ಹೊಸ ವಾಹನ ಕೊಳ್ಳುವವರಿಗೆ ಡಬಲ್ ಧಮಾಕಾ
ಡೀಲರ್‌ಗಳು, ವಾಹನ ಕಂಪೆನಿಗಳ ಅವಳಿ ಆಫರ್
Team Udayavani, Sep 28, 2019, 4:35 AM IST
ಸೆ. 29ರಿಂದ ನವರಾತ್ರಿ ಆರಂಭ. ಅ. 7ರಂದು ಆಯುಧಪೂಜೆ. ಅಂದು ಹೊಸ ವಾಹನಗಳನ್ನು ಕೊಂಡೊಯ್ಯಲು ಈ ತಿಂಗಳೊಳಗೆ ಕಾದಿರಿಸಬೇಕು. ಉಳಿದಿರುವುದು ಮೂರೇ ದಿನ. ಡೀಲರ್‌ಗಳು, ವಾಹನ ಉತ್ಪಾದಕ ಕಂಪೆನಿಗಳು ಆಫರ್‌ಗಳನ್ನು ಘೋಷಿಸಿರುವುದೇ ವಿಶೇಷ.
ಮಂಗಳೂರು/ಉಡುಪಿ: ಆರೇಳು ತಿಂಗಳುಗಳಿಂದ ದೇಶದಲ್ಲಿ ಆರ್ಥಿಕ ಹಿಂಜರಿತದ ಕತ್ತಲೆಯ ಭಯ ಆವರಿಸಿತ್ತಾದರೂ ಗ್ರಾಹಕರ ಪಾಲಿಗಂತೂ ಈ ದಸರಾ-ದೀಪಾ ವಳಿಯಲ್ಲಿ ಡಬಲ್ ಧಮಾಕಾ. ಕಾರಣವಿಷ್ಟೇ. ಇದೇ ಮೊದಲ ಬಾರಿಗೆ ವಾಹನ ಉತ್ಪಾದಕ ಕಂಪೆನಿಗಳು ಮತ್ತು ಡೀಲರ್ ಗಳು ಆಫರ್‌ಗಳನ್ನು ಘೋಷಿಸಿ ರುವುದು. ಇದುವರೆಗೆ ಸಾಮಾನ್ಯ ವಾಗಿ ಡೀಲರ್‌ಗಳು ಅಥವಾ ಉತ್ಪಾದಕ ಕಂಪೆನಿಗಳು ಡಿಸ್ಕೌಂಟ್ ಆಫರ್‌ಗಳನ್ನು ಘೋಷಿಸುತ್ತಿದ್ದವು. ಇಬ್ಬರೂ ಒಟ್ಟಿಗೆ ಘೋಷಿಸಿದ್ದು ತೀರಾ ಕಡಿಮೆ. ಆದ ಕಾರಣ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ವಾಹನೋದ್ಯಮದಲ್ಲಿ ಆಫರ್‌ಗಳ ಸಾಲು
ಬಹು ಮುಖ್ಯವಾಗಿ ಕೆಲವು ತಿಂಗಳುಗಳಿಂದ ವಾಹನೋದ್ಯಮದಲ್ಲಿ ಬೇಡಿಕೆ ತಗ್ಗಿತ್ತು. ಜತೆಗೆ ಆರ್ಥಿಕ ಹಿಂಜರಿತದ ಹೊಡೆತ. ಕೇಂದ್ರ ಸರಕಾರ ಬಿಎಸ್ 4 ವಾಹನಗಳ ನಿಷೇಧ ವಾಪಸು ಸಹಿತ ಹಲವು ಉಪಕ್ರಮ ಘೋಷಿಸಿದ್ದರಿಂದ ಮಾರು ಕಟ್ಟೆ ತುಸು ಚೇತರಿಕೆ ಕಂಡಿದೆ. ಈ ಅವ ಕಾಶ ವನ್ನು ಬಳಸಿ ಕೊಳ್ಳಲು ಉದ್ಯಮಗಳು ಮುಂದಾ ಗಿವೆ. ಪರಿಹಾರ ಕ್ರಮ ಘೋಷಣೆ ವಿಳಂಬವಾದ ಕಾರಣ ದಸರಾ ದಲ್ಲಿ ಸಕಾ ರಾತ್ಮಕ ಪರಿಣಾಮ ಕೊಂಚ ಕಡಿಮೆ ಎನಿಸಿದರೂ ದೀಪಾ ವಳಿಗಂತೂ ಮಾರುಕಟ್ಟೆ ಪ್ರಕಾಶಿಸುವ ಲಕ್ಷಣಗಳಿವೆ.
ವಾಹನ ಕೊಳ್ಳಲು ಇದೇ ಸಕಾಲ
ವಾಹನಗಳನ್ನು ಕೊಳ್ಳುವವರಿಗಂತೂ ಇದು ಸಕಾಲ. ಹೊಸ ಕಾರುಗಳನ್ನು ಕೊಳ್ಳುವವರಿಗೆ ವಿಶಿಷ್ಟ ಲಾಭ. ಹಳೆಯ ಕಾರನ್ನು ಬದಲಿಸುವವರಿಗೂ ಅವಕಾಶಗಳು ಸಾಕಷ್ಟಿವೆ. ಯಾಕೆಂದರೆ ವಿನಿಮಯ ಕೊಡುಗೆಗಳಿಗೆ ಕೊರತೆ ಇಲ್ಲ. ದ್ವಿಚಕ್ರ ವಾಹನಗಳೂ ತರಹೇವಾರಿ ಆಫರ್‌ಗಳೊಂದಿಗೆ ಸಿದ್ಧವಾಗಿವೆ.
ಹುಂಡೈ ಕಂಪೆನಿಯ 10 ಮಾದರಿಯ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರ್ಯಾಂಡ್ ಐ20, ಐ10, ಗ್ರ್ಯಾಂಡ್ ನಿಯೂಸ್, ಕ್ರೆಟ್ಟಾ, ವೆನ್ಯೂ ಸೇರಿದಂತೆ ಎಲ್ಲಾ ವಾಹನಗಳಿಗೂ ಪ್ರತ್ಯೇಕವಾಗಿ ಗರಿಷ್ಠ 60,000 ರೂ.ವರೆಗೆ ಆಫರ್‌ಗಳಿವೆ.
“ನನ್ನ ವೃತ್ತಿ ಬದುಕಿನ ಹದಿನೆಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಆಫರ್‌ಗಳನ್ನು ನೀಡುತ್ತಿರುವುದು. ಬಹಳ ಮುಖ್ಯವಾಗಿ ಉತ್ಪಾದಕ ಕಂಪೆನಿಗಳು ಮತ್ತು ಡೀಲರ್‌ಗಳಿಬ್ಬರೂ ಆಫರ್‌ಗಳನ್ನು ನೀಡುತ್ತಿರುವುದು ಇದೇ ಮೊದಲು. ಪ್ರಾಮಾಣಿಕವಾಗಿ ಹೇಳುವುದಾದರೆ ಈ ಅವಕಾಶ ಸಿಗುವುದು ತೀರಾ ಅಪರೂಪ’ ಎನ್ನುತ್ತಾರೆ ಹುಂಡೈ ಕಾರುಗಳ ಅಧಿಕೃತ ಮಾರಾಟದಾರರಾದ ಕಾಂಚನ್ ಹುಂಡೈನ ಪ್ರಸಾದ್ ರಾಜ್ ಕಾಂಚನ್.
ಹಾಗೆಯೇ ಮಾರುತಿ ಸುಜುಕಿಯ ಬ್ರಿಜಾ, ಸ್ವಿಫ್ಟ್, ಸೆಲರಿಯೋ, ಆಲ್ಟೋ, ಇಕೋ, ಬಲೆನೊ, ಸಿಯಾಜ್ ಸೇರಿದಂತೆ ಹಲವು ವಾಹನಗಳಿಗೆ ಗರಿಷ್ಠ 1.05 ಲಕ್ಷ ರೂ. ನಿಂದ ಕನಿಷ್ಠ 45,000ವರೆಗೆ ಆಫರ್‌ಗಳನ್ನು ಪ್ರಕಟಿಸಲಾಗಿದೆ. ಒಂದೊಂದು ವಾಹನಗಳ ಆಫರ್‌ಗಳು ಭಿನ್ನವಾಗಿರುತ್ತದೆ. ಟಾಟಾ ಕಂಪೆನಿಗೆ ಸೇರಿದ ಟಿಯಾಗೋ, ಟಿಗೋರ್, ನೆಕ್ಸಾನ್, ಹೆಕ್ಸಾ, ಹ್ಯಾರಿಯರ್ ಕಾರುಗಳು ಗರಿಷ್ಠ 1.18 ಲಕ್ಷ ರೂ.ಗಳಿಂದ ಕನಿಷ್ಠ 65,000 ರೂ.ವರೆಗೆ ದರ ಕಡಿತದಲ್ಲಿ ಸಿಗಲಿವೆ.
ಹ್ಯಾಚ್‌ಬ್ಯಾಕ್ ಕಾರುಗಳಿಗೆ ಬೇಡಿಕೆ
ಮಾರುತಿ ಕಂಪೆನಿ ಕಾರುಗಳ ಮೇಲೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಕಾರ್ಪೊರೆಟ್ ತೆರಿಗೆ ಕಡಿಮೆಯಾಗಿರುವುದು ಗ್ರಾಹಕರಿಗೆ ವರದಾನ. ಎಲ್ಲ ವಾಹನಗಳ ಮೇಲೂ 50 ಸಾವಿರಗಳಿಂದ 1 ಲಕ್ಷ ರೂ.ವರೆಗೆ ರಿಯಾಯಿತಿ ದರವಿದೆ. ವಿಶೇಷವಾಗಿ ಬ್ರಿàಝಾ ಕಾರುಗಳ ಮೇಲೆ 1.05 ಲಕ್ಷ ರೂ. ವರೆಗೆ ಆಫರ್‌ಗಳಿವೆ. ಹ್ಯಾಚ್‌ಬ್ಯಾಕ್ ಕಾರುಗಳಿಗೆ ತುಸು ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಉಡುಪಿಯ ಆಭರಣ ಮೋಟಾರ್ನ ಜಿಎಂ ಅರುಣ್ ಕಾಮತ್.
ಫೋರ್ಡ್‌ನ ಫಿಗೋ, ಫ್ರೀಸ್ಟೈಲ್, ಆ್ಯಸ್ಪೈರ್, ಇಕೋ ನ್ಪೋರ್ಟ್ಸ್, ಎಂಡೆವರ್ ವಾಹನಗಳಿಗೂ ಗರಿಷ್ಠ 40,000 ರೂ.ಗಳಿಗಿಂತ 20,000 ರೂ. ವರೆಗೆ ಷರತ್ತು ಬದ್ಧ ಆಫರ್‌ಗಳಿವೆ. ಮಹೀಂದ್ರ ಕಂಪೆನಿಗೆ ಸೇರಿದ, 10 ಲಕ್ಷ ರೂ.ಗಳಿಗಿಂತ ಅಧಿಕ ಮೌಲ್ಯದ ಮರಾಝೋ, ಎಸ್‌ಯುವಿ, ಅಲಸ್ ಸೇರಿದಂತೆ ಇತರ ಕಾರುಗಳಿಗೆ ವಿಶೇಷ ಕೊಡುಗೆಯನ್ನು ಆಯಾ ಶೋರೂಂಗಳಲ್ಲಿ ನೀಡಲಾಗುತ್ತಿದೆ. ರೆನಾಲ್ಟ್ ಕಂಪೆನಿಯೂ ಆಫರ್‌ಗಳಲ್ಲಿ ಹಿಂದೆ ಬಿದ್ದಿಲ್ಲ. ಹೋಂಡಾ ಕಂಪೆನಿಯೂ 2.50 ಲಕ್ಷ ರೂ. ವರೆಗೆ ಆಫರ್‌ಗಳನ್ನು ನೀಡಲು ಮುಂದಾಗಿದೆ.
ಉತ್ತಮ ಎಕ್ಸ್‌ಚೇಂಜ್ ಆಫರ್
ನಮ್ಮ ಕಂಪೆನಿಯ ಕಾರುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಡಸ್ಟರ್ ಹಳೇ ವಿನ್ಯಾಸದ ಕಾರಿಗೆ 50 ಸಾವಿರ ರೂ.ಗಳವರೆಗೆ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್‌ಗಳಿವೆ. ಕ್ವಿಡ್ ಗೂ 20 ಸಾವಿರ ರೂ.ಗಳವರೆಗೆ ರಿಯಾಯಿತಿ ಹಾಗೂ ಎಕ್ಸ್‌ಚೇಂಜ್ ಬೋನಸ್ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎಲ್ಲ ವಾಹನಗಳಿಗೆ ಎಬಿಎಸ್, ವೇಗಮಿತಿ, ಸೀಟ್‌ಬೆಲ್ಟ್ ರಿಮೈಂಡರ್ ಇರುವುದು ವಿಶೇಷ. ರೆನಾಲ್ಟ್ ಟ್ರೈಬರ್ ಹೊಸ ಆವೃತ್ತಿ ಮಾರುಕಟ್ಟೆಗೆ ಬಂದಿದೆ ಎನ್ನುತ್ತಾರೆ ಉಡುಪಿಯ ರೆನಾಲ್ಟ್ ಶೋರೂಂ ನ ಸೀನಿಯರ್ ಮ್ಯಾನೇಜರ್ ಕ್ವಿಂಟನ್ ವಾಝ್.
2.50 ಲಕ್ಷ ರೂ. ವರೆಗೆ ಆಫರ್
ಹೋಂಡಾ ಕಾರಿನ ಕೆಲ ಆಯ್ದ ಆವೃತ್ತಿಗಳಿಗೆ 1 ಲಕ್ಷದ 30 ಸಾವಿರ ರೂ.ಗಳವರೆಗೆ ಆಫರ್ ಇದೆ. ಸಿವಿಕ್ ಮಾಡೆಲ್ ಮೇಲೆ 2.5 ಲ.ರೂ.ಗಳ ರಿಯಾಯಿತಿ ಇದೆ. ಕಳೆದ ವರ್ಷ ಅಮೇಝ್ಗೆ ಆಫರ್ ಇರಲಿಲ್ಲ. ಈ ಬಾರಿ 30 ಸಾವಿರ ರೂ. ಎಕ್ಸ್‌ಚೇಂಜ್ ಬೋನಸ್ ಇದೆ. ಹೋಂಡಾ ಸಿಟಿ ಮೇಲೂ 62 ಸಾವಿರ ರೂ.. ಜಾಝ್ಗೆ 45ರಿಂದ 50 ಸಾವಿರ ರೂ.ವರೆಗೂ ಆಫರ್ ಇದೆ. ಸೆಡಾನ್, ಎಸ್‌ಯುವಿ ಹಾಗೂ ಹ್ಯಾಚ್‌ಬ್ಯಾಕ್ ಮೂರರಲ್ಲೂ ಬೇಡಿಕೆ ಇದೆ ಎಂಬುದು ಅಂಬಾಗಿಲಿನ ಶಮಾ ಹೋಂಡಾದ ಜಿಎಂ ಶ್ರೀನಿಧಿಯವರ ಅಭಿಪ್ರಾಯ.
ದ್ವಿಚಕ್ರ ವಾಹನ; ಬಂಪರ್ ಆಫರ್
ದ್ವಿಚಕ್ರ ವಾಹನಗಳ ಕಂಪೆನಿಗಳೂ ಆಫರ್‌ಗಳಲ್ಲಿ ಹಿಂದೆ ಬಿದ್ದಿಲ್ಲ. ಹೀರೋಗೆ ಸಂಬಂಧಿಸಿದ ಎಲ್ಲ ಸ್ಕೂಟರ್‌ಗಳಿಗೆ ಗರಿಷ್ಠ 3,000 ರೂ. ವರೆಗೆ ಆಫರ್ ಇದೆ. ಹೋಂಡಾ ಕಂಪೆನಿಗೆ ಸಂಬಂಧಿತ ಸ್ಕೂಟರ್‌ಗಳಿಗೂ ಹಲವು ಆಫರ್‌ಗಳಿವೆ. ಬಜಾಜ್‌ನ ಸಿಟಿ 100 ಪ್ಲಾಟಿನೋ, ಪಲ್ಸರ್, ಡೋಮಿನರ್, ಡಿಸ್ಕವರ್ ಸಹಿತ ವಿವಿಧ ವಾಹನಗಳಿಗೆ ಗರಿಷ್ಠ 7,000 ರೂ.ವರೆಗೆ ಆಫರ್ ಇದೆ. ನಮ್ಮಲ್ಲಿ ವಿವಿಧ ಆವೃತ್ತಿಯ ಬೈಕ್‌ಗಳ ಮೇಲೆ 5 ಸಾವಿರ ರೂ.ನಿಂದ 7 ಸಾವಿರ ರೂ.ವರೆಗೆ ಕ್ಯಾಶ್ ಬ್ಯಾಕ್ ಮತ್ತು ಕನಿಷ್ಠ ಡೌನ್‌ಪೇಮೆಂಟ್ ಆಫರ್‌ಗಳು ಅ. 31ರ ವರೆಗೆ ಇದೆ. ಹಬ್ಬದ ಪ್ರಯುಕ್ತ ವಾಹನ ಕೊಳ್ಳುವುದನ್ನು ಉತ್ತೇಜಿಸಲು ಈ ಕ್ರಮ. ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 150 ಬೈಕ್‌ಗೆ ಸಾಕಷ್ಟು ಬೇಡಿಕೆಯಿದೆ. ಸೆ. 30ರಂದು ಬಜಾಜ್ ಪಲ್ಸರ್ 125 ಹೊಸ ಬೈಕ್ ಮಾರುಕಟ್ಟೆಗೆ ಬರಲಿದೆ ಎನ್ನುತ್ತಾರೆ ಉಡುಪಿಯ ಬಜಾಜ್ ಶೋರೂಂ ಮ್ಯಾನೇಜರ್ ಪ್ರಶಾಂತ ಗುಂಡಿಬೈಲು.
ಟಿವಿಎಸ್, ಸುಝುಕಿ, ಯಮಹ, ರಾಯಲ್ ಎನ್‌ಫೀಲ್ಡ್, ಆ್ಯಪ್ರಿಲಾ, ವೆಸ್ಪಾ, ಕೆಟಿಎಂ ಸೇರಿದಂತೆ ಇತರ ದ್ವಿಚಕ್ರ ವಾಹನಗಳಿಗೂ ಆಕರ್ಷಕ ಆಫರ್‌ಗಳಿವೆ. ಕೆಲವೆಡೆ ಲಕ್ಕಿ ಡ್ರಾ ಆಫರ್ ಕೂಡ ಇದೆ. ಕೆಲವು ಶೋರೂಂಗಳಲ್ಲಿ ಕಡಿಮೆ ಬಡ್ಡಿದರದ ಕಂತುಗಳ ವ್ಯವಸ್ಥೆಯಿದ್ದರೆ, ಇನ್ನುಳಿದೆಡೆ ಕಡಿಮೆ ಸಮಯದಲ್ಲಿ ವಾಹನ ನೀಡುವ ಆಫರ್ ಗಳಿವೆ. ಇನ್ನೂ ಕೆಲವೆಡೆ ಕನಿಷ್ಠ ಡೌನ್‌ಪೇಮೆಂಟ್ ಎಂಬುದೇ ಆಕರ್ಷಣೀಯವೆನಿಸಿದೆ.
ತ್ವರಿತ ವಾಹನ ಸಾಲ ಸೌಲಭ್ಯ
“ಟಿವಿಎಸ್ ಕಂಪೆನಿಯ ಪ್ರತಿ ವಾಹನ ಖರೀದಿಗೆ 3,000 ರೂ. ನಿಂದ 5,000 ರೂ., ಕ್ಯಾಶ್ ಬ್ಯಾಕ್ ಹಾಗೂ ತ್ವರಿತ ವಾಹನ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಕೊಡುಗೆ ಅಕ್ಟೋಬರ್ ತಿಂಗಳಾಂತ್ಯದವರೆಗೂ ಇದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. 25ರಷ್ಟು ವಹಿವಾಟು ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆ ಕಾಣುವ ಲಕ್ಷಣಗಳಿವೆ ಎಂಬುದು ಉಡುಪಿಯ ಸಾಯಿರಾಧಾ ಟಿವಿಎಸ್‌ನ ಮಾಲಕರಾದ ಮನೋಹರ್ ಶೆಟ್ಟಿ. ರಾಯಲ್ ಎನ್‌ಫೀಲ್ಡ್ ಕಂಪೆನಿಯ ಮಂಗಳೂರಿನ ಸಿಆರ್‌ಟಿ ಮ್ಯಾನೇಜರ್ ಅಮಲ್ ಹೇಳುವಂತೆ, “ನಿಜವಾಗಲೂ ಈ ದಸರಾ ದೀಪಾವಳಿ ವಾಹನ ಕೊಳ್ಳುವವರಿಗೆ ಯೋಗ್ಯ ಸಮಯ. ಪ್ರತಿ ಹಬ್ಬದಲ್ಲಿ ಆಫರ್‌ಗಳಿದ್ದರೂ ಈ ಬಾರಿ ಇನ್ನೂ ಹೆಚ್ಚಿವೆ. ನಮ್ಮ ಕಂಪೆನಿಯ ಉತ್ಪನ್ನಗಳ ಮೇಲೂ ಹಲವು ಆಫರ್‌ಗಳನ್ನು ನೀಡುತ್ತಿದ್ದೇವೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.