ಸದಾಶಯ ದೀಪಾವಳಿ ಸಂಚಿಕೆ ಬಿಡುಗಡೆ
Team Udayavani, Oct 25, 2017, 11:52 AM IST
ಬಲ್ಮಠ: ಅಧ್ಯಯನ, ಸಂಶೋಧನ ಗ್ರಂಥಗಳ ಮೇಲಿನ ಟೀಕೆಗಳು ಸಾಹಿತಿಗಳನ್ನು ಧೃತಿಗೆಡಿಸುತ್ತಿದೆ ಎಂದು ಸಾಹಿತಿ, ಸಂಶೋಧಕಿ ಇಂದಿರಾ ಹೆಗ್ಡೆ ಹೇಳಿದರು.
ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಮುಖವಾಣಿ ಸದಾಶಯ ತ್ತೈಮಾಸಿಕದ ದೀಪಾವಳಿ ವಿಶೇಷ ಸಂಚಿಕೆಯನ್ನು ಮಂಗಳವಾರ ನಗರದ ಹೊಟೇಲ್ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯದ ವಿಮರ್ಶೆ ತಪ್ಪಲ್ಲ. ಆದರೆ ವಿನಾ ಕಾರಣ ಟೀಕೆ ಸಲ್ಲದು. ಪ್ರಸ್ತುತ ಬಹುತೇಕ ಸಂಶೋಧನ ಗ್ರಂಥಗಳ ಮೇಲೆ ಟೀಕೆಗಳು ಹೆಚ್ಚುತ್ತಿದ್ದು, ಸಾಹಿತಿಗಳಿಗೆ ನೋವಾಗುತ್ತಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ತಾರಾನಾಥ ಶೆಟ್ಟಿ ಬೋಳಾರ ಅವರನ್ನುಟ್ರಸ್ಟ್ ವತಿಯಿಂದ ಸಮ್ಮಾನಿಸಲಾಯಿತು. ಮೂಡಬಿದಿರೆಯಲ್ಲಿ ಬಿಡುಗಡೆಯಾದ ಸದಾನಂದ ಶೆಟ್ಟಿ ಅವರ ಅಭಿನಂದನ ಗ್ರಂಥ ‘ಸದಾಭಿನಂದನೆ’ಯ ಲೇಖಕರನ್ನು ಗೌರವಿಸಲಾಯಿತು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಕೃಷ್ಣ ಶೆಟ್ಟಿ, ಟ್ರಸ್ಟ್‌ನ ಅಮರನಾಥ ಶೆಟ್ಟಿ, ಚಿತ್ತರಂಜನ್ ರೈ ಪಡು, ಶ್ರೀ ದೇವಿ ಎಜುಕೇಶನ್ ಟ್ರಸ್ಟ್‌ನ ನಿರ್ದೇಶಕ ಕೆ.ವಿ. ಪ್ರಕಾಶ್, ವಿಜಯಲಕ್ಷ್ಮೀ ಶೆಟ್ಟಿ, ದೇವಿಚರಣ್ ಶೆಟ್ಟಿ, ಸುರೇಶ್ಚಂದ್ರ, ರಾಜ್ ಗೋಪಾಲ್ ರೈ, ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ನವನೀತ್ ಶೆಟ್ಟಿ ಕದ್ರಿ ಸಮ್ಮಾನಿತರ ವಿವರ ನೀಡಿದರು. ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.