ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

12 ಮಂದಿ ಇನ್ನೂ ಪತ್ತೆ ಆಗಿಲ್ಲ ; ಕೌಟುಂಬಿಕ ಕಲಹಗಳೇ ಪ್ರಮುಖ ಕಾರಣ

Team Udayavani, Dec 1, 2021, 7:30 AM IST

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 133 ಮಂದಿ ಮಕ್ಕಳು (18 ವರ್ಷಕ್ಕಿಂತ ಕೆಳಗಿನವರು) ನಾಪತ್ತೆಯಾಗಿದ್ದು 7 ಮಂದಿ ಬಾಲಕಿಯರು ಮತ್ತು ಐವರು ಬಾಲಕರ ಪತ್ತೆ ಇನ್ನೂ ಆಗಿಲ್ಲ.

ನಗರ ಭಾಗದಿಂದ ನಾಪತ್ತೆ ಯಾದ ಮಕ್ಕಳ ಸಂಖ್ಯೆ ಅಧಿಕ. ಮಂಗಳೂರು ಪೊಲೀಸ್‌ ಕಮಿಷ ನರೆಟ್‌ ವ್ಯಾಪ್ತಿಯಲ್ಲಿ 101 ಮತ್ತು ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 32 ಪ್ರಕರಣ ದಾಖಲಾಗಿದೆ. ಕಮಿಷ ನರೆಟ್‌ ವ್ಯಾಪ್ತಿಯ 10 ಮಂದಿಯ ಪತ್ತೆಯಾಗಿಲ್ಲ.

ಲಾಕ್‌ಡೌನ್‌ನಲ್ಲೂ ನಾಪತ್ತೆ
ಕೊರೊನಾ – ಲಾಕ್‌ಡೌನ್‌ ಸಂದರ್ಭ ಸಾರಿಗೆ ವ್ಯವಸ್ಥೆ ಸಹಜ ವಾಗಿರ ದಿದ್ದರೂ 38 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ವರ್ಷ ನಾಪತ್ತೆಯಾಗಿರುವ ಎಲ್ಲ 24 ಮಕ್ಕಳನ್ನೂ ಪತ್ತೆಹಚ್ಚಲಾಗಿದೆ.

ಹೆತ್ತವರ ವರ್ತನೆ ಕಾರಣ!
ಮಕ್ಕಳು ಮನೆ ಬಿಡಲು ಪ್ರಮುಖ ಕಾರಣ ಕೌಟುಂಬಿಕ ವಿಚಾರಗಳು ಎನ್ನುವುದು ಮಕ್ಕಳ ತಜ್ಞರು, ಮಕ್ಕಳ ಕಲ್ಯಾಣ ಸಮಿತಿಯವರು ಹಾಗೂ ಮಕ್ಕಳ ಆಪ್ತ ಸಮಾಲೋಚಕರ ವಿಶ್ಲೇಷಣೆ. ಹೆತ್ತವರ ಕುಡಿತದ ಚಟ ಅಥವಾ ನಿರಂತರ ಕಲಹದಿಂದ ಮನನೊಂದು ಅನೇಕ ಮಕ್ಕಳು ಮನೆ ಬಿಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಿಗೂ ಕಠಿನ ಶಿಕ್ಷೆಯ ಭೀತಿ ಕೂಡ ಮಕ್ಕಳು ಮನೆ ತೊರೆಯಲು ಇನ್ನೊಂದು ಪ್ರಮುಖ ಕಾರಣ. ಉಳಿದಂತೆ ವಿದ್ಯಾ ಭ್ಯಾಸದಲ್ಲಿ ಹಿಂದುಳಿದು ಮನೆಯವರಿಂದ ನಿರ್ಲಕ್ಷಿಸಲ್ಪಟ್ಟಾಗ ಅಥವಾ ತಿರಸ್ಕರಿಸಲ್ಪಟ್ಟಾಗ, ವಯ ಸ್ಸಿಗೆ ಸರಿ ಹೊಂದದ ವರ್ತನೆ ಮಕ್ಕಳಲ್ಲಿ ಉಂಟಾದಾಗ (ಕಂಡಕ್ಟ್ ಡಿಸಾರ್ಡರ್‌), ಹದಿಹರೆಯಕ್ಕೆ ಕಾಲಿಡುವ ಪೂರ್ವದಲ್ಲಿ ಉಂಟಾ ಗುವ ಗಂಡು/ಹೆಣ್ಣಿನ ಕುರಿತಾದ ಆಕರ್ಷಣೆ, ಕುತೂಹಲ, ತಪ್ಪು ಕಲ್ಪನೆ, ಆಮಿಷ ಮೊದಲಾದವು ಕೂಡ ನಾಪತ್ತೆಗೆ ಕಾರಣವಾಗಿರುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಬಸ್‌/ರೈಲು ನಿಲ್ದಾಣಗಳ ಸನಿಹ ಮನೆ ಇದ್ದರೆ ಅಲ್ಲಿನ ಮಕ್ಕಳು ಕುತೂಹಲದಿಂದ ಬಸ್‌, ರೈಲು ಹತ್ತಿ ನಾಪತ್ತೆಯಾಗಿರುವ ದೃಷ್ಟಾಂತಗಳೂ ಇವೆ.

ಇದನ್ನೂ ಓದಿ:ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪಹರಣ ಪ್ರಕರಣ
18 ವರ್ಷಕ್ಕಿಂತ ಕೆಳಗಿನವರು ಕಾಣೆಯಾದರೆ ಠಾಣೆಗಳಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಪೊಲೀಸರ ಜತೆಗೆ ಮಕ್ಕಳ ರಕ್ಷಣಾ ಘಟಕ, ಚೈಲ್ಡ್‌ಲೈನ್‌ (1098) ಕೆಲಸ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿಯೂ ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆ ಜಾಗೃತಿ ಮೂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

“ಕಲಹವಿರುವ ಕುಟುಂಬ’ (ಅನ್‌ಹ್ಯಾಪಿ ಫ್ಯಾಮಿಲಿ)ದಿಂದ ಮಕ್ಕಳು ನಾಪತ್ತೆಯಾಗುವ ಸಾಧ್ಯತೆಗಳು ಹೆಚ್ಚು. ಹೆತ್ತವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು. ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸುವುದಲ್ಲದೆ, ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಕ್ಕಳ ಮನೋಕೌಶಲ ಹೆಚ್ಚಿಸುವ ಕೆಲಸ ಮಾಡಬೇಕು. ಶಾಲೆಗಳಲ್ಲಿಯೂ ಜಾಗೃತಿ ಕಾರ್ಯಕ್ರಮ ನಡೆಯಬೇಕು.
ಡಾ| ರಮಿಳಾ ಶೇಖರ್‌,
ಮಾನಸಿಕ ಆರೋಗ್ಯ ತಜ್ಞೆ, ಮಂಗಳೂರು

ವಿಚ್ಛೇದನ ಪ್ರಕರಣದ ಸಂದರ್ಭ ಪತಿ/ಪತ್ನಿ ತಮ್ಮ ಗೆಲುವಿಗಾಗಿ ಮಕ್ಕಳನ್ನು ಬಳಸುವುದು, ಅವರ ಮೂಲಕ ದೂರು, ಹೇಳಿಕೆ ಕೊಡಿಸುವುದು ಕಂಡುಬಂದಿದೆ. ಇದು ಕೂಡ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಅವರು ಮನೆ ಬಿಡುವ ಸ್ಥಿತಿ ನಿರ್ಮಿಸುತ್ತಿದೆ.
– ರೆನ್ನಿ ಡಿ’ಸೋಜಾ, ದ.ಕ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-huli

Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

1-huli

Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.