ಜನಾಕರ್ಷಣೆಯ ಕೇಂದ್ರವಾದ ಶ್ವಾನ ಪ್ರದರ್ಶನ
Team Udayavani, Jan 22, 2018, 9:56 AM IST
ಮಹಾನಗರ: ನಗರದ ನೆಹರೂ ಮೈದಾನದಲ್ಲಿ ಕರಾವಳಿ ಕೆನೈನ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿತ್ತು. ಭಾರತೀಯ ತಳಿಗಳು ಸೇರಿದಂತೆ ವಿದೇಶಿ ತಳಿಗಳ ಶ್ವಾನಗಳು ಕೂಡ ಭಾಗವಹಿಸಿ ತಮ್ಮ ಕರಾಮತ್ತು ಪ್ರದರ್ಶಿಸಿದವು. ಶ್ವಾನ ಪ್ರೀತಿ ಹಾಗೂ ಅವುಗಳಿಗೆ ಸಿಗುವ ಆತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರದರ್ಶನವನ್ನು ಬಿಜೆಪಿ ಮುಂದಾಳು ಬದ್ರಿನಾಥ್ ಕಾಮತ್ ಉದ್ಘಾಟಿಸಿದರು. ಒಟ್ಟು 31 ಜಾತಿಯ 185 ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸೌಂದರ್ಯ ಸ್ಪರ್ಧೆಯ ಶೈಲಿಯಲ್ಲಿ ಶ್ವಾನಗಳನ್ನು ವೇದಿಕೆಗೆ ಕರೆತಂದು ಪ್ರದರ್ಶಿಸಲಾಯಿತು.
ಮೂರು ವೇದಿಕೆ
ಶ್ವಾನ ಪ್ರದರ್ಶನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನದಂಡವೊಂದನ್ನು ರೂಪಿಸಲಾಗಿದ್ದು, ಅದೇ ನಿಯಮದನ್ವಯ ತೀರ್ಪುಗಾರರಾದ ರಷ್ಯಾದ ಎಲೆನಾ ಕುಲೆಶೊವಾ, ಯೋಗೇಶ್ ತುತೆಜಾ ಹಾಗೂ ಶರತ್ ಶರ್ಮ ಅವರು ಪ್ರದರ್ಶನ ನಡೆಸಿಕೊಟ್ಟರು. ಒಟ್ಟು ಮೂರು ವೇದಿಕೆಗಳಲ್ಲಿ ಬೇರೆ ಬೇರೆ ತಳಿಯ ಆಧಾರದಲ್ಲಿ ಪ್ರದರ್ಶನ ನಡೆಯಿತು.
ಪ್ರತಿ ತಳಿಯ ಶ್ವಾನಗಳಿಗೂ ಕೂಡ ಮಾನದಂಡ ನಿಗದಿಪಡಿಸಲಾಗಿತ್ತು. ಆ ಮಾನದಂಡಕ್ಕೆ ಹತ್ತಿರದಲ್ಲಿರುವ ಶ್ವಾನಗಳಿಗೆ ಬಹುಮಾನ ನೀಡಲಾಯಿತು. ಅವುಗಳ ವಯಸ್ಸನ್ನೂ ಪರಿಗಣಿಸಲಾಗಿತ್ತು. ಒಟ್ಟು 11 ಗ್ರೂಪ್‌ಗ್ಳಲ್ಲಿ ಟಾಪ್ ಹತ್ತನ್ನು ಆಯ್ದು ಕೊಂಡು ಬೆಸ್ಟ್ ಇನ್ ಶೋ ಎಂದು 8 ಶ್ವಾನಗಳಿಗೆ ಬಹುಮಾನ ನೀಡಲಾಯಿತು.
ಬೆಸ್ಟ್ ಇನ್ ಶೋ ಬ್ರೆಡ್ ಇಂಡಿಯಾ ಎಂಬ ಭಾರತೀಯ ತಳಿಗೆ ವಿಶೇಷ ಬಹುಮಾನ ವಿತ್ತು. ಪೂನಾ, ಸೊಲ್ಲಾಪುರ, ಬೆಂಗ
ಳೂರು, ಮೈಸೂರು, ಚೆನ್ನೈ, ಮಡಿಕೇರಿ, ಹೊಸದಿಲ್ಲಿ, ಕೋಲ್ಕತ್ತಾ, ಹೈದರಾಬಾದ್ ಮೊದಲಾದ ಭಾಗಗಳ ಶ್ವಾನಗಳು ಭಾಗವಹಿಸಿವೆ ಎಂದು ಕರಾವಳಿ ಕೆನೈನ್ ಕ್ಲಬ್ ಕಾರ್ಯದರ್ಶಿ ಪ್ರಸಾದ್ ಐತಾಳ್ ವಿವರಿಸಿದರು.
ಶ್ವಾನಗಳ ಪ್ರದರ್ಶನದ ಬಳಿಕ ಕಾರಿನಲ್ಲಿ ಎಸಿಯಲ್ಲಿ ಕುಳ್ಳಿರಿಸಿ ವಿರಾಮ ನೀಡಿದ್ದು ವಿಶೇಷ. ಪ್ರದರ್ಶನ ವೀಕ್ಷಿಸಲು ಟಿಕೆಟ್ ನಿಗದಿಯಾಗಿದ್ದರೂ ಜನರು ಮುಗಿಬಿದ್ದು ವೀಕ್ಷಿಸಿದರು. ಶ್ವಾನಗಳ ಆಹಾರವನ್ನೂ ಅಲ್ಲಿ ಮಾರಾಟಕ್ಕಿಡಲಾಗಿತ್ತು. ನನಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಅನೇಕ ಬಾರಿ ಇಂತಹ ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ ಎಂದು ಪಂಜಾಬ್ ಮೂಲದ ರೂಹಿ ಮೆಹ್ರಾ ಹೇಳುತ್ತಾರೆ.
ವಿವಿಧ ತಳಿಯ ಶ್ವಾನ
ಸ್ಪರ್ಧೆಯಲ್ಲಿ ಜರ್ಮನ್ ಶೆಫರ್ಡ್, ಲ್ಯಾಬ್ರಡರ್ ರಿಟ್ರೀವರ್, ಗೋಲ್ಡನ್ ರಿಟ್ರೀವರ್, ಬುಲ್ ಡಾಗ್ ಸೇರಿದಂತೆ ಸಾಮಾನ್ಯ ತಳಿಗಳು, ಜತೆಗೆ ಜಪಾನ್ ಮೂಲದ ಬೆಂಗಳೂರಿನಿಂದ ಬಂದ ಅಕಿಟಾ, ಥೈಲ್ಯಾಂಡ್ ಮೂಲದ ಮಂಗಳೂರಿನಿಂದ ಬಂದ ಮಾಲ್ಟಿಸ್, ಜರ್ಮನ್ ಮೂಲದ ಡಾಗ್ ಡಿ ಬರ್ಡಾಕ್ಸ್, ತಮಿಳುನಾಡು ಮೂಲದ ರಾಜಪಾಳಯಂ, ಕರ್ನಾಟಕ ಮೂಲದ ಮುಧೋಳ್ ಹೀಗೆ ಅನೇಕ ತಳಿಯ ಶ್ವಾನಗಳು ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.