ಸರ್ಜನ್‌ ಲೆಫ್ಟಿನೆಂಟ್‌ ಆಗಿ ಪುತ್ತೂರಿನ ವೈದ್ಯ


Team Udayavani, Oct 11, 2018, 10:48 AM IST

11-october-3.gif

ಪುತ್ತೂರು: ನೌಕಾದಳದ ಸರ್ಜನ್‌ ಲೆಫ್ಟಿನೆಂಟ್‌ ಆಗಿ ಪುತ್ತೂರಿನ ನೆಹರೂನಗರ ನಿವಾಸಿ ದೀಪಕ್‌ ಎ. ಆಯ್ಕೆಗೊಂಡಿದ್ದಾರೆ. ನೌಕಾದಳಕ್ಕೆ ಆಯ್ಕೆಯಾದ ದೇಶದ ಒಟ್ಟು 9 ಮಂದಿಯ ಪೈಕಿ ಪುತ್ತೂರಿನ ಡಾ| ದೀಪಕ್‌ ಎ. ಅವರೂ ಒಬ್ಬರು ಎನ್ನುವುದು ಹೆಚ್ಚುಗಾರಿಕೆ. ನೌಕಾದಳದ ಸರ್ಜನ್‌ ಲೆಫ್ಟಿನೆಂಟ್‌ ಆಯ್ಕೆ ಗೊಂಡವರಲ್ಲಿ ಇನ್ನುಳಿದವರು ಬೆಳಗಾವಿಯ ಚೈತ್ರಾ ವಿರೂಪಾಕ್ಷಿ. ಉಳಿದಂತೆ ಕೇರಳದ ಮೂವರು, ತಲಾ ಒಬ್ಬರಂತೆ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದವರು ಆಯ್ಕೆ ಆಗಿದ್ದಾರೆ.

ನೆಹರೂನಗರ ನಿವಾಸಿ ಸುಧಾಕರ ಆಚಾರ್ಯ ಎ. – ವಾರಿಜಾ ಎ.ಎಸ್‌. ದಂಪತಿ ಪುತ್ರ. 2018ರ ಮೇ 13ರಂದು ಸುಷ್ಮಾ ಕೆ.ಎನ್‌. ಅವರೊಂದಿಗೆ ವಿವಾಹವಾಗಿದ್ದಾರೆ. ದೀಪಕ್‌ ಪ್ರಾಥಮಿಕ ಶಿಕ್ಷಣವನ್ನು ಮಾಯಿದೇ ದೇವುಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ ಪಡೆದರು. ಪ್ರೌಢಶಿಕ್ಷಣ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ, ಪದವಿಪೂರ್ವ (ಪಿಸಿಎಂಬಿ) ಶಿಕ್ಷಣ ವಿವೇಕಾನಂದದಲ್ಲಿ ಪಡೆದರು. ಸಿಇಟಿಯಲ್ಲಿ 626ನೇ ರ್‍ಯಾಂಕ್‌ ಜತೆಗೆ ಎಂಬಿಬಿಎಸ್‌ ಸೀಟು ಗಳಿಸಿದರು. ಇದೀಗ ಸೈನ್ಯದ ವೈದ್ಯರಾಗಿ ಆಯ್ಕೆಗೊಂಡಿದ್ದು, ಅ. 15ರೊಳಗೆ ಸೇರ್ಪಡೆಗೊಳ್ಳಬೇಕು. ಕರ್ತವ್ಯಕ್ಕೆ ಸೇರುವ ಮುನ್ನ ‘ಉದಯವಾಣಿ’ ಜತೆ ಮಾತಿಗೆ ಸಿಕ್ಕಿದರು.

ಸೈನ್ಯಕ್ಕೆ ಆಯ್ಕೆಯಾದ ಬಗೆಯನ್ನು ವಿವರಿಸಿ
ಇದು ನನ್ನ ಮೊದಲ ಪ್ರಯತ್ನ. ವರ್ಷಕ್ಕೆ ಎರಡು ಬಾರಿ ಆರ್ಮ್ ಫೋರ್ಸ್‌ ಮೆಡಿಕಲ್‌ ಸರ್ವಿಸಸ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆಯಾದರೆ ಸಂದರ್ಶನಕ್ಕೆ ಕರೆಯುತ್ತಾರೆ. ಒಟ್ಟು 12 ದಿನ ನಡೆಯುವ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೆಡಿಕಲ್‌ ಫಿಟ್ನೆಸ್  ನೋಡಲಾಗುತ್ತದೆ. ಇದರಲ್ಲಿ ಉತ್ತೀರ್ಣನಾದರೆ ನೇಮಕಾತಿ. ನಾನು ಮುಂಬೈ ಬೋರ್ಡ್‌ನಲ್ಲಿ ಸಂದರ್ಶನ ಎದುರಿಸಿದೆ. ನೌಕಾದಳವನ್ನು ಆಯ್ದುಕೊಂಡೆ. ಕೆಲಸದ ಜಾಗವಾಗಿ ಬೆಂಗಳೂರು, ಕೊಚ್ಚಿ, ಮುಂಬೈ ಆಯ್ಕೆ ಮಾಡಿಕೊಂಡೆ. ಮುಂಬೈಗೆ ನೇಮಕಗೊಂಡಿದ್ದೇನೆ. ಮಾರ್ಚ್‌ನಲ್ಲಿ ಸಂದರ್ಶನ ಪೂರ್ಣಗೊಂಡಿದ್ದು, ಸೆ. 20ರಂದು ಆಫರ್‌ ಲೆಟರ್‌ ಬಂದಿದೆ. ಇದು ಆರ್ಮ್ ಫೋರ್ಸ್‌ ಮೆಡಿಕಲ್‌ ಸರ್ವೀಸ್‌ನ ಶಾರ್ಟ್‌ ಸರ್ವೀಸ್‌ ಕಮೀಷನ್‌ನಲ್ಲಿ ಮೆಡಿಕಲ್‌ ಆಫೀಸರ್‌ ಹುದ್ದೆ.

ವೈದ್ಯರಾಗಿದ್ದ ನಿಮಗೆ ಸೈನ್ಯದ ಒಲವು ಹೇಗೆ ಮೂಡಿತು?
ವೈದ್ಯರಾಗಿದ್ದ ನಿಮಗೆ ಸೈನ್ಯದ ಒಲವು ಹೇಗೆ ಮೂಡಿತು ಎಂಬ ಕುತೂಹಲಕ್ಕೆ ಉತ್ತರಿಸಿದ ದೀಪಕ್‌, ಆರ್ಮಿಯಲ್ಲಿದ್ದ ಕೆಮ್ಮಾಯಿಯ ರಾಮಚಂದ್ರ ಅವರನ್ನು ನೋಡಿ ಸಣ್ಣಂದಿನಲ್ಲೇ ಸ್ಫೂರ್ತಿ ಪಡೆದಿದ್ದೆ. ಆದರೆ ಈ ಅವಕಾಶ ಸಿಕ್ಕಿದ್ದು, ಅನಿರೀಕ್ಷಿತ. ನಮ್ಮದು ಮಧ್ಯಮ ವರ್ಗದ ಕುಟುಂಬ. ಎಂಬಿಬಿಎಸ್‌ ಬಳಿಕ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಶೆಯಿತ್ತು. ಪ್ರವೇಶ ಪರೀಕ್ಷೆ ಬರೆದು, ಸ್ನಾತಕೋತ್ತರ ಪದವಿ ಪಡೆಯುವ ಹಲವು ಅವಕಾಶ ಬಂದಿತ್ತು. ಆದರೆ ಬಡತನದ ಕಾರಣದಿಂದ ಸಾಧ್ಯವಾಗಲಿಲ್ಲ. ಕೆಲಸ ಮಾಡುವುದು ಅನಿವಾರ್ಯ ವಾಯಿತು. ಇದರ ನಡುವೆ ಸೈನ್ಯದ ಬಗ್ಗೆ ಮಾಹಿತಿ ಸಿಕ್ಕಿತು. ಒಂದು ಕಡೆಯಿಂದ ವೈದ್ಯ ವೃತ್ತಿ- ಇನ್ನೊಂದು ಕಡೆಯಿಂದ ಸೈನ್ಯದಲ್ಲಿ ದುಡಿಯುವುದು. ಎರಡೂ ಶ್ರೇಷ್ಠವೇ. ಸಂದರ್ಶನಕ್ಕೆ ಅರ್ಜಿ ಹಾಕಿದೆ. ಇಲ್ಲಿ ಇನ್ನೊಂದು ಅವಕಾಶವಿದೆ. 3 ವರ್ಷ ಸೇವೆ ಸಲ್ಲಿಸಿದ ಮೇಲೆ ಸ್ನಾತಕೋತ್ತರ ಪದವಿ ಪಡೆಯಬಹುದು. ದೇಶ ಸೇವೆ, ಮನೆಗೆ ಆಧಾರ, ಮಾತ್ರವಲ್ಲ ನಮ್ಮ  ಬಯಕೆಗಳನ್ನು ಪೂರೈಸಲು ಸಾಧ್ಯವಿದೆ.

ಯುವಜನತೆಗೆ ನಿಮ್ಮ ಸಂದೇಶ ಏನು?
ಎನ್‌ಸಿಸಿ, ಸ್ಕೌಟ್ಸ್‌ಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾಭ್ಯಾಸದ ಜತೆಗೆ ಮಾನ್ಯತೆಯೂ ಸಿಗುತ್ತದೆ. ಎನ್‌ಸಿಸಿ ಕೆಡೆಟ್‌ಗಳಿಗೆ ಸೈನ್ಯದಲ್ಲಿ ಆದ್ಯತೆ ನೀಡುತ್ತಾರೆ. ಸೈನ್ಯ ಎಂದರೆ ಹೆದರಬೇಕಿಲ್ಲ. ಎಲ್ಲದಕ್ಕೂ ಸಿದ್ಧವಾಗಿರಬೇಕು. ಇಂತಹದ್ದೆಲ್ಲ ಎದುರಿಸಿದರೆ ಮಾತ್ರ ಜೀವನ ಸಾರ್ಥಕ ಮಾಡಿಕೊಳ್ಳಲು ಸಾಧ್ಯ.

ಸೈನಿಕರು ದೇಶದ ಸ್ವತ್ತು. ಸ್ವಂತ ಸುಖ, ಮನೆಯನ್ನು ಬಿಟ್ಟು ಅವರು ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಮೆಡಿಕಲ್‌, ಎಂಜಿನಿಯರಿಂಗ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಜತೆಗೆ ಯುವಕರು ಭಾರತೀಯ ಹೆಮ್ಮೆಯ ಸೈನ್ಯದ ಕಡೆಗೂ ಸ್ವಲ್ಪ ಗಮನ ಹರಿಸಬೇಕು. ಈ ಕ್ಷೇತ್ರಕ್ಕೆ ಬರಬೇಕು.

ಸೈನ್ಯದ ಬಗ್ಗೆ ನಿಮ್ಮ ನಿರೀಕ್ಷೆಗಳೇನು?
ಮಾಮೂಲಿ ವೈದ್ಯ ವೃತ್ತಿಗಿಂತಲೂ ಹೆಚ್ಚಿನ ಶಿಸ್ತನ್ನು ಸೈನ್ಯದಲ್ಲಿ ಕಂಡಿದ್ದೇನೆ. ದುಡಿ, ಹಣ ಸಂಪಾದಿಸು ಎಂಬ ಜೀವನಕ್ಕಿಂತಲೂ ಸ್ವಲ್ಪ ಭಿನ್ನವಾದ ಜೀವನ ಶೈಲಿ, ಆಲೋಚಿಸುವ ಕ್ರಮವನ್ನು ತಿಳಿದುಕೊಳ್ಳಬಹುದು. ಜೀವನದಲ್ಲಿ ಶಿಸ್ತು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿದಿನ ಪರೇಡ್‌, ಅಭ್ಯಾಸ ಇರಬಹುದು. ವೃತ್ತಿಯ ಜತೆಗೆ ಎಲ್ಲವನ್ನು ಕರಗತ ಮಾಡಿಕೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಹೋಗಬೇಕಾದೀತು. ವೈದ್ಯ ಎಂದರೆ ಆಸ್ಪತ್ರೆಯಲ್ಲಿ ಮಾತ್ರ ಕೆಲಸ ಅಲ್ಲ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ.

ಆರು ವಾರಗಳ ತರಬೇತಿ
2013ರಲ್ಲಿ ಎಂಬಿಬಿಎಸ್‌ ಪದವಿ ಪಡೆದಿರುವ ದೀಪಕ್‌, 7 ತಿಂಗಳು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ವೈದ್ಯರಾಗಿ ದುಡಿದಿದ್ದಾರೆ. ಅನಂತರ ಮಂಗಳೂರು ಫಾದರ್‌ ಮುಲ್ಲರ್‌ನಲ್ಲಿ 7 ತಿಂಗಳು, ಒಎಂಪಿಎಲ್‌ ಪೆಟ್ರೋ ಕೆಮಿಕಲ್‌ ಕಂಪೆನಿಯ ಹಾಸ್ಪಿಟಲ್‌ನಲ್ಲಿ ಮೂರುವರೆ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ನೌಕಾದಳದ ಮುಂಬೈ ಐಎನ್‌ಎಸ್‌ಎಸ್‌ ಅಶ್ವಿ‌ನಿ ಹಾಸ್ಪಿಟಲ್‌ಗೆ ಸರ್ಜನ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡಿದ್ದಾರೆ. ಮುಂದಿನ ಆರು ವಾರಗಳ ಕಾಲ ತರಬೇತಿಯ ಸಮಯ.

 ಗಣೇಶ್‌ ಎನ್‌.ಕಲ್ಲರ್ಪೆ 

ಟಾಪ್ ನ್ಯೂಸ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.