ದ.ಕ. ಜಿಲ್ಲೆಗೆ 4 ಹೆಚ್ಚುವರಿ ಎಂಡೋ ಡೇ ಕೇರ್ ಸೆಂಟರ್
ಮೂರು ಕೇಂದ್ರಗಳ ಕಟ್ಟಡ ಸಿದ್ಧ ಅನುದಾನದ ಬಳಿಕ ಕೇಂದ್ರ ಕಾರ್ಯಾರಂಭ
Team Udayavani, Nov 20, 2021, 5:47 AM IST
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ 4 ಪಾಲನ ಕೇಂದ್ರ (ಡೇ ಕೇರ್ ಸೆಂಟರ್)ಗಳು ಮಂಜೂರಾಗಿವೆ. 3 ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರ ಕಾರ್ಯಾರಂಭದ ನಿರೀಕ್ಷೆಯಲ್ಲಿವೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳು ಹಾಗೂ ಬಂಟ್ವಾಳದ ವಿಟ್ಲ ಭಾಗ ಮತ್ತು ಮಂಗಳೂರಿನ ಮೂಡಬಿದಿರೆ ಭಾಗಗಳಲ್ಲಿ ಎಂಡೋ ಸಂತ್ರಸ್ತರ ಸಂಖ್ಯೆ ಹೆಚ್ಚು ಇರುವುದರಿಂದ ಈ ಪ್ರದೇಶಗಳನ್ನು ಕೇಂದ್ರೀಕರಿಸಲಾಗಿದೆ. ಕಡಬ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ ಈಗಾಗಲೇ 2 ಕೇಂದ್ರಗಳಿವೆ.
ಸರಕಾರದ ಈಗಿನ ಲೆಕ್ಕಾಚಾರದಂತೆ ದ.ಕ.ದಲ್ಲಿ 4,151 ಮಂದಿ ಎಂಡೋ ಸಂತ್ರಸ್ತರಿದ್ದಾರೆ. ಹಗಲು ಹೊತ್ತಿನಲ್ಲಿ ಸಂತ್ರಸ್ತರನ್ನು ಕರೆತಂದು ಡೇ ಕೇರ್ ಸೆಂಟರ್‌ಗಳಲ್ಲಿ ಆರೈಕೆ ಮಾಡಿ ರಾತ್ರಿ ಮನೆಗೆ ಬಿಡುವುದು ಕ್ರಮ. ಈಗಿರುವ 2 ಕೇಂದ್ರಗಳು ಇದೇ ಮಾದರಿಯಲ್ಲಿ ಕಾರ್ಯಾಚರಿಸುತ್ತಿವೆ.
3 ಕಟ್ಟಡ ಪೂರ್ಣ
ಪ್ರಸ್ತುತ ಬಂಟ್ವಾಳ ತಾಲೂಕಿನ ವಿಟ್ಲ, ಬೆಳ್ತಂಗಡಿಯ ಕಣಿಯೂರು, ಪುತ್ತೂರಿನ ಪಾಣಾಜೆ ಪಾಲನಾ ಕೇಂದ್ರಗಳ ಕಾಮಗಾರಿ ಪೂರ್ಣಗೊಂಡರೆ, ಸುಳ್ಯದ ಬೆಳ್ಳಾರೆ ಕೇಂದ್ರ ನಿರ್ಮಾಣದ ಹಂತದಲ್ಲಿದೆ. ಒಟ್ಟು 1.77 ಕೋ.ರೂ. ಅನುದಾನದಲ್ಲಿ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಕಾಮಗಾರಿ ನಡೆಯುತ್ತಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ಇದೆ.
ಇದನ್ನೂ ಓದಿ:ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ
ಶಾಶ್ವತ ಪುನರ್ವಸತಿ ಕೇಂದ್ರದ ಬೇಡಿಕೆ
ಜಿಲ್ಲೆಯ ಎಂಡೋ ಸಂತ್ರಸ್ತರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅದಕ್ಕಾಗಿ ಆಲಂಕಾರು ಮತ್ತು ಕೊಕ್ಕಡದಲ್ಲಿ ಜಾಗವನ್ನೂ ಗುರುತಿಸಲಾಗಿದೆ. ಯಾವುದೇ ವಾರಸುದಾರರಿಲ್ಲದ ಎಂಡೋಸಂತ್ರಸ್ತರ ಆರೈಕೆಯನ್ನು ಆ ಕೇಂದ್ರದಲ್ಲಿ ಮಾಡಬೇಕಿರುವುದರಿಂದ ಅದುಆಸ್ಪತ್ರೆಯ ರೀತಿಯಲ್ಲಿ ಕೆಲಸ ಮಾಡಬೇಕಿದ್ದು, ಹೆಚ್ಚಿನ ಅನುದಾನದ ಅಗತ್ಯವಿದೆ.
ಅನುದಾನದ ನಿರೀಕ್ಷೆಯಲ್ಲಿ
ಕಟ್ಟಡದ ಕಾಮಗಾರಿಯಷ್ಟೇ ನಡೆದಿದ್ದು, ಕೇಂದ್ರದ ಕಾರ್ಯಾಚರಣೆಗೆ ಇನ್ನಷ್ಟು ಅನುದಾನದ ಅಗತ್ಯವಿದೆ. ಅಗತ್ಯ ಸಲಕರಣೆಗಳ ಒದಗಣೆ, ನಿರ್ವಹಣೆಯ ಮೊತ್ತ, ಸಿಬಂದಿ ನಿಯೋಜನೆ ಇನ್ನಷ್ಟೇ ನಡೆಯಬೇಕಿದೆ. ಕೇಂದ್ರಗಳ ನಿರ್ವಹಣೆಗೆ ಮಾಸಿಕ 2ರಿಂದ 3 ಲಕ್ಷ ರೂ. ಬೇಕಿದೆ. ಪೂರ್ಣಗೊಂಡಿರುವ ಕೇಂದ್ರಗಳ ಆರಂಭಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಸರಕಾರಕ್ಕೆ ಬರೆಯಲಾಗಿದೆ. ಬಂದ ಬಳಿಕ ಕೇಂದ್ರ ಆರಂಭಗೊಳ್ಳಲಿದೆ.
– ಸಾಜುದ್ದೀನ್, ಜಿಲ್ಲಾ ಸಂಯೋಜಕರು, ದ.ಕ. ಜಿಲ್ಲಾ ಎಂಡೋಸಲ್ಫಾನ್ ಕೋಶ
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.