ದ.ಕ. ಜಿಲ್ಲೆಯ ನಾಲ್ವರು ಮಕ್ಕಳಿಗೆ ಪ್ರಶಸ್ತಿ
Team Udayavani, Nov 14, 2017, 9:54 AM IST
ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಮಕ್ಕಳಿಗೆ ಈ ಸಾಲಿನಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ನ. 14ರ ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಷ್ಟ್ರ ಪ್ರಶಸ್ತಿ
ಬಂಟ್ವಾಳ ತಾಲೂಕು ಕೆದಿಲ ಮುರ್ಗಾಜೆಯ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ (ವಿಜ್ಞಾನದಲ್ಲಿ ಸಂಶೋಧನೆ) ವಿಜ್ಞಾನ ಕ್ಷೇತ್ರದಲ್ಲಿ (ವೈಜ್ಞಾನಿಕ ಸಂಶೋಧನೆ) ಅಸಾಧಾರಣ ಪ್ರತಿಭೆಗಾಗಿ 2017ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನ. 14ರಂದು ದಿಲ್ಲಿಯಲ್ಲಿ ನಡೆ ಯುವ ರಾಷ್ಟ್ರ ಮಟ್ಟದ ಮಕ್ಕಳ ದಿನಾಚರಣೆಯಲ್ಲಿ 10,000 ರೂ. ನಗದು ಹಾಗೂ ರಜತ ಪದಕ ನೀಡಿ ರಾಷ್ಟ್ರಪತಿ ಸಮ್ಮಾನಿಸಲಿದ್ದಾರೆ.
ರಾಜ್ಯ ಮಟ್ಟದ ಪ್ರಶಸ್ತಿ
ಸುರತ್ಕಲ್ ಸುಭಾಷಿತ ನಗರದ ವಿದ್ಯಾರ್ಥಿನಿ ಎಂ. ಅದ್ವಿಕಾ ಶೆಟ್ಟಿ (ಸಾಂಸ್ಕೃತಿಕ ಕ್ಷೇತ್ರ) ಅವರನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ 2017ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಶಿಫಾರಸು ಮಾಡಿದ್ದು, ನ. 14ರಂದು ಬೆಂಗಳೂರಿ ನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ದಿನಾಚರಣೆಯಲ್ಲಿ ಸಮ್ಮಾನಿಸ ಲಾಗುತ್ತದೆ.
ಇಬ್ಬರಿಗೆ ಶೌರ್ಯ ಪ್ರಶಸ್ತಿ
ಸಜೀಪಮೂಡ ಕುಡೂರು ಮನೆಯ ವೈಶಾಖ್ (ಶೌರ್ಯ ಪ್ರಶಸ್ತಿ) ಅಪಾಯಕಾರಿ ಹೆಬ್ಟಾವಿನ ಬಾಯಿಗೆ ಸಿಲುಕಿಕೊಂಡಿದ್ದು, ಬುದ್ಧಿ ಚಾತುರ್ಯದಿಂದ ಹಾವಿನ ಬಾಯಿಯಿಂದ ತನ್ನನ್ನು ಹಾಗೂ ತನ್ನ ತಂಗಿಯನ್ನು ರಕ್ಷಿಸಿಕೊಂಡಿದ್ದನು. ಅದೇ ರೀತಿ ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್. (ಶೌರ್ಯ ಪ್ರಶಸ್ತಿ) ವಿಷದ ಹಾವಿನ ಕಡಿತಕ್ಕೊಳಗಾದ ತನ್ನ ತಂಗಿಯನ್ನು ಬುದ್ಧಿ ಚಾತುರ್ಯದಿಂದ ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸೆ ವಿಧಾನದ ಮೂಲಕ ವಿಷವನ್ನು ಹೀರಿ ತೆಗೆದು ರಕ್ಷಿಸಿದ್ದನು. ಈ ಇಬ್ಬರ ಶೌರ್ಯವನ್ನು ಪರಿಗಣಿಸಿ 2017-18ನೇ ಸಾಲಿನ ರಾಜ್ಯ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.