ದಾನಿಗಳು,ಸೇವಾರ್ಥಿಗಳು,ಸಾಧಕರಿಗೆ ಸಮ್ಮಾನ
ಇರುವೈಲು ಬ್ರಹ್ಮಕಲಶಾಭಿಷೇಕ
Team Udayavani, Apr 30, 2019, 6:00 AM IST
ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸೋಮವಾರ ಜರಗಿದ ಬ್ರಹ್ಮಕಲಶಾಭಿಷೇಕದ ಸಂದರ್ಭ ನಡೆದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿರುವ ನಾಲ್ವರನ್ನು ಸಮ್ಮಾನಿಸಲಾಯಿತು.
ಹತ್ತು ವರ್ಷಗಳಿಂದ ಅನ್ನದಾನಕ್ಕೆ ಕೊಡುಗೆ ನೀಡುತ್ತ ಬಂದಿರುವ ಸಂತೋಷ್ ಶೆಟ್ಟಿ ಜಾರ್ಕಳ ನಡಿಕೆರೆಗುತ್ತು (ಗುಜರಾತ್), ಜೀರ್ಣೋದ್ಧಾರ ಮತ್ತು ಇತರ ವಿಷಯಗಳಲ್ಲಿ ಕೊಡುಗೆ ನೀಡುತ್ತಿರುವ,ಕಂಬಳದ ಸಾಧಕ ಬಾಡ ಪೂಜಾರಿ ಪಾಣಿಲ, ಧಾರ್ಮಿಕ ಸಾಮರಸ್ಯ ಸಾರುತ್ತಿರುವ ಮಾರ್ಕ್ ಪಿಂಟೋ ಬೋಲೆ ,ಕ್ಷೇತ್ರದ ವಿಶೇಷ ದಾನಿ, ಇರುವೈಲು ಮೇಳದ ರಂಗಮಂಟಪಕ್ಕಾಗಿ ಗಣ್ಯ ಮೊತ್ತ ನೀಡಿರುವ ಸುಂದರಿ ಪೂಜಾರಿ ತ್ಯಾಂಪೆಟ್ಟು ಅವರನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರು ಅಧ್ಯಕ್ಷತೆ ವಹಿಸಿದ್ದರು.ಹಿಂದೆ ಆಡಳಿತ ಮೊಕ್ತೇಸರರಾಗಿದ್ದ ಡಾ|ಐ.ವಿ.ಆಸ್ರಣ್ಣ ಅವರ ಪತ್ನಿ ಹೇಮಲತಾ ಐ.ವಿ.ಆಸ್ರಣ್ಣ, ಕೆಎಂಎಫ್ ಜಿಲ್ಲಾಧ್ಯಕ್ಷ ರವಿರಾಜ ಹೆಗ್ಡೆ, ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರಾಮಚಂದ್ರ ಮಿಜಾರು,ಉದ್ಯಮಿಗಳಾದ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಉಮೇಶ ಕರ್ಕೇರ (ಮುಂಬಯಿ), ಬ್ರ.ಕ. ಸಮಿತಿ ಗೌರವಾಧ್ಯಕ್ಷ ಶ್ರೀಪತಿ ಭಟ್, ಜಗದೀಶ ಅಧಿಕಾರಿ, ವೇದವಿದ್ವಾಂಸ ಪಂಜ ಭಾಸ್ಕರ ಭಟ್,ಪಿಎಸ್‌ಐ ಸಾವಿತ್ರಿ ನಾಯಕ್, ದೇಗುಲದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್.ಶೆಟ್ಟಿ (ಮುಂಬಯಿ), ಅಧ್ಯಕ್ಷ ಕೆ. ಪೂವಪ್ಪ ಸಾಲ್ಯಾನ್,ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್, ಪ್ರ. ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ದೊಡ್ಡಗುತ್ತು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.