ದ.ಕ. ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಶೇ.99.55 ಮತದಾನ

ವಿಧಾನ ಪರಿಷತ್‌ ಚುನಾವಣೆ: ಕರಾವಳಿಯಲ್ಲಿ ಶಾಂತಿಯುತ ಮತದಾನ

Team Udayavani, Dec 11, 2021, 4:30 AM IST

ದ.ಕ. ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಶೇ.99.55 ಮತದಾನ

ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 99.55ರಷ್ಟು ಮತದಾನವಾಗಿದ್ದು, ಎಲ್ಲಡೆ ಶಾಂತಿಯುತವಾತ್ತು.

ಕ್ಷೇತ್ರದಲ್ಲಿ 2,917 ಪುರುಷರು ಹಾಗೂ 3,123 ಮಹಿಳೆಯರು ಸೇರಿದಂತೆ ಒಟ್ಟು 6,040 ಮತದಾರರಲ್ಲಿ 2,902 ಪುರುಷರು ಹಾಗೂ 3,111 ಮಹಿಳೆಯರು ಸೇರಿದಂತೆ ಒಟ್ಟು 6,013 ಮಂದಿ ಮತ ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯ ಒಟ್ಟು 2,505 ಮತದಾರರಲ್ಲಿ 2,492 ಹಾಗೂ ದ.ಕ. ಜಿಲ್ಲೆಯ ಒಟ್ಟು 3,535 ಮತದಾರರಲ್ಲಿ 3,521 ಮಂದಿ ಮತ ಚಲಾಯಿಸಿದ್ದಾರೆ.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ, ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ)ದ ಶಾಫಿ ಕೆ. ಸ್ಪರ್ಧಿಗಳಾಗಿದ್ದಾರೆ.

ಶೇ. 100 ಮತದಾನ
ಬೈಂದೂರು ತಾಲೂಕಿನಲ್ಲಿ 258, ಹೆಬ್ರಿಯಲ್ಲಿ 122, ಮೂಡುಬಿದಿರೆಯಲ್ಲಿ 222, ಬಂಟ್ವಾಳದಲ್ಲಿ 903, ಕಡಬದಲ್ಲಿ 285 ಮತದಾರರಲ್ಲಿ ಎಲ್ಲರೂ ಮತ ಚಲಾಯಿಸಿದ್ದು, ಶೇ. 100ರಷ್ಟು ಮತದಾನದ ಸಾಧನೆ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ನೆಟ್ಟಣಿಗೆ-ಮುಟ್ನೂರು ಗ್ರಾ.ಪಂ., ಉಪ್ಪಿನಂಗಡಿ ಗ್ರಾ.ಪಂ., ಬೆಳ್ತಂಗಡಿಯಲ್ಲಿ ಅರಸಿನಮಕ್ಕಿ ಹಾಗೂ ಬಳಂಜ ಗ್ರಾ.ಪಂ.ಗಳು, ಸುಳ್ಯದಲ್ಲಿ ಮಂಡೆಕೋಲು, ಐರ್ವನಾಡು ಗ್ರಾ.ಪಂ. ಹಾಗೂ ಸುಳ್ಯ ಪಟ್ಟಣ ಪಂಚಾಯತ್‌, ಮಂಗಳೂರಿನಲ್ಲಿ ಅಡ್ಯಾರು ಗ್ರಾ.ಪಂ. ಹಾಗೂ ಮಹಾನಗರ ಪಾಲಿಕೆ ಮತಗಟ್ಟೆಗಳು ಹೊರತುಪಡಿಸಿ ಉಳಿದಂತೆ ಎಲ್ಲ ಕಡೆಯೂ ಶೇ. 100ರಷ್ಟು ಮತದಾನವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಬೈಂದೂರಿನ 9, ಕುಂದಾಪುರದ 22, ಬ್ರಹ್ಮಾವರದ 20, ಉಡುಪಿಯ 10, ಕಾಪು 12, ಹೆಬ್ರಿ 5, ಕಾರ್ಕಳದ 12 ಗ್ರಾ.ಪಂ.ಗಳಲ್ಲಿ ಶೇ. 100 ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಹೆಬ್ರಿ ತಾಲೂಕಿನಲ್ಲಿ ಶೇ. 100 ಮತದಾನ ನಡೆದಿತ್ತು.

ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್‌ ಗೋಲ್ಡ್‌ ಮೆಡಲ್‌ 2022 ಗೌರವ

ಸಂಸದ, ಶಾಸಕರ ಮತದಾನ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳೂರು ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ, ಶಾಸಕರಾದ ಯು.ಟಿ. ಖಾದರ್‌ ಉಳ್ಳಾಲ ನಗರಸಭೆಯಲ್ಲಿ, ರಾಜೇಶ್‌ ನಾೖಕ್‌ ಬಂಟ್ವಾಳ ಪುರಸಭೆ, ಸಂಜೀವ ಮಠಂದೂರು ಪುತ್ತೂರು ನಗರಸಭೆಯಲ್ಲಿ, ಸಚಿವ ಎಸ್‌. ಅಂಗಾರ ಸುಳ್ಯ ಪಟ್ಟಣ ಪಂಚಾಯತ್‌ನಲ್ಲಿ, ಹರೀಶ್‌ ಪೂಂಜ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಮತ ಚಲಾಯಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮತವನ್ನು ಹೊಂದಿದ್ದ ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಮತ ಚಲಾಯಿಸಿಲ್ಲ.

ದಕ್ಷಿಣ ಕನ್ನಡದಲ್ಲಿ 231 ಹಾಗೂ ಉಡುಪಿ ಜಿಲ್ಲೆಯಲ್ಲಿ 158 ಮತಗಟ್ಟೆಗಳು ಸೇರಿ ಒಟ್ಟು 389 ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನದ ಅವಧಿ ನಿಗದಿಯಾಗಿದ್ದು, ಬಹುತೇಕ ಕಡೆ ಮಧ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದ ಮತ ಚಲಾವಣೆಯಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ಮಾಡಲಾಗಿತ್ತು. ಪರಿಷತ್‌ ಚುನಾವಣೆ ಯಲ್ಲಿ ಪ್ರಾಶಸ್ತÂ ಮತ ಚಲಾವಣೆ ಹಿನ್ನೆಲೆಯಲ್ಲಿ ಮತಯಂತ್ರದ ಬದಲು ಮತ ಪತ್ರಗಳನ್ನು ಬಳಸಲಾಗಿತ್ತು.

ಮಂಗಳೂರು ಮನಪಾದಲ್ಲಿ ಬಿಜೆಪಿಯ ಎಲ್ಲ 44 ಕಾರ್ಪೊರೇಟರ್‌ಗಳು, ನಾಲ್ವರು ನಾಮನಿರ್ದೇಶಿತ ಸದಸ್ಯರು, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌ ಹಾಗೂ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರ ಜತೆಯಲ್ಲಿ ಬೆಳಗ್ಗೆ 9.30ಕ್ಕೆ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಡಿ. 14ರಂದು ಮತ ಎಣಿಕೆ
ಮತಪೆಟ್ಟಿಗೆಗಳನ್ನು ಮಂಗಳೂರಿನ ಪಾಂಡೇಶ್ವರದ ರೊಸಾರಿಯೋ ಪದವಿ ಪೂರ್ವ ಕಾಲೇಜಿನ 10 ಸ್ಟ್ರಾಂಗ್‌ ರೂಂಗ ಳಲ್ಲಿ ಇಡಲಾಯಿತು. ಡಿ. 14ರಂದು ಇಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಕಳೆದ ಚುನಾವಣೆಯ ಸನಿಹ
ದ್ವಿ ಸದಸ್ಯತ್ವದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕೇತ್ರಕ್ಕೆ 2015ರ ಡಿ. 27ರಂದು ನಡೆದಿದ್ದ ಚುನಾವಣೆಯಲ್ಲಿ ಶೇ. 99.59 ಮತದಾನವಾಗಿತ್ತು. ಈ ಬಾರಿ ಶೇ. 99.55ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಈ ಸಲವೂ ಹೆಚ್ಚುಕಡಿಮೆ ಅಷ್ಟೇ ಪ್ರಮಾಣದ ಮತದಾನ ನಡೆದಿದೆ.

ಅನಾರೋಗ್ಯ, ಅನಿವಾರ್ಯ ಕಾರಣ ಗೈರು
ಕೆಲವು ಸದಸ್ಯರು ಅನಾರೋಗ್ಯದ ಕಾರಣ ಮತದಾನದಿಂದ ದೂರವುಳಿದಿದ್ದರು. ಬೆಳ್ತಂಗಡಿಯ ಅರಸಿನಮಕ್ಕಿಯಲ್ಲಿ ಸದಸ್ಯೆ ಯೋರ್ವರು ಹೆರಿಗೆ ಹಾಗೂ ಇನ್ನೋರ್ವರು ಕೌಟುಂಬಿಕ ವಾಗಿ ಅನಿವಾರ್ಯ ಕಾರಣದಿಂದಾಗಿ ಮತದಾನಕ್ಕೆ ಬಂದಿರಲಿಲ್ಲ.

ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸದಸ್ಯ ರೋರ್ವರು ಅನಾರೋಗ್ಯದಿಂದ ಮತದಾನಕ್ಕೆ ಬಂದಿರಲಿಲ್ಲ. ನೆಟ್ಟಣಿಗೆ-ಮುಟ್ನೂರು ಗ್ರಾ.ಪಂ. ಸದಸ್ಯರೊಬ್ಬರು ಊರಲ್ಲಿಲ್ಲದ ಕಾರಣ ಬಂದಿರಲಿಲ್ಲ. ಮಹಾನಗರ ಪಾಲಿಕೆ ಮತಗಟ್ಟೆಯ ಮತದಾರರಾಗಿರುವ ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಕೂಡ ಮತದಾನ ಮಾಡಿಲ್ಲ. ಅಡ್ಯಾರ್‌ಗ್ರಾ.ಪಂ.ನ ಸದಸ್ಯರೋರ್ವರು ಕರ್ತವ್ಯದ ನಿಮಿತ್ತ ಗೋವಾಕ್ಕೆ ತೆರಳಿದ್ದು ಅಲ್ಲಿಂದ ಶುಕ್ರವಾರ ಬರಲು ಸಾಧ್ಯವಾಗಿರಲಿಲ್ಲ.

ಉಡುಪಿ ತಾಲೂಕಿನ ಉದ್ಯಾವರದ ಮತದಾರರೊಬ್ಬರು ಕುಟುಂಬ ಸದಸ್ಯರ ಅನಾರೋಗ್ಯದ ನಿಮಿತ್ತ ತುರ್ತಾಗಿ ವಿದೇಶ ಪ್ರಯಾಣ ಮಾಡಿರುವುದರಿಂದ ಮತದಾನ ಸಾಧ್ಯವಾಗಿಲ್ಲ. ಕುಂದಾಪುರ ತಾಲೂಕಿನಲ್ಲಿ ಐವರು ಗೈರು ಹಾಜರಾಗಿದ್ದಾರೆ. ಹೊಂಬಾಡಿ ಮಂಡಾಡಿಯ ಮತದಾರರೊಬ್ಬರು ಬೆಂಗಳೂರಿಗೆ ಹೋಗಿದ್ದರೆ ಇತರ ನಾಲ್ವರು (ತ್ರಾಸಿ, ಗುಜ್ಜಾಡಿ, ಬಳ್ಕೂರು, ಕಾಳಾವರದ ಮತದಾರರು) ಅರೋಗ್ಯ ಸಮಸ್ಯೆಯ ಕಾರಣ ಮತದಾನ ಮಾಡಿಲ್ಲ. ಕಾಪು ತಾಲೂಕಿನ ಶಿರ್ವ, ಪಡುಬಿದ್ರಿ, ಮುದರಂಗಡಿ ಪಂಚಾಯತ್‌ಗಳ ತಲಾ ಓರ್ವರು ವಿದೇಶಕ್ಕೆ ಹೋಗಿರುವ
ಕಾರಣ ಗೈರು ಹಾಜರಾಗಿದ್ದಾರೆ.ಕಾರ್ಕಳ ಕಲ್ಯದ ಮತದಾರರೊಬ್ಬರು ಅಸೌಖ್ಯ ಮತ್ತು ಬೆಳ್ಮಣ್‌ನ ಒಬ್ಬರು ಖಾಸಗಿ ಕೆಲಸದ ನಿಮಿತ್ತ ಮುಂಬಯಿಗೆ ತೆರಳಿದ್ದರಿಂದ ಮತದಾನ ಮಾಡಿಲ್ಲ. ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಸದಸ್ಯ ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿರುವುದರಿಂದ, ಪಾಂಡೇಶ್ವರ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರು ವಿದೇಶಕ್ಕೆ ತೆರಳಿರುವ ಕಾರಣ ಮತದಾನ ಮಾಡಿಲ್ಲ.

ಯಡಮೊಗೆ: ನಾಲ್ವರು
ಮತದಾರರಿಗೆ 6 ಸಿಬಂದಿ!
ಕುಂದಾಪುರ: ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಕುಂದಾಪುರ ತಾಲೂಕಿನ ಯಡಮೊಗೆ ಮತಗಟ್ಟೆ ಯಲ್ಲಿ ಮತದಾರರಗಿಂತ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಸಿಬಂದಿ ಸಂಖ್ಯೆಯೇ ಹೆಚ್ಚಿದ್ದದು ವಿಶೇಷವಾಗಿತ್ತು. ಇಲ್ಲಿ ನಾಲ್ವರು ಮತದಾರರಿ ದ್ದರೆ, ಅವರಿಗಾಗಿ 6 ಮಂದಿ ಸಿಬಂದಿ ಕಾರ್ಯ ನಿರ್ವಹಿಸಿದರು.

ಕನಿಷ್ಠ 15 ಸ್ಥಾನಗಳಲ್ಲಿ ಗೆಲುವಿನ ವಿಶ್ವಾಸ
ಬಿಜೆಪಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದ್ದು ಈ ಮೂಲಕ ವಿಧಾನಪರಿಷತ್‌ನಲ್ಲಿ ಅತೀ ಹೆಚ್ಚು ಸ್ಥಾನವನ್ನು ಪಡೆಯಲಿದೆ. ದಕ್ಷಿಣ ಕನ್ನಡ-ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಅತ್ಯಧಿಕ ಪ್ರಥಮ ಪ್ರಾಶಸ್ತÂದ ಮತಗಳ ಮೂಲಕ ಗೆಲುವು ಸಾಧಿಸಲಿದ್ದಾರೆ.
– ನಳಿನ್‌ ಕುಮಾರ್‌ , ಬಿಜೆಪಿ ರಾಜ್ಯಾಧ್ಯಕ್ಷ

 

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.