ದ.ಕ., ಉಡುಪಿ: ಕೋವಿಡ್ ದಿಂದ 13 ಮಕ್ಕಳು “ಅನಾಥ’!
ಬಿಟ್ಟು ಹೋದವರಿಗೆ ಪರಿಹಾರ ನೀಡಲು ಸಮಿತಿ
Team Udayavani, Jan 22, 2022, 7:20 AM IST
ಮಂಗಳೂರು: ಕೊರೊನಾದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 13 ಮಂದಿ ಮಕ್ಕಳು ಅನಾಥರಾಗಿದ್ದಾರೆ.
ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿದ್ದರೆ ಅವರನ್ನು ಅನಾಥರೆಂದು ಗುರುತಿಸಲು ಸರಕಾರ ಸೂಚಿಸಿತ್ತು. ಒಂದು ವೇಳೆ ಅಂಥ ಮಕ್ಕಳಿಲ್ಲದಿದ್ದರೆ ಈ ಹಿಂದೆಯೇ ಒಬ್ಬರನ್ನು ಕಳೆದು ಕೊಂಡಿದ್ದು ಕೊರೊನಾ
ದಿಂದ ಮತ್ತೂಬ್ಬ ರನ್ನೂ ಕಳೆದು ಕೊಂಡ 18 ವರ್ಷ ದೊಳಗಿನವರನ್ನು ಗುರು ತಿಸಲು ಸೂಚಿಸಲಾಗಿತ್ತು.
302 ಏಕಪೋಷಕ ಮಕ್ಕಳು
ಹೆತ್ತವರ ಪೈಕಿ ಒಬ್ಬರನ್ನಷ್ಟೇ ಕಳೆದು ಕೊಂಡಿ ರುವವರನ್ನು ಏಕಪೋಷಕ ಮಕ್ಕಳೆಂದು ಗುರುತಿಸ ಲಾಗುತ್ತದೆ. ದ.ಕ.ದಲ್ಲಿ 172, ಉಡುಪಿಯಲ್ಲಿ 130 ಮಂದಿ ಏಕಪೋಷಕ ಮಕ್ಕಳಿದ್ದಾರೆ. ಅವರಿಗೆ ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಯೋಜನೆ ಇಲ್ಲ. ಈ ಹಿಂದೆಯೇ ಜಾರಿಯಲ್ಲಿರುವ ಪ್ರಾಯೋಜಕತ್ವ ಯೋಜನೆಯಡಿ ಸಹಾಯಧನ ದೊರೆಯುತ್ತದೆ.
ಇತರ 1,213 ಕುಟುಂಬಗಳಿಗೆ ಪರಿಹಾರ
18 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಕೋವಿಡ್‌ನಿಂದ ಮೃತಪಟ್ಟ ಇತರರ ಕುಟುಂಬಗಳಿಗೂ ಪರಿಹಾರ ನೀಡಲಾಗುತ್ತಿದ್ದು ದ.ಕ. ದಲ್ಲಿ ಜ.14ರ ವರೆಗೆ 1,213 ಮಂದಿಗೆ ಪರಿಹಾರ ನೀಡಲಾಗಿದೆ. ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಎನ್‌ಡಿಎಫ್ ಮಾರ್ಗಸೂಚಿಯಂತೆ ಕೇಂದ್ರ ಸರಕಾರದಿಂದ 50,000 ರೂ., ಬಿಪಿಎಲ್ ಕುಟುಂಬ ಗಳಿಗೆ ಹೆಚ್ಚುವರಿಯಾಗಿ 1 ಲ.ರೂ. ನೀಡಲಾಗುತ್ತಿದೆ.
ತಪ್ಪಿ ಹೋದವರ ಹೊಣೆ ಸಮಿತಿಗೆ
ಕೊರೊನಾದಿಂದಲೇ ಮೃತಪಟ್ಟಿದ್ದರೂ ಪ್ರಮಾಣಪತ್ರ ದೊರೆಯದೇ ಇರುವವರು, ಬೇರೆ ಜಿಲ್ಲೆಗೆ ಚಿಕಿತ್ಸೆಗಾಗಿ ತೆರಳಿ ಅಲ್ಲಿ ಮೃತಪಟ್ಟಿರುವ ಪ್ರಕರಣಗಳು, ಆರೋಗ್ಯ ಇಲಾಖೆಯ ಪಟ್ಟಿಯಲ್ಲಿ ನಮೂದಾಗದೇ ಇರುವವರು ಸೇರಿದಂತೆ ವಿವಿಧ ಗೊಂದಲಗಳಿಂದಾಗಿ ಅನೇಕ ಕುಟುಂಬಕ್ಕೆ ಪರಿಹಾರ ಪಡೆಯಲು ಅಡ್ಡಿಯಾಗಿದೆ. ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಗೊಂದಲಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದ.ಕ., ಉಡುಪಿಯಲ್ಲಿ ಇಂತಹ 500ಕ್ಕೂ ಅಧಿಕ ಪ್ರಕರಣಗಳಿವೆ.
ಸೌಲಭ್ಯಗಳೇನು?
ಮುಖ್ಯಮಂತ್ರಿ ಬಾಲಸೇವಾ ಯೋಜನೆ ಮತ್ತು ಪಿಎಂ ಕೇರ್ ಯೋಜನೆಯಡಿ ಪ್ರತೀ ತಿಂಗಳು 3,500 ರೂ.ಗಳನ್ನು 18 ವರ್ಷದ ವರೆಗೆ ಮಕ್ಕಳ ಖಾತೆಗೆ ಜಮೆ ಮಾಡಲಾಗುತ್ತದೆ. ಎಸೆಸೆಲ್ಸಿ ಪೂರೈಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 21 ವರ್ಷ ತುಂಬಿದಾಗ 1 ಲ.ರೂ., 23 ವರ್ಷಗಳಾದಾಗ 10 ಲ.ರೂ. ನೀಡಲಾಗುತ್ತದೆ. ಉನ್ನತ ಶಿಕ್ಷಣಕ್ಕೂ ಸಹಾಯ ಒದಗಿಸಲಾಗುತ್ತದೆ.
ಅನಾಥರಿವರು
ದ.ಕ., ಉಡುಪಿಯಲ್ಲಿ ಎರಡನೇ ವರ್ಗಕ್ಕೆ ಸೇರಿದ ಮಕ್ಕಳನ್ನು ಅನಾಥರೆಂದು ಗುರುತಿಸಲಾಗಿದೆ. ದ.ಕ.ದಲ್ಲಿ 6 ವರ್ಷದ ಇಬ್ಬರು, 8 ಮತ್ತು 9 ವರ್ಷದ ತಲಾ ಒಬ್ಬರು ಹಾಗೂ 17 ವರ್ಷದ ಮೂವರು ಸೇರಿದಂತೆ 10 ಮಂದಿ ಅನಾಥರಿದ್ದಾರೆ. ಮೂವರು ಹೆಣ್ಣು, 7 ಗಂಡು ಮಕ್ಕಳು.
ಉಡುಪಿ ಜಿಲ್ಲೆಯಲ್ಲಿ 14 ವರ್ಷದ ಹುಡುಗಿ ಮತ್ತು ಹುಡುಗ ಹಾಗೂ 17 ವರ್ಷದ ಹುಡುಗಿಯನ್ನು ಗುರುತಿಸಲಾಗಿದೆ. ಬಹುತೇಕ ಎಲ್ಲರೂ ಸಂಬಂಧಿಕರ ಮನೆಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.
ಪಾಸಿಟಿವ್ ದಾಖಲೆಯೂ ಸಾಕು
ಮೃತಪಟ್ಟ ಪ್ರತಿಯೋರ್ವರ ಕುಟುಂಬಕ್ಕೂ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾದಿಂದ ಮೃತಪಟ್ಟಿರುವ ಬಗ್ಗೆ ಮರಣಪತ್ರ ಇಲ್ಲವೆಂಬ ಕಾರಣಕ್ಕೆ ಪರಿಹಾರ ವಂಚಿತರಾಗಿರುವವರು ಪಾಸಿಟಿವ್ ಆಗಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಹರಿಗೆ ಪರಿಹಾರ ದೊರಕಿಸಿಕೊಡಲಾಗುವುದು.
– ಡಾ| ರಾಜೇಂದ್ರ ಕೆ.ವಿ. / ಕೂರ್ಮಾ ರಾವ್, ದ.ಕ., ಉಡುಪಿ ಜಿಲ್ಲಾಧಿಕಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.