ಚಾಲಕರಿಗೆ ದಂಡದ ಬಿಸಿ
ದ.ಕ. 1.61, ಉಡುಪಿ 1.64 ಲ. ರೂ. ಸಂಗ್ರಹ
Team Udayavani, Sep 12, 2019, 5:03 AM IST
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ನಾಲ್ಕು ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಹೊಸ ಮೋಟಾರು ವಾಹನ ಕಾಯ್ದೆಯಡಿ 245 ವಿವಿಧ ಪ್ರಕರಣಗಳಿಗೆ ಒಟ್ಟು 1,61,400 ರೂ. ದಂಡ ಶುಲ್ಕ ವಿಧಿಸಲಾಗಿದೆ.
ಕಮಿಷನರೆಟ್ ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಗಳು ಬರುತ್ತಿವೆ. ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕ ಪ್ರಕರಣಗಳು ಮತ್ತು ಅಧಿಕ ದಂಡ ಮೊತ್ತ ವಿಧಿಸಲಾಗಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ಉದಯವಾಣಿಗೆ ತಿಳಿಸಿವೆ.
ಉಡುಪಿ: 290 ಪ್ರಕರಣ; 1.64 ಲ.ರೂ. ದಂಡ
ಉಡುಪಿ: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಬುಧವಾರ 290 ಪ್ರಕರಣಗಳು ದಾಖಲಾಗಿದ್ದು 1,64,300 ರೂ. ದಂಡ ವಸೂಲಿ ಮಾಡಲಾಗಿದೆ.
ವಾಹನ ವಿಮೆ: ಆಯುಕ್ತರ ಸ್ಪಷ್ಟನೆ
ಪೊಲೀಸ್ ಆಯುಕ್ತರ ವಾಹನದ ವಿಮೆ ನವೀಕರಣ ಆಗಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ವ್ಯಕ್ತಿಗಳು ಹರಿಯ ಬಿಟ್ಟ ಸುದ್ದಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು, ಸರಕಾರಿ ವಾಹನಗಳ ಬಗ್ಗೆ ಮಾಹಿತಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸರಕಾರಿ ವಾಹನಗಳಿಗೆ ಸರಕಾರವೇ ವಿಮೆ ಪಾವತಿಸುತ್ತದೆ. ಸರಕಾರ ವಿಮೆ ಪಾವತಿಸಿದ ವಾಹನಗಳನ್ನು ಸಾರಿಗೆ (ಪರಿವಾಹನ್) ವಾಹನಗಳ ಜತೆ ತುಲನೆ ಮಾಡುವುದು ಸರಿಯಲ್ಲ; ಏಕೆಂದರೆ ಈ ವಾಹನಗಳಲ್ಲಿ ಪ್ರಾರಂಭಿಕ ದತ್ತಾಂಶ ಮಾತ್ರ ಲಭಿಸುತ್ತಿದೆ; ನಂತರದ ನವೀಕರಣದ ಮಾಹಿತಿ ಇಲ್ಲ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.