ಆರ್‌ಸಿಇಪಿ ಒಪ್ಪಂದದ ಬಗ್ಗೆ ಆತಂಕ ಬೇಡ: ನಳಿನ್
Team Udayavani, Nov 2, 2019, 4:24 AM IST
ಸುಳ್ಯ: ಆರ್‌ಸಿಇಪಿ ಒಪ್ಪಂದ ಈಗ ಚರ್ಚೆ ಹಂತದಲ್ಲಿ ಮಾತ್ರ ಇದೆ. ಹಾಗಾಗಿ ಈ ಬಗ್ಗೆ ಹರಿದಾಡುತ್ತಿರುವ ಅಭಿಪ್ರಾಯ, ವರದಿಗಳಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಆರ್‌ಸಿಇಪಿ ಕುರಿತಂತೆ ಕೇಂದ್ರ ಸರಕಾರವು ರೈತ, ಕೃಷಿಕ ಮತ್ತು ಯೂನಿಯನ್ ಮುಖಂಡರ ಜತೆ ಚರ್ಚೆ ನಡೆಸಿದೆ. ಈ ಒಪ್ಪಂದವನ್ನು ನೇರವಾಗಿ ಹೇರಿಕೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ರೈತ ವಿರೋಧಿ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಿಲ್ಲ ಎಂದು ನಳಿನ್ ಹೇಳಿದರು.
ರಾಜ್ಯದಲ್ಲಿ ಅಡಿಕೆ ಕೃಷಿ ಮಾತ್ರವಲ್ಲದೆ ಹಾಲಿನ ವ್ಯವಹಾರವೂ ಇದೆ. ಈ ಎಲ್ಲ ಸಂಗತಿಗಳನ್ನು ಗಣನೆಯಲ್ಲಿ ಇರಿಸಿಕೊಂಡು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಒಪ್ಪಂದ ರೈತ ವಿರೋಧಿಯಾಗಿ ಜಾರಿ ಆಗುವುದಿಲ್ಲ. ಜಾರಿಯಿಂದ ತೊಂದರೆಯಾಗುವ ಸಂದರ್ಭ ಎದುರಾದರೆ ನಾವೆಲ್ಲರೂ ಸೇರಿ ಅದನ್ನು ವಿರೋಧಿಸುತ್ತೇವೆ ಎಂದು ಕಟೀಲು ಉತ್ತರಿಸಿದರು.
ಅಕಾಡೆಮಿ ನೇಮಕ ವಿಚಾರದಲ್ಲಿ ಸಮಸ್ಯೆ
ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿ ಅಕಾಡೆಮಿ ಗಳ ನೇಮಕ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆ ಸಂದರ್ಭ ಕೆಲವು ಸಮಸ್ಯೆಗಳು ಆಗಿರು ವುದು ನಿಜ. ಈ ಸಮಸ್ಯೆ ಸರಿಪಡಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಾಗು ವುದು ಎಂದು ನಳಿನ್ ಹೇಳಿದರು.
ಅಡಿಕೆ ಸಮಸ್ಯೆ ಪರಿಹಾರಕ್ಕೆ ಕ್ರಮ
ಅಡಿಕೆ ಸಮಸ್ಯೆಗೆ ಸಂಬಂಧಿಸಿ ಮುಖ್ಯಮಂತ್ರಿ ಗಳು ಜಿಲ್ಲೆಯ ಎಲ್ಲ ಅಡಿಕೆ ಬಳೆಗಾರರ ಮುಖಂಡರನ್ನು ಕರೆದು ಅಭಿಪ್ರಾಯ ಆಲಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.
ಟಿಪ್ಪು ಬದಲು ಕಲಾಂ ವಿಚಾರ ಸೇರಿಸಲಿ
ಟಿಪ್ಪುವಿನ ಇತಿಹಾಸವನ್ನು ನೋಡಿದಾಗ ಆತನ ಆಕ್ರಮಣಕಾರಿ ಹೋರಾಟ ಬೆಳಕಿಗೆ ಬರುತ್ತದೆ. ನೆತ್ತರಕರೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಸಿರುವುದು ಅದಕ್ಕೊಂದು ಸಣ್ಣ ಉದಾಹರಣೆ. ಇಷ್ಟಾಗಿಯೂ ಟಿಪ್ಪುವಿನ ದಿನಾಚರಣೆ ಮಾಡ ಬೇಕು, ಪಠ್ಯದಲ್ಲಿ ಸೇರಿಸಬೇಕೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ ಅವರ ವಿಚಾರಧಾರೆಯನ್ನೂ ಸೇರಿಸಲಿ ಎಂದು ನಳಿನ್ ಹೇಳಿದರು.
ಶಾಸಕ ಅಂಗಾರ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ಸುಬೋಧ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.