ಅಂಚೆಯಣ್ಣ ತರ್ತಾನೆ ದೀಪಾವಳಿಯ ಹಣತೆ!
ಆನ್‌ಲೈನ್‌ನಲ್ಲಿ ದೀಪ ಖರೀದಿಸಲು ಅವಕಾಶ
Team Udayavani, Oct 22, 2019, 5:09 AM IST
ಮಹಾನಗರ: ಈ ದೀಪಾವಳಿಗೆ ಮಣ್ಣಿನ ದೀಪ, ಹಣತೆ ಖರೀದಿಸಲು ಮಾರ್ಕೆಟ್‌ಗೆ ಹೋಗ ಬೇಕೆಂದಿಲ್ಲ. ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ಅಂಚೆಯಣ್ಣನೇ ದೀಪ ಹೊತ್ತು ತರುತ್ತಾನೆ!
ಇಂತಹದ್ದೊಂದು ವಿಶಿಷ್ಟ ಪರಿ ಕಲ್ಪನೆಯನ್ನು ಇಕೋ ಫ್ರೆಂಡ್ಸ್ ಗ್ರೂಪ್ ಮಂಗಳೂರಿಗೆ ಪರಿಚಯಿಸಿದೆ. ಖರೀದಿ ಕೆಲಸಗಳೆಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಹೊತ್ತಿನಲ್ಲಿ ದೀಪಾವಳಿಗೂ ನಿಸರ್ಗಸ್ನೇಹಿಯಾದ ಹಣತೆ, ದೀಪಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಅವಕಾಶ ಒದಗಿಸಿದ್ದು, ಮಂಗಳೂರು ನಗರದೊಳಗೆ ಅಂಚೆ ಯಣ್ಣ ಅದನ್ನು ಮನೆಮನೆಗೆ ತಲುಪಿಸು ವಂತೆ ಜವಾಬ್ದಾರಿ ವಹಿಸಿದೆ.
ಆಕರ್ಷಕ ದೀಪ
ಮೈಸೂರು, ಚನ್ನಪಟ್ಟಣ, ಉತ್ತರ ಪ್ರದೇಶ, ಪುದುಚೇರಿ, ಕೇರಳ, ಗುಜ ರಾತಿನಲ್ಲಿ ಶುದ್ಧ ಮಣ್ಣಿನಿಂದ ತಯಾ ರಾದ ಹಣತೆ ಮತ್ತು ದೀಪಗಳನ್ನು ಇಕೋ ಫ್ರೆಂಡ್ಸ್ ಗ್ರೂಪ್ ಮಂಗಳೂರಿಗೆ ತರಿಸಿದೆ. ಲೋಪ ಮರಗಳನ್ನು ಬಳಸಿಕೊಂಡು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದ್ದು, ನೋಡಲು ಆಕರ್ಷಕವಾಗಿವೆ. ದೀಪಗಳನ್ನು ಬಲ್ಮಠ ಮ್ಯಾಂಗೋ ರೆಸ್ಟೋರೆಂಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಅ. 26ರ ವರೆಗೆ ಗ್ರಾಹಕರಿಗೆ ಇದನ್ನು ನೇರವಾಗಿಯೂ ಕೊಳ್ಳಲು ಅವ ಕಾಶವಿದೆ ಎನ್ನುತ್ತಾರೆ ಇಕೋ ಫ್ರೆಂಡ್ಸ್ ಗ್ರೂಪ್‌ನ ರಾಜೇಶ್.
ಲ್ಯಾಂಟೀನ್ ದೀಪ ಪರಿಚಯ
ಹಳ್ಳಿಗಾಡಿನಲ್ಲಿ ಈಗಲೂ ಉಳಿದು ಕೊಂಡ ಲ್ಯಾಂಟೀನ್ ದೀಪಗಳನ್ನು ನಗರಕ್ಕೆ ಪರಿಚಯಿಸಲು ಹೊರಟಿರುವ ಇಕೋ ಫ್ರೆಂಡ್ಸ್ ತಂಡವು, ಈ ಲ್ಯಾಂಟೀನ್ ದೀಪಗಳನ್ನು ಆನ್‌ಲೈನ್ ಬುಕ್ ಮಾಡಿದರೆ, ಅಂಚೆಯಣ್ಣನೇ ಮನೆಗೆ ತಂದು ಕೊಡುತ್ತಾನೆ ಎನ್ನುತ್ತಾರೆ ತಂಡದ ಸದಸ್ಯರು. ಗುಜರಾತಿನ ಮರಳುಗಾಡಿನ ಪ್ರಾಂತ್ಯದಲ್ಲಿ ಮಹಿಳಾ ಕಲಾವಿದರು ಸಿದ್ಧಪಡಿಸಿರುವ ಆಕರ್ಷಕ ಟಿ ರಾ ಕೋಟ ಲ್ಯಾಂಟೀನ್‌ಗಳು, ಕರ್ನಾ ಟಕದ ಕಲಾವಿದರು ಸಿದ್ಧಪಡಿಸಿದ ಕೆಂಪು ಮಣ್ಣಿನ ಟೆರಾಕೋಟ ಕಂದಿಲು, ಪಾಂಡಿ ಚೇರಿಯ ತೈಲ ದೀಪಗಳು, ಮಧುರೈಯ ಮಣ್ಣಿನ ದೀಪಗಳು ಆಕರ್ಷಣೆ ಪಡೆಯುತ್ತಿವೆ.
ಮಣ್ಣಿನ ದೀಪಗಳನ್ನು ವೆಬ್‌ಸೈಟ್‌ನಲ್ಲಿ ಆಯ್ಕೆ ಮಾಡಿಕೊಂಡರೆ ಅಂಚೆಯಣ್ಣ ಮನೆಗೆ ತಲುಪಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.