ನಗರಸಭೆ ರಸ್ತೆ ಬದಿ ತ್ಯಾಜ್ಯ ಎಸೆದರೆ ದಂಡ


Team Udayavani, May 4, 2018, 8:40 AM IST

Kasa-3-5.jpg

ನಗರ: ಪುತ್ತೂರು ಪೇಟೆಯ ಹೆಚ್ಚಿನ ರಸ್ತೆಗಳ ಬದಿ ತ್ಯಾಜ್ಯ ರಾಶಿ ಬಿದ್ದುಕೊಂಡಿದೆ. ಇವುಗಳನ್ನು ನಾಯಿ, ಕಾಗೆಗಳು ಹೆಕ್ಕಿ ತಿನ್ನುತ್ತಿದ್ದು, ರೋಗಭೀತಿ ಎದುರಾಗಿದೆ. ಇದನ್ನು ನಿಯಂತ್ರಿಸಲು ಸಿಸಿ ಕೆಮರಾ ಅಳವಡಿಸಿ, ತ್ಯಾಜ್ಯ ಸುರಿಯುವವರಿಗೆ ಪೊಲೀಸರ ಮೂಲಕ ದಂಡ ವಿಧಿಸಲು ನಗರಸಬೆ ಮುಂದಾಗಿದೆ. ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಸಹಿತ ಹಲವು ರಸ್ತೆಗಳಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಡಸ್ಟ್‌ ಬಿನ್‌ಗಳನ್ನು ಅಲ್ಲಲ್ಲಿ ಇಟ್ಟಿದ್ದರೂ, ಯಾವುದೇ ಪ್ರಯೋಜನ ಇಲ್ಲ. ಕೆಲ ಡಸ್ಟ್‌ಬಿನ್‌ ಗಳಲ್ಲಿ ಕಸ ತುಂಬಿ, ಹೊರಗಡೆ ಚೆಲ್ಲಾಡುತ್ತಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿ ಹೇಳಲಾಗಿದೆ. ಆದರೆ ಯಾರೊಬ್ಬರಿಗೂ ಇದರ ಬಗ್ಗೆ ಅರಿವು ಮೂಡಿದಂತೆ ಕಾಣುತ್ತಿಲ್ಲ. ಆದ್ದರಿಂದ ದಂಡ ಹಾಕುವುದೇ ಅಂತಿಮ ದಾರಿ ಎನ್ನುವುದನ್ನು ನಗರಸಭೆ ಮನಗಂಡಿದೆ.

ದುರ್ವಾಸನೆ, ನಾಯಿ ಕಾಟ
ಮೊದಲು ರಸ್ತೆ ಬದಿ ಡಬ್ಬಿ ಇಟ್ಟು, ಪ್ರತಿದಿನ ಪೌರಕಾರ್ಮಿಕರು ಲಾರಿಯಲ್ಲಿ ಬಂದು ಕಸ ತೆರವು ಮಾಡುತ್ತಿದ್ದರು. ಇದರ ಸಮಸ್ಯೆ ಏನೆಂದರೆ, ತ್ಯಾಜ್ಯ ಸುರಿಯುತ್ತಿದ್ದ ರಸ್ತೆ ಬದಿಯಿಂದ ನಡೆದುಕೊಂಡು ಹೋಗಲಾಗದಷ್ಟು ಕೆಟ್ಟ ವಾಸನೆ ಬೀರುತ್ತಿತ್ತು. ನಾಯಿಗಳ ಉಪಟಳವೂ ಹೆಚ್ಚಾಗಿತ್ತು. ಇದಕ್ಕೆ ಪರಿಹಾರ ನೀಡಲು ಮುಂದಾದ ನಗರಸಭೆ, ಡಬ್ಬಿಗಳನ್ನು ತೆರವು ಮಾಡಿ, ಮನೆ- ಅಂಗಡಿಗಳ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವ ಹೊಸ ವ್ಯವಸ್ಥೆಗೆ ಬುನಾದಿ ಹಾಡಿತು.

ದರ್ಬೆಯಿಂದ ಪುತ್ತೂರು ಪೇಟೆ ಹಾಗೂ ಪುತ್ತೂರು ಪೇಟೆಯಿಂದ ಬೊಳುವಾರು ವರೆಗೆ ಎರಡು ವಿಭಾಗ ಮಾಡಿ, ಪ್ರತಿ ಅಂಗಡಿ- ಮನೆಗಳ ಬಾಗಿಲಿಗೇ ತೆರಳಿ ಕಸ ಸಂಗ್ರಹ ಮಾಡಲಾಯಿತು. ಇದರ ಗುತ್ತಿಗೆಯನ್ನು ಸ್ವಸಹಾಯ ಸಂಘಗಳಿಗೆ ಹೊರಿಸಲಾಯಿತು. ಜನರ ಅಸಹಕಾರ ಹಾಗೂ ನಗರಸಭೆಯ ನಿರ್ಲಕ್ಷ್ಯವೋ ಎಂಬಂತೆ ಇದು ಅಷ್ಟಾಗಿ ಚಾಲ್ತಿಗೆ ಬರಲೇ ಇಲ್ಲ. ಇದೀಗ ಮತ್ತೂಮ್ಮೆ ಇದೇ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ಜಾರಿಗೆ ತರಲು ನಗರಸಭೆ ಮುಂದಾಗಿದೆ.

ಕೆಟ್ಟು ನಿಂತ ಲಾರಿ
ಹಲವು ರಸ್ತೆಗಳ ಬದಿ ತ್ಯಾಜ್ಯ ರಾಶಿ ಹಾಗೆಯೇ ಬಿದ್ದುಕೊಂಡಿದೆ. ಇದಕ್ಕೆ ಕಾರಣ ಹುಡುಕಿದಾಗ, ತ್ಯಾಜ್ಯ ಕೊಂಡೊಯ್ಯುವ ಲಾರಿ ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ. ಪುತ್ತೂರು ನಗರಸಭೆಯಲ್ಲಿ ಒಟ್ಟು 14 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ ಹತ್ತು ಮಂದಿ ಮನೆ- ಅಂಗಡಿ ಬಾಗಿಲಿನಿಂದ ಕಸ ಸಂಗ್ರಹಿಸಲು ತೆರಳುತ್ತಾರೆ. ಉಳಿದ ನಾಲ್ವರನ್ನು, ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆಂದೇ ನೇಮಿಸಲಾಗಿದೆ. ಇವರು ಲಾರಿಯಲ್ಲಿ ಕಸ ತುಂಬಿ, ಡಂಪಿಂಗ್‌ ಯಾರ್ಡ್‌ಗೆ ಸುರಿಯಬೇಕು. ಆದರೆ ಲಾರಿ ಕೆಟ್ಟು ನಿಂತಿರುವುದರಿಂದ ಕಸ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಡೋರ್‌ ಟು ಡೋರ್‌ ಕಲೆಕ್ಷನ್‌
ಮೇ ಪ್ರಥಮ ವಾರದಿಂದಲೇ ಪ್ರತಿ ಮನೆ, ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆದರೆ ಪೌರಕಾರ್ಮಿಕರಿಗೆ ಇದು ಹೊಸ ಕೆಲಸವಾದ ಕಾರಣ, ಇನ್ನೂ ಸಮರ್ಪಕ ಕೆಲಸಕ್ಕೆ 15 ದಿನ ಬೇಕು ಎನ್ನುತ್ತಾರೆ ಪೌರಾಯುಕ್ತರು.

ಕಸ ಪ್ರತ್ಯೇಕಿಸಿಯೇ ನೀಡಬೇಕು
ಈ ಯೋಜನೆಯಡಿ 11,500 ಡಸ್ಟ್‌ ಬಿನ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದನ್ನು ಇಡಿಯ ಪುತ್ತೂರಿನ ಮನೆ, ಅಂಗಡಿಗಳಿಗೆ ಅಗತ್ಯದಷ್ಟು ವಿತರಿಸಲಾಗುವುದು. ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿಯೇ ಕಸ ನೀಡಬೇಕು. ಆದರೆ ಈ ವ್ಯವಸ್ಥೆ ಇನ್ನೂ ಜಾರಿಗೇ ಬಂದಿಲ್ಲ. ಸದ್ಯ ಚುನಾವಣೆ ಮುಗಿಯುವವರೆಗೆ ಇದನ್ನು ಜಾರಿಗೆ ತರುವುದು ಸುಲಭದ ಮಾತಲ್ಲ. ಏನಿದ್ದರೂ ಚುನಾವಣೆ ಮುಗಿದ ಬಳಿಕವಷ್ಟೇ ಕ್ರಮ ಕೈಗೊಳ್ಳಬೇಕು. ಇದರ ಬೆನ್ನಿಗೇ ಪೊಲೀಸರ ಸಹಕಾರ ಪಡೆದುಕೊಂಡು ತ್ಯಾಜ್ಯ ರಾಶಿ ಬೀಳುವ ಸ್ಥಳಗಳ ಬಳಿ ಸಿಸಿ ಕೆಮರಾ ಹಾಕಲಾಗುವುದು. ಇದರ ಮೂಲಕ ಕಸ ರಾಶಿ ಹಾಕುವವರನ್ನು ಪತ್ತೆ ಹಚ್ಚಿ, ದಂಡ ವಿಧಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಟಿಪ್ಪರ್‌ ದುರಸ್ತಿ
ರಸ್ತೆ ಬದಿ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಪಾಯಿಂಟ್‌ಗಳನ್ನು ಗುರುತಿಸಿ ಸಿಸಿ ಕೆಮರಾ ಹಾಕಲಾಗುವುದು. ಇದರಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ದಂಡ ವಿಧಿಸಲಾಗುವುದು. ಸದ್ಯ ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆ ಟಿಪ್ಪರ್‌ ಹಾಳಾಗಿದೆ. ಸರಿಪಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ

— ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

22-uv-fusion

TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

20-uv-fusion

UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.