ದೇಶೀಯ ಈರುಳ್ಳಿ ಪೂರೈಕೆ: ಬೆಲೆ ಇಳಿಕೆ ನಿರೀಕ್ಷೆ
Team Udayavani, Dec 10, 2019, 12:52 AM IST
ಮಂಗಳೂರು: ಇಲ್ಲಿನ ಸಗಟು ಮಾರುಕಟ್ಟೆಗೆ ದೇಶೀಯ ಈರುಳ್ಳಿ ಸೋಮವಾರ ಆವಕವಾಗಿದ್ದು, ಬೆಲೆ ತುಸು ಇಳಿದಿದೆ. ಈಜಿಪ್ಟ್ ಈರುಳ್ಳಿಯೂ ಬಂದಿದ್ದು, ಬೆಲೆಯೂ ಕಡಿಮೆಯಿದೆ. ದೇಶೀಯ ಹಳೆಯ ಮತ್ತು ಹೊಸ ಈರುಳ್ಳಿಗೆ ಸೋಮವಾರ ತಲಾ 10 ರೂ. ಕಡಿಮೆಯಾಗಿದೆ. ಈಜಿಪ್ಟ್ ಈರುಳ್ಳಿ 115ರಿಂದ 130 ರೂ.ಗೆ ಮಾರಾಟವಾಗಿದೆ. ಸೋಮವಾರ ಮಂಗಳೂರಿನಲ್ಲಿ ಈರುಳ್ಳಿಯ ಸರಾಸರಿ ಬೆಲೆ 70 ರೂ.ಗಳಿಂದ 150 ರೂ. ವರೆಗೆ ಇತ್ತು ಎಂದು ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲಿಯಾನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಗುಜರಾತ್ ಮತ್ತು ಇಂದೋರ್‌ನಿಂದ 5 ಲೋಡ್ ಈರುಳ್ಳಿ ಮಂಗಳೂರಿನ ಹಳೆ ಬಂದರು ಪ್ರದೇಶಕ್ಕೆ ಬಂದಿದ್ದು, ಸಗಟು ಮಾರುಕಟ್ಟೆಯಲ್ಲಿ 95 ರೂ.ಗಳಿಂದ 115 ರೂ.ಗೆ ಮಾರಾಟವಾಗಿದೆ. ಇದೇ ಈರುಳ್ಳಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ 130- 140 ರೂ. ಇತ್ತು. ಇದು ಹೊಸ ಈರುಳ್ಳಿ ಆಗಿದ್ದರೂ ಗುಣಮಟ್ಟ ಚೆನ್ನಾಗಿದೆ. ಬಂದರಿನ ತಲೆಹೊರೆ ಕಾರ್ಮಿಕರಿಗೆ ಇಂದು ಕೆಲಸ ಸಿಕ್ಕಿದ್ದು, ಖುಷಿಯಿಂದಿದ್ದರು ಎಂದು ತಲೆಹೊರೆ ಕಾರ್ಮಿಕರ ಸಂಘದ ಮುಖಂಡ ಬಿ.ಕೆ. ಇಮಿ¤ಯಾಜ್ ತಿಳಿಸಿದ್ದಾರೆ.
ಹಾಪ್‌ಕಾಮ್ಸ್‌ಗೆ ನಷ್ಟ
ಈರುಳ್ಳಿ ಬೆಲೆ ಏರಿಕೆಯು ಹಾಪ್‌ಕಾಮ್ಸ್‌ನ ದ.ಕ. ಜಿಲ್ಲಾ ಘಟಕಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಅವಿಭಜಿತ ದ.ಕ. ಜಿಲ್ಲೆಯ 104 ಹಾಸ್ಟೆಲ್‌ಗಳಿಗೆ 22ರಿಂದ 28 ರೂ. ಬೆಲೆಗೆ ಈರುಳ್ಳಿ ಪೂರೈಕೆ ಮಾಡುವ ಬಗ್ಗೆ ಹಾಪ್‌ಕಾಮ್ಸ್ ಗುತ್ತಿಗೆ ವಹಿಸಿಕೊಂಡಿದ್ದು, ಗುತ್ತಿಗೆಯ ಕರಾರನ್ನು ಪಾಲಿಸಲೇ ಬೇಕಿರುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ. ನವೆಂಬರ್ ಮೊದಲ ವಾರ 60 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ ಈಗ 118 ರೂ.ಗಳಿಂದ 130 ರೂ. ತನಕ ಇದೆ. ಇಷ್ಟೊಂದು ಬೆಲೆಗೆ ಈರುಳ್ಳಿ ಖರೀದಿಸಿ 22/ 28 ರೂ.ಗೆ ಸರಬರಾಜು ಮಾಡುತ್ತಿದೆ ಹಾಪ್‌ಕಾಮ್ಸ್. 104 ಹಾಸ್ಟೆಲ್‌ಗಳಿಗೆ ಪೂರೈಕೆ ಮಾಡಲು ದಿನಕ್ಕೆ 2 ಕ್ವಿಂಟಾಲ್ ಈರುಳ್ಳಿಯ ಆವಶ್ಯಕತೆ ಇದೆ. ಉತ್ತರ ಭಾರತದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುವ ಎನ್‌ಐಟಿಕೆ ಹಾಸ್ಟೆಲ್‌ಗೆ ದಿನಕ್ಕೆ ಸರಾಸರಿ 100 ಕೆ.ಜಿ. ಈರುಳ್ಳಿ ಪೂರೈಸಲಾಗುತ್ತಿದೆ.
ಹಾಸನ, ಚಿಕ್ಕಮಗಳೂರು ಮತ್ತು ಬೆಂಗಳೂರಿ ನಿಂದ ಈರುಳ್ಳಿ ಸರಬರಾಜು ಆಗುತ್ತದೆ. ಮಂಗಳವಾರ ಒಂದು ಟನ್ ಈರುಳ್ಳಿ ಬರುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ಜಿಲ್ಲಾ ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರ: ಸದ್ಯದಲ್ಲೇ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ಆಗ ದರ ಇಳಿಕೆ
ಯಾಗುವ ಸಾಧ್ಯತೆ ಇರುವುದರಿಂದ ಮಾರುಕಟ್ಟೆ, ಅಂಗಡಿಗಳಲ್ಲಿ ಈರುಳ್ಳಿ ದಾಸ್ತಾನು ಇರಿಸಿಕೊಳ್ಳಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದು ಕೃತಕ ಅಭಾವಕ್ಕೆ ಕಾರಣವಾಗಿದೆ. ಕುಂದಾಪುರದಲ್ಲಿ ಕೆಲವೇ ಕೆಲವು ಅಂಡಿಗಳಲ್ಲಿ ಇದ್ದ ಈರುಳ್ಳಿ ಕೆಜಿಗೆ 140 ರೂ. ಗಳಿಂದ 160 ರೂ.ವರೆಗೆ ಮಾರಾಟವಾಗಿದೆ.
ಉಡುಪಿಯಲ್ಲಿ ಗರಿಷ್ಠ 140 ರೂ.
ಉಡುಪಿ: ನಗರದ ಮಾರುಕಟ್ಟೆಯಲ್ಲಿ ಸೋಮವಾರ ಈರುಳ್ಳಿ ಬೆಲೆ ಏರಿಕೆಯಾಗಿದೆ. ಈರುಳ್ಳಿ ದರ ಕೆ.ಜಿ.ಗೆ 140 ರೂ., ಹೊಸತು 110 ರೂ., ಸಣ್ಣ ಗಾತ್ರದ್ದು, 90ರಿಂದ100 ರೂ., ಈಜಿಪ್ಟ್ ಈರುಳ್ಳಿ 125 ರೂ.ನಂತೆ ಮಾರಾಟವಾಗಿದೆ.
ಚಿಕ್ಕಮಗಳೂರು ನಾಟಿ ಈರುಳ್ಳಿಗೆ ಬೇಡಿಕೆ
ಬೆಳ್ತಂಗಡಿ: ಈರುಳ್ಳಿ ಗಗನ ಕುಸುಮ ವಾಗುತ್ತಿರುವ ನಡುವೆಯೇ ಈ ಭಾಗದ ಹೆಚ್ಚಿನ ಸಂತೆ ಮಾರುಕಟ್ಟೆಗಳಲ್ಲಿ ಚಿಕ್ಕಮಗಳೂರಿನ ನಾಟಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಚಿಕ್ಕಮಗಳೂರಿಂದ ಬರುವ ಗಾತ್ರದಲ್ಲಿ ಕಿರಿದಾದ ನಾಟಿ ಈರುಳ್ಳಿ ಕೆ.ಜಿ.ಗೆ 80ರಿಂದ 100 ರೂ.ಗೆ ಮಾರಾಟವಾಗುತ್ತಿದೆ.
ಹೊಟೇಲ್, ಗಾಡಿ ಅಂಗಡಿಗಳಿಗೆ ಸಂಕಷ್ಟ ಹೊಟೇಲ್, ತಳ್ಳುಗಾಡಿ ಅಂಗಡಿಗಳಲ್ಲಿ ಈರುಳ್ಳಿ ಬಜೆ, ಆಮ್ಲೆಟ್ ಸೇರಿದಂತೆ ಅಗತ್ಯ ಆಹಾರಗಳಿಗೆ ಈರುಳ್ಳಿ ಬಳಸದಂತಾಗಿದೆ. ಇದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಟೇಲ್ ಮಾಲಕರಲ್ಲಿ ವಿಚಾರಿಸಿದರೆ 50 ರೂ.ಗೆ ದರ ಇಳಿಕೆಯಾಗದ ವಿನಾ ಖರೀದಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತರಕಾರಿ ದರ ಏರಿಕೆ
ಹೆಚ್ಚಿನೆಲ್ಲ ತರಕಾರಿಗಳ ಬೆಲೆಯೂ ಏರಿದೆ. ಬೀನ್ಸ್ ಕೆಜಿಗೆ 25-30 ರೂ. ಇದ್ದುದು ಈಗ 50 ರೂ., ಅಲಸಂಡೆ 30 ರೂ.ನಿಂದ 60 ರೂ., ಬೆಂಡೆಕಾಯಿ 30 ರೂ. ಇದ್ದುದು 60 ರೂ., ಬಿಟ್ರೂಟ್ 30 ರೂ.ನಿಂದ 60 ರೂ.ಗೆ ಏರಿಕೆಯಾಗಿದೆ. 3-4 ದಿನಗಳ ಹಿಂದೆ 1 ಕೆಜಿ ಕೊತ್ತಂಬರಿ ಸೊಪ್ಪಿಗೆ 80 ರೂ. ಇದ್ದುದು ಈಗ 200 ರೂ.ವರೆಗೆ ಏರಿದೆ. ನುಗ್ಗೆಕಾಯಿ 280ರಿಂದ 300 ರೂ. ಇದೆಯಾದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಚಳಿಯಲ್ಲಿ ಬೆಳೆಯ ಪ್ರಮಾಣ ಕಡಿಮೆ ಇರುವುದರಿಂದ ತರಕಾರಿ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಕುಂದಾಪುರದ ತರಕಾರಿ ವ್ಯಾಪಾರಿ ಗಣೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.