ಚಿಕಿತ್ಸೆ ಯಶಸ್ಸಿನಿಂದ ವೈದ್ಯನಿಗೂ ತೃಪ್ತಿ: ಡಾ|ಕುಡ್ವಾ
ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಉದ್ಘಾಟನೆ
Team Udayavani, May 19, 2019, 6:00 AM IST
ಬಿಜೈ: ಅನಾರೋಗ್ಯದಿಂದ ಬರುವ ರೋಗಿಗಳ ಮನಸ್ಸಿಗೆ ಸಾಂತ್ವನ ನೀಡುವ ಚಿಕಿತ್ಸೆ ಕ್ರಮ ಅತ್ಯಂತ ಯಶಸ್ವಿಯಾಗುವುದಲ್ಲದೆ ರೋಗಿಯಾದವನಿಗೆ ನೆಮ್ಮದಿ ಕೊಡುವ ಜತೆಗೆ ಚಿಕಿತ್ಸೆ ನೀಡಿದ ವೈದ್ಯಆತ್ಮ ತೃಪ್ತಿಯನ್ನು ಪಡೆಯುವುದು ಸಾಧ್ಯ ಎಂದು ಮೂಲ್ಕಿಯ ಹಿರಿಯ ವೈದ್ಯ ಹಾಗೂ ಸಮಾಜ ಸೇವಕ ಡಾ|ಎಂ.ಎ.ಆರ್.ಕುಡ್ವಾ ಹೇಳಿದರು.
ಅವರು ಮಂಗಳೂರಿನ ಬಿಜೈ ಚರ್ಚ್ ಹಾಲ್ ಎದುರಿನ ತಿವಾರಿ ಭವನದ ಒಂದನೇ ಮಹಡಿಯಲ್ಲಿ ನೂತನವಾಗಿ ಆರಂಭ ಗೊಂಡ ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ನ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ಲಿನಿಕ್ನಲ್ಲಿ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಒದಗಿಸಿದಾಗ ಬರುವ ರೋಗಿ ಗಳಿಗೂ ಬಹಳಷ್ಟು ಪ್ರಯೋಜನ ಮತ್ತು ಉತ್ತಮ ಚಿಕಿತ್ಸೆ ಸಿಗುವುದು ಸಾಧ್ಯ ವಾಗುತ್ತದೆ ಎಂದು ತಿಳಿ ಸಿದರು.
ಕ್ಲಿನಿಕ್ನ ಮುಖ್ಯಸ್ಥ ಮೂಳೆ ತಜ್ಞ ಡಾ| ಅರುಣ್ ಕುಡ್ವಾ ಪ್ರಸ್ತಾವಿಕವಾಗಿ ಮಾತ ನಾಡಿ, ನಮ್ಮ ಸಂಸ್ಥೆಯ ಮೂಲಕ ಉತ್ತಮ ದರ್ಜೆಯ ಎಲ್ಲ ವಿಭಾಗಗಳನ್ನು ತೆರೆಯ ಲಾಗಿದ್ದು, ರೋಗಿಗಳ ಅಗತ್ಯ ಸೇವೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಸಂಸ್ಥೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ| ಅಶೋಕ್ ಮೆನನ್ ಸ್ವಾಗತಿಸಿದರು.
ಉಡುಪಿಯ ಆಭರಣ ಜ್ಯುವೆಲ್ಲರ್ನಮುಖ್ಯಸ್ಥ ಹಾಗೂ ಹಿರಿಯ ಉದ್ಯಮಿ ಮಧುಕರ್ ಎಸ್. ಕಾಮತ್ ಅವರು ದೀಪ ಬೆಳಗಿಸಿ, ಕ್ಲಿನಿ ಕ್ನ ಮೂಲಕ ಜನ ರಿಗೆ ಉತ್ತಮ ಸೇವೆ ಹಾಗೂ ಆರೋಗ್ಯ ಲಭಿಸಲಿ ಎಂದು ಶುಭ ಹಾ ರೈಸಿದರು.
ಮಂಗಳೂರಿನ ಎ.ಜೆ. ಆಸ್ಪತ್ರೆಯ ಆಥೋìಪೆಡಿಕ್ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್ ಶೆಟ್ಟಿ ಮತ್ತು ಪ್ರಸಿದ್ಧ ಮೆಟ್ರೋಪೊಲೀಸ್ ಲ್ಯಾಬ್ ವ್ಯವಸ್ಥೆಯ ರೀಜನಲ್ ಸೇಲ್ಸ್ ಮ್ಯಾನೇಜರ್ ಅಬ್ದುಲ್ ಬುಖಾರಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.ಶಾಂತಿ ಎ. ಕುಡ್ವಾ ಮತ್ತು ರಾಧಾ ಎಂ. ಕಾಮತ್ ಸಮಾರಂಭದಲ್ಲಿ ಅತಿಥಿಗಳಾಗಿದ್ದರು.
ಅಭರಣ ಜ್ಯುವೆಲ್ಲರ್ನ ನಿರ್ದೇಶಕ ಸುಭಾಸ್ ಕಾಮತ್, ಬಿಗ್ ಬ್ಯಾಗ್ಸ್ ಇಂಟರ್ ನ್ಯಾಶನಲ್ನ ನಿರ್ದೇಶಕ ರವೀಶ್ ಕಾಮತ್, ಭಾರತ್ ಬೀಡೀಸ್ನ ನಿ ರ್ದೇಶಕ ಸುಬ್ರಾಯ ಪೈ, ಸುರತ್ಕಲ್ ಐ ನೀಡ್ ಕಣ್ಣಿನ ಚಿಕಿತ್ಸಾ ಕೇಂದ್ರದ ಸಂಸ್ಥೆಯ ಡಾ| ಅಜೇಯ ಕುಡ್ವಾ ಮತ್ತು ಒಮೇಗಾ ಆಸ್ಪತ್ರೆಯ ನಿರ್ದೇಶಕ ಡಾ| ಮಹಾ ಬಲ ರೈ, ಕ್ಷಮಾ ಅರುಣ್ ಕುಡ್ವಾ, ಡಾ| ರುಕಾ¾ ಅಜೇಯ್ ಕುಡ್ವಾ, ಡಾ| ಪೂಜಾ ಅಶೋಕ್ ಮೆನನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.