ಅಳಿವಿನಂಚಿನ “ಶ್ರೀತಾಳೆ ಮರ’ವ ಕಡಿಯಬೇಡಿರೋ
Team Udayavani, Nov 20, 2021, 4:27 AM IST
ಮೂಡುಬಿದಿರೆ: ಪ್ರಪಂಚದಲ್ಲೇ ಅಪರೂಪವೆನಿಸಿರುವ ಅಳಿವಿನಂಚಿನಲ್ಲಿರುವ ಶ್ರೀತಾಳೆ (ಪಣೋಲಿ) ಮರ ವೇಣೂರು ಸಮೀಪದ ಕರಿಮಣೇಲು ಗ್ರಾಮದಲ್ಲಿ ರವಿವಾರ ಬೆಳಗ್ಗೆ 9.55ಕ್ಕೆ ಕೊಡಲಿಗಾಹುತಿಯಾಗಲು ಎಲ್ಲ ಸಿದ್ಧತೆ ನಡೆಯುತ್ತಿದ್ದು ಇದನ್ನು ಸಂರಕ್ಷಿಸುವಂತೆ ವೃಕ್ಷ ಅಭಿಮಾನಿಗಳು ಸಸ್ಯ ವಿಜ್ಞಾನಿಗಳು ಊರವರನ್ನು, ಅರಣ್ಯ ಇಲಾಖೆಯವರನ್ನು ವಿನಂತಿಸಿದ್ದಾರೆ.
ಶ್ರೀತಾಳೆ ಮರ ಹೂ ಬಿಟ್ಟು ಅವಸಾನ ಹೊಂದುವುದು ಸಹಜ ಪ್ರಕ್ರಿಯೆ. ಆದರೆ ಹೀಗೆ ಹೂಬಿಟ್ಟರೆ ಊರಿಗೇ ಅನಿಷ್ಟ ಎಂಬ ಅಪನಂಬಿಕೆಯಿಂದ ಅದನ್ನು ಕಡಿಯಲು ಜನ ಮುಂದಾಗುತ್ತಾರೆ. ಹೂ ಬಿಟ್ಟ ಬಳಿಕ ಸಾಯುವಾಗ ಈ ಮರವು ಸುಮಾರು 3 ಲಕ್ಷ ಬೀಜಗಳನ್ನು ಉದುರಿಸುವುದು. ಇದರಲ್ಲಿ ಕನಿಷ್ಠ ಶೇ. 10ರಷ್ಟು ಬೀಜಗಳಾದರೂ ಮತ್ತೆ ಸಸಿಯಾ ಗಲು ಸಾಧ್ಯ. ಈ ಮರ ಸುಮಾರು ಒಂದು ಕಿ.ಮೀ. ವ್ಯಾಪ್ತಿಯವರೆಗೂ ಬೇರುಗಳನ್ನು ಚಾಚುವ ಮೂಲಕಮಣ್ಣಿನ ಸವಕಳಿ ತಡೆಯುವುದಲ್ಲದೆ, ನೀರಿಂಗಿಸಲೂ ಸಹಕಾರಿ. ಅನೇಕ ಕಾಯಿಲೆಗಳನ್ನು ಗುಣಪಡಿ
ಸಲೂ ಬಳಕೆಯಾಗುತ್ತದೆ. ಶ್ರೀರಾಮ ಚಂದ್ರನ ಪರ್ಣಕುಟಿ, ವಾಮನನ ಒಲಿಕೊಡೆ ತಯಾರಾದದ್ದು ಈ ಮರದ ಎಲೆಗಳಿಂದ.
ಇದನ್ನೂ ಓದಿ:ಎಲ್ಲರೂ ನನ್ನನ್ನು ಸೋಲಿಸಿ ಈಗ ಟಿಕೆಟ್ ಕೇಳಲು ಇಲ್ಲಿ ಬಂದಿದ್ದೀರ?
ಉಡುಪಿಯ ಪ್ರಾಚ್ಯಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಕರಿಮಣೇಲು ದೇವಸ್ಥಾನಕ್ಕೆ ಸಂಬಂಧಿಸಿರುವ ಚಂದ್ರಶೇಖರ ಗಿರಿಜಮ್ಮ ಅವರೊಂದಿಗೆ ಮಾತನಾಡಿ, ಮರ ಕಡಿಯಬೇಡಿ ಎಂದು ವಿನಂತಿಸಿದ್ದಾರೆ.
ಮಠಾಧೀಶರಿಗೆ ಮೊರೆ
ಮೂಡುಬಿದಿರೆಯ ಶ್ರೀ ಜೈನಮಠಾಧೀಶರನ್ನು ಪ್ರೊ| ಎಸ್.ಎ. ಕೃಷ್ಣಯ್ಯ, ಸಂಶೋಧನಾರ್ಥಿ ಶುತ್ರೇಶ್ ಆಚಾರ್ಯ ಮೂಡುಬೆಳ್ಳೆ, ಗಣೇಶ್‌ರಾಜ್ ಸರಳೇಬೆಟ್ಟು, ರವಿಸಂತೋಷ್ ಆಳ್ವ ಭೇಟಿ ಮಾಡಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಮರವನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.