಟ್ಟೆಗೆ ತರಹೇವಾರಿ ಹಸುರು ಪಟಾಕಿಗಳು ಕಾಲಿಟ್ಟಿವೆ. ಅದರಲ್ಲೂ ಪೋಪ್‌ಕಾರ್ನ್ ಕ್ಲಾಸಿಕ್ ಫೌಂಟೇನ್ ಎಂಬ ಫÉವರ್ ಪಾಟ್ ವಿವಿಧ ಚಿತ್ತಾರದ ಬಣ್ಣಗಳನ್ನು ಮೇಲಕ್ಕೆ ಚಿಮ್ಮಿಸುತ್ತದೆ. ವಿವಿಧ ವರ್ಣಗಳನ್ನು ಹೊರಸೂಸುವ ನೋಟಾ ಪಟ್ಲ ಎಂಬ ಪಟಾಕಿ, ಬಟರ್‌ಫ್ಲೈ ವಿವಿಧ ವರ್ಣಗಳನ್ನು ಹೊರಸೂಸಿ ಇಂಪಾದ ಶಬ್ಧವನ್ನುಂಟು ಮಾಡುತ್ತದೆ. ವೀಟೂ ಟಾಪ್‌ವೀಲ್ ಉತ್ಪನ್ನ ವರ್ಷಧಾರೆಯನ್ನು ಸುರಿಸಿ ಜನರ ಮನರಂಜಿಸುತ್ತದೆ. ಹೆಲಿಕಾಪ್ಟರ್ ಪಟಾಕಿ ನೆಲದಿಂದ ಮೇಲಕ್ಕೆ ಚಿಮ್ಮಿ ಹೆಲಿಕಾಪ್ಟರ್ ತರಹ ತಿರುಗುತ್ತದೆ. ಮಾಸ್ಟರ್ ಪಟಾಕಿಯು ಸೈರನ್‌ನೊಂದಿಗೆ ಇಂಪಾದ ಸಂಗೀತ ಹೊರಸೂಸುತ್ತದೆ. ಈ ರೀತಿಯ ವಿವಿಧ ಮಾದರಿಯ ಪಟಾಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಈ ಎಲ್ಲ ವಿನೂತನ ಮಾದರಿಯ ಪಟಾಕಿಗಳಿಗೆ ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಪಟಾಕಿ ಮಾರುಕಟ್ಟೆಯಲ್ಲಿ ತೀರಾ ನಿರಾಶಾದಾಯಕ ವಾತಾವರಣವಿತ್ತು. ಸರಕಾರ ಕೊನೆಯಲ್ಲಿ ಹಸುರು ಪಟಾಕಿಗೆ ಅನು ಮತಿ ನೀಡಿದರೂ ಈ ಬಗ್ಗೆ ಜನರಲ್ಲಿ ಸೃಷ್ಟಿಯಾದ ಗೊಂದಲದ ಕಾರಣದಿಂದಾಗಿ ಪಟಾಕಿ ವ್ಯವಹಾರ ಭಾರೀ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಸರಕಾರ ವಾರ ಇರುವಾಗಲೇ ಹಸುರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದ್ದರಿಂದಾಗಿ ಇದೀಗ ಗ್ರಾಹಕರು ಪಟಾಕಿಗೆ ಖರೀದಿಗೆ ಹೆಚ್ಚಿನ ಆಸಕ್ತಿ ತೋರು ತ್ತಿದ್ದು, ಪಟಾಕಿ ಮಾರುಕಟ್ಟೆ ಚೇತರಿಕೆ ಕಾಣುವ ನಿರೀಕ್ಷೆ ಇದೆ.
– ಪಟಾಕಿ ವ್ಯಾಪಾರಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.