ಅಂಗವಿಕಲರಿಗೆ ಅವಕಾಶ ಅಗತ್ಯ: ಡಾ| ಆಳ್ವ
Team Udayavani, May 28, 2018, 10:21 AM IST
ಮಹಾನಗರ: ಅಂಗವಿಕಲರ ಬಗ್ಗೆ ಅನುಕಂಪ ಬೇಡ. ಅವರಿಗೆ ಪ್ರೋತ್ಸಾಹ, ಅವಕಾಶಗಳನ್ನು ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾರ್ಯ ಸಮಾಜ, ಸರಕಾರದಿಂದ ಆಗಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ಹೇಳಿದರು.
ನಗರದ ಪುರಭವನದಲ್ಲಿ ರವಿವಾರ ಜರಗಿದ ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ 26ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸರಕಾರದಿಂದ ಅಂಗವಿಕಲರಿಗೆ ಇರುವ ಸವಲತ್ತುಗಳು ಸಮರ್ಪಕವಾಗಿ ವಿತರಣೆಯಾಗುವುದು ಅವಶ್ಯ. ಪ್ರಸ್ತುತ ನೀಡುವ ಮಾಸಾಶನವನ್ನು ದುಪ್ಪಟ್ಟುಗೊಳಿಸಬೇಕು ಎಂದು ತಿಳಿಸಿದರು.
ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕೆ.ಸಿ. ನಾೖಕ್ ಉದ್ಘಾಟಿಸಿ, 26 ವರ್ಷಗಳಿಂದ ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಎಲ್ಲ ಪದಾಧಿಕಾರಿಗಳನ್ನು, ಸದಸ್ಯರನ್ನು ಅಭಿನಂದಿಸುತ್ತಿದ್ದೇನೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಂಗವಿಕಲರ ಸಂಘವು ಅಂಗವಿಕಲರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳಲು ಶ್ರಮಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾಭಾರತಿ ಮ್ಯಾನೇಜಿಂಗ್ ಟ್ರಸ್ಟಿ ವಿನೋದ್ ಶೆಣೈ, ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಉದ್ಯಮಿ ಶ್ರೀಕರ ಪ್ರಭು, ಸಕ್ಷಮದ ಜಯರಾಂ ಬೊಳ್ಳಾಜೆ, ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್ ಕುಮಾರ್ ರೈ ಅವರು ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷ ಮುರಳೀಧರ ನಾೖಕ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಸಮ್ಮಾನ
ಬಹುತೇಕ ಅಂಧತ್ವವಿದ್ದರೂ ಅದನ್ನು ಮೀರಿ ನಿಂತು ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾದ ಕಾಟಿಪಳ್ಳದ ತ್ರಿವಳಿ ಸಾಧಕರಾದ ಜೀವನ್, ಜಯೇಶ್ ಹಾಗೂ ಜಿತೇಶ್ ಅವರನ್ನು ಸಮ್ಮಾನಿಸಲಾಯಿತು. 40 ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಹಾಗೂ 20 ಮಂದಿಗೆ ವೈದ್ಯಕೀಯ ನೆರವು ನೀಡಲಾಯಿತು.
ರ‍್ಯಾಂಪ್ ಇಲ್ಲ
ನಗರದ ಪುರಭವನದಲ್ಲಿ ಅಂಗವಿಕಲರಿಗೆ ವೇದಿಕೆಗೆ ಹೋಗಲು ರ‍್ಯಾಂಪ್ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪಗಳು ಕೇಳಿಬಂತು. ಪುರಭವನದಲ್ಲಿ ರ‍್ಯಾಂಪ್ ನಿರ್ಮಿಸದಿರುವುದರಿಂದ ಅಂಗವಿಕಲರು ವೇದಿಕೆಗೆ ಹೋಗಲು ಪ್ರಯಾಸ
ಪಡಬೇಕಾಗಿದೆ ಎಂದು ಅತಿಥಿಯಾಗಿದ್ದ ಹರೀಶ್ ಆಚಾರ್ ತಿಳಿಸಿದರು.
ರ‍್ಯಾಂಪ್ ವ್ಯವಸ್ಥೆ ಮಾಡದಿರುವ ಬಗ್ಗೆ ಸಂಘದ ಅಧ್ಯಕ್ಷ ಮುರಲೀಧರ ನಾೖಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಟಿ. ಕೊರಗಪ್ಪ ಗೌಡ, ಕೋಶಾಧ್ಯಕ್ಷ ಪ್ರೊ| ಎಂ. ವಿಶ್ವನಾಥ್, ಸಂಚಾಲಕ ಹರೀಶ್ ಶೆಟ್ಟಿ, ಸಹಸಂಚಾಲಕ ಪ್ರವೀಣ್ ನಾಯಕ್, ನಾಗೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಾಸಾಶನ ಹೆಚಿಸಲು ಆಗ್ರಹ
ಬೇಡಿಕೆಯನ್ನು ಮಂಡಿಸಿದ ಸಂಘದ ಅಧ್ಯಕ್ಷ ಮುರಲೀಧರ ನಾೖಕ್, ಅಂಗವಿಕಲರಿಗೆ ಪ್ರಸ್ತುತ ನೀಡುವ 500 ರೂ. ಮಾಸಾಶನವನ್ನು 2,500 ರೂ. ಗೆ ಏರಿಸಬೇಕು, ಮಾಸಾಶನ ಪಡೆಯಲು ಇರುವ ಆದಾಯ ಮಿತಿ ರದ್ದುಪಡಿಸಬೇಕು, ಸೌಲಭ್ಯ ನೀಡುವಾಗ ತಾರತಮ್ಯ ಮಾಡಬಾರದು ಮತ್ತು ಶೇ.40 ಕ್ಕಿಂತ ಹೆಚ್ಚಿಗೆ ಅಂಗವಿಕಲತೆ ಇರುವ ಎಲ್ಲರಿಗೂ ಸಮಾನ ಸೌಲಭ್ಯ ನೀಡಬೇಕು, ಅಂಗವಿಕಲರಿಗೆ ತಾಲೂಕಿಗೊಂದರಂತೆ ಹಾಸ್ಟೆಲ್, ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಮರು ಪ್ರಾರಂಭಿಸಬೇಕು ಸಹಿತ 12 ಬೇಡಿಕೆಗಳನ್ನು ಈಡೇರಿಸ ಬೇಕೆಂದು ದ.ಕ.,ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ವತಿಯಿಂದ ಸರಕಾರವನ್ನು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.