ಜನಸಾಮಾನ್ಯರ ಜನನಾಯಕ ಯುವ ಶಾಸಕ ಡಾ| ಭರತ್‌ ಶೆಟ್ಟಿ ವೈ.


Team Udayavani, May 14, 2020, 4:48 AM IST

ಜನಸಾಮಾನ್ಯರ ಜನನಾಯಕ ಯುವ ಶಾಸಕ ಡಾ| ಭರತ್‌ ಶೆಟ್ಟಿ ವೈ.

ಕರಾವಳಿ ಕರ್ನಾಟಕ ಭಾಗದಲ್ಲಿ ಕೋವಿಡ್‌-19 ವೈರಸ್‌ನಂತಹ ಕಷ್ಟದ ಸಮಯದಲ್ಲಿ ಸ್ವತಃ ವೈದ್ಯರಾದ ಡಾ| ಭರತ್‌ ಶೆಟ್ಟಿ ಅವರು ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಯ ಸಮನ್ವಯಕಾರರಾಗಿ ಜವಾಬ್ದಾರಿ ವಹಿಸಿಕೊಂಡು ವಿಧಾನಸಭೆಯಲ್ಲಿ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಗಮನ ಸೆಳೆದು ಕೇಂದ್ರದ ಸಹಕಾರದಲ್ಲಿ ದ.ಕನ್ನಡಕ್ಕೆ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ ಕ್ಷಿಪ್ರವಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಜತೆಗೆ ವೈಯಕ್ತಿಕವಾಗಿ ಕೋವಿಡ್‌ ಮಾದರಿ ಸಂಗ್ರಹ ಸಂಚಾರಿ ವಾಹನ ನೀಡಿ ಕ್ಷೇತ್ರದ,  ಜಿಲ್ಲೆಯ ಜನತೆಯ ಆರೋಗ್ಯದ ದೃಷ್ಟಿಯಲ್ಲಿ ಮಹತ್ವದ ಕಾರ್ಯ ನಡೆಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಗುಣಮಟ್ಟದ ಪಡಿತರ ಕಿಟ್‌, ಸ್ಯಾನಿಟೈಸರ್‌, ಮಾಸ್ಕ್ ಗಳನ್ನು ವಿತರಿಸಿ ಜನರ ಸಂಕಷ್ಟ ನಿವಾರಣೆಗೆ ಕೈಜೋಡಿಸುವ ಮೂಲಕ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಭರತ್‌ ಶೆಟ್ಟಿ  ವೈ.ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ.

‘ಜನ ಸೇವೆಯೇ ಜನಾರ್ದನ ಸೇವೆ’ ಎನ್ನುವ ಮಾತಿನಂತೆ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡುತ್ತಾ ಜನರ ನಡುವೆ ಬೆರೆತು  ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ| ಭರತ್‌ ಶೆಟ್ಟಿ ವೈ. ಅವರು ಕೋವಿಡ್‌ ಭೀತಿಯಿಂದ ದೇಶದಲ್ಲಿ ಲಾಕ್‌ಡೌನ್‌ ಆದಾಗ  ಸಾವಿರಾರು ಬಡ ಜನತೆಯ ಕಣ್ಣೀರು ಒರೆಸಿದ್ದಾರೆ. ಅಲ್ಲದೇ ಕ್ಷೇತ್ರಾದ್ಯಂತ ಸಂಚರಿಸಿ ಜನರ ಮನೆ ಬಾಗಿಲಿಗೆ ಹೋಗಿ ಪಡಿತರ ಕಿಟ್‌ ವಿತರಿಸಿ ಮಾತನಾಡಿಸಿ, ಕೋವಿಡ್‌-19 ವೈರಸ್‌ ಕುರಿತು ಜಾಗೃತಿ ಮೂಡಿಸಿ ಮಾದರಿ ಕಾರ್ಯ ಮಾಡುತ್ತಿದ್ದಾರೆ.


ಮನಃಪೂರ್ವಕ ಕೆಲಸಗಾರ
ಬಡವರ್ಗದ ಜನತೆ ಯಾರೇ ಕರೆ ಮಾಡಿದರೂ ಅಗತ್ಯಬಿದ್ದರೆ ಆರೋಗ್ಯದ ಸಲುವಾಗಿ  ಆ್ಯಂಬುಲೆನ್ಸ್‌ಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿ, ಆಸ್ಪತ್ರೆಗಳಲ್ಲಿ ಅಸಹಾಯಕ ಕುಟುಂಬದ ಚಿಕಿತ್ಸಾ ವೆಚ್ಚದಲ್ಲಿ ಕಡಿತಗೊಳಿಸಿ, ಕ್ಯಾನ್ಸರ್‌, ಅಂಗವಿಕಲರು ಮತ್ತಿತರ ಆರೋಗ್ಯ ಕ್ಷೇತ್ರದಲ್ಲಿ ತೊಂದರೆಗೊಳಗಾದವರಿಗೆ ಸ್ವತಃ ವೆಚ್ಚ ಭರಿಸಿ ಔಷಧ ಒದಗಿಸಿಕೊಟ್ಟು , ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಅಂಗವಿಕಲರಿಗೆ ಕೃತಕ ಅಂಗಾಂಗ ಪರಿಕರ ಒದಗಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇದೀಗ ಕೋವಿಡ್‌-19ರ ಸಂಕಷ್ಟದ ಸಮಯದಲ್ಲಿ ಆರೋಗ್ಯ ಭಾಗ್ಯದ ಜತೆಗೆ ಈಗ ಅನ್ನಭಾಗ್ಯ ಕಲ್ಪಿಸಿರುವ ಡಾ| ಭರತ್‌ ಶೆಟ್ಟಿ ಅವರು ಕ್ಷೇತ್ರದಲ್ಲಿ ಜನಸಾಮಾನ್ಯರ ಶಾಸಕ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.


ಕೋವಿಡ್ ನಿಯಂತ್ರಣ ಕಾರ್ಯಗಳ ಕುರಿತು ಡಾ| ಭರತ್‌ ಶೆಟ್ಟಿ ವೈ. ಅವರ ಮನದಾಳದ ಮಾತು
1. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೊರೊನಾ ತಡೆಯುವಲ್ಲಿ ಯಶಸ್ವಿಯಾಗಿದ್ದೀರಾ?
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಲಕ್ಷ್ಯ ವಹಿಸುವುದು ಹಾಗೂ ಕ್ಷೇತ್ರದ ಜನರ ನೋವುಗಳಿಗೆ ಸ್ಪಂದಿಸುವುದು ನನ್ನ ಪ್ರಥಮ ಆದ್ಯತೆ. ಇದರ ಜತೆಗೆ ಕೋವಿಡ್‌ -19 ವೈರಸ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಿಟ್ಟಿನಲ್ಲಿ ಸ್ಪಂದಿಸಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷರೂ ಸಂಸದರೂ ಆದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಎಲ್ಲ ಶಾಸಕರು, ಅಧಿಕಾರಿಗಳು, ವೈದ್ಯರು ಹೀಗೆ ಒಂದು ತಂಡವಾಗಿ ಕೆಲಸ ಮಾಡುತ್ತಾ ದ.ಕ. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್‌ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಯಾವುದೇ ಟೀಕೆಗಳಿಗೆ ಕಿವಿಗೊಡದೆ ಮುಂದೆ ನೋಡಿ ಜನಪರ ಕೆಲಸ ಮಾಡುವುದೇ ಧ್ಯೇಯವಾಗಿದೆ.


2. ಸಂಕಷ್ಟಕ್ಕೊಳಗಾದವರಿಗೆ ಮುಂದೆ ಏನು ?
ಕೋವಿಡ್‌-19 ವೈರಸ್‌ನಿಂದ ಕ್ಷೇತ್ರದಲ್ಲಿರುವ ರಾಜ್ಯದ ಎರಡನೇ ಅತೀ ದೊಡ್ಡ ಕೈಗಾರಿಕಾ ಕ್ಷೇತ್ರಕ್ಕೆ ಹಿನ್ನಡೆ ಆಗಿದೆ. ನೌಕರರು ತೊಂದರೆಗೆ ಒಳಗಾಗಿದ್ದಾರೆ. ಇದರ ಜತೆಗೆ ರೈತರ ಸಮಸ್ಯೆಯಾಗಿದೆ. ಇದು ಒಂದೆಡೆಯಾದರೆ ಆಟೋ ರಿಕ್ಷಾ, ಕಾರು, ಗೂಡಂಗಡಿ, ಹೀಗೆ ವಿವಿಧ ಮೂಲಗಳಿಂದ ದುಡಿಮೆ ಮಾಡುತ್ತಿದ್ದವರಿಗೆ ನಮ್ಮ ಸರಕಾರ ಉತ್ತಮವಾಗಿ ಸ್ಪಂದಿಸಿದೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಆರ್ಥಿಕ ಪುನಶ್ಚೇತನಕ್ಕೆ ನಾಂದಿಯಾಗಲಿದೆ. ವಿವಿಧ ವರ್ಗಗಳ ಸ್ವ ಉದ್ಯೋಗಿಗಳಿಗೆ, ಅರ್ಚಕರಿಗೆ, ಸವಿತಾ ಸಮಾಜದವರು ಹೀಗೆ ಎಲ್ಲ ಸಮುದಾಯವನ್ನು ಸರಕಾರ ಪರಿಗಣಿಸಿ ನೆರವು ನೀಡಿದೆ. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ವಿಶೇಷ ಪ್ಯಾಕೇಜ್‌ ಘೋಷಿಸಿ ಆತ್ಮ ಬಲ ಬರುವಂತೆ ಮಾಡಿದೆ.

3. ಕ್ಷೇತ್ರದ ಜನತೆ, ವಲಸೆ ಕಾರ್ಮಿಕರು ಹಸಿವಿನಿಂದ ಇರದಂತೆ ಕೈಗೊಂಡ ಕ್ರಮಗಳೇನು?
ನನ್ನ ಕ್ಷೇತ್ರದಲ್ಲಿ ಇದುವರೆಗೆ ಮೂರು ಹಂತಗಳಲ್ಲಿ ಕಿಟ್‌ ವಿತರಿಸಿ ನನ್ನಿಂದಾದ ಗರಿಷ್ಠ ಪ್ರಯತ್ನ ಮಾಡಿದ್ದೇನೆ. ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದೇನೆ. ಜನರ ಆರೋಗ್ಯದ ನಿಟ್ಟಿನಲ್ಲಿ ಮಾಸ್ಕ್ ವಿತರಿಸಿದ್ದೇನೆ. ಇದರ ಜತೆಗೆ ಮಧ್ಯಮ ವರ್ಗದವರನ್ನೂ ಪರಿಗಣನೆಗೆ ತೆಗೆದುಕೊಂಡಿದ್ದೇನೆ.

4. ಕೋವಿಡ್ ವಾರಿಯರ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಜಿಲ್ಲಾಧಿಕಾರಿಗಳಿಂದ ಹಿಡಿದು ಅಧಿಕಾರಿ ವರ್ಗ ಒಂದೆಡೆ, ತಮ್ಮ ಜೀವದ ಹಂಗು ತೊರೆದು ವೈದ್ಯರು, ದಾದಿಯರು, ಪೊಲೀಸರು, ಗೃಹರಕ್ಷಕರು ಕೆಲಸ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು ಬೆದರಿಕೆ, ನಿಂದನೆಯ ನುಡಿಗಳನ್ನು ಕೇಳಿಕೊಂಡು ಜನರ ಆರೋಗ್ಯಕ್ಕಾಗಿ ಶ್ರಮವಹಿಸುತ್ತಿದ್ದಾರೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ನರ್ಸ್‌ಗಳು ಕೋವಿಡ್ ಜತೆಗೆ ಮಲೇರಿಯಾ, ಡೆಂಗ್ಯೂ ಮತ್ತಿತರ ಕಾಯಿಲೆ ಉಲ್ಬಣಿಸದಂತೆ ಶ್ರಮ ವಹಿಸುತ್ತಿದ್ದಾರೆ. ಇದಕ್ಕಾಗಿ ಇಂದು ನಮ್ಮ ಜಿಲ್ಲೆ ಮಾತ್ರವಲ್ಲ ಪ್ರಪಂಚವೇ ಕೋವಿಡ್ ವಾರಿಯರ್ ಗಳನ್ನು ಅಭಿಮಾನದಿಂದ ಕಾಣುತ್ತಿದೆ.

5. ಪಕ್ಷದ ಕಾರ್ಯಕರ್ತರ ಶ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಸದಾ ನೆರವಿಗಾಗಿ ನಿಲ್ಲುವ ಸೇವಾ ಯೋಧರು. ಯಾವುದೇ ದುರಂತದ ಸಂದರ್ಭವಿರಲಿ ನಮ್ಮ ಕಾರ್ಯಕರ್ತರು ಮುಂಚೂಣಿಯಲ್ಲಿರುತ್ತಾರೆ. ನಮ್ಮ ಹಿರಿಯ ಮುಖಂಡರ ಸಲಹೆ-ಸೂಚನೆಯತೆ ಕೋವಿಡ್‌ -19 ಹೋರಾಟದಲ್ಲಿಯೂ ನಿತ್ಯ ಪಡಿತರ ತಲುಪಿಸುವ ಕೆಲಸ, ಗೋದಾಮುಗಳಲ್ಲಿ ನಿರ್ವಹಿಸುವ ಕೆಲಸ, ತುರ್ತು ಸಂದರ್ಭ ವಾಹನ ಒದಗಿಸುವ ಕೆಲಸ ಹೀಗೆ ನಮ್ಮ ಕಾರ್ಪೊರೇಟರ್‌ಗಳು, ಪಂಚಾಯತ್‌ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಎಲ್ಲರೂ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.


6. ಜನತೆಗೆ ಕಿವಿಮಾತೇನು?
ನಿಮ್ಮ ಜೀವ ನಿಮ್ಮ ನಿಮ್ಮ ಕೈಗಳಲ್ಲಿದೆ. ಸರಕಾರ ಒಂದು ಹಂತದವರೆಗೆ ಜಾಗೃತಿ, ನೆರವು, ಕ್ರಮ ಕೈಗೊಳ್ಳಬಹುದು. ಮನೆ ಮನೆಗೆ ಬರುವ ಆರೋಗ್ಯ ಕಾರ್ಯಕರ್ತರನ್ನು ಗೌರವದಿಂದ ಕಾಣಿರಿ, ಮಾಹಿತಿ ನೀಡಿ, ವೈದ್ಯರ ಶ್ರಮಕ್ಕೆ ಬೆಲೆ ನೀಡಿ. ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಿ, ಕೈಗಳನ್ನು ಶುದ್ಧವಾಗಿಟ್ಟುಕೊಂಡು, ಗುಂಪು ಸೇರದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದಿನ ಏಳೆಂಟು ತಿಂಗಳು ಇದ್ದಲ್ಲಿ ಖಚಿತವಾಗಿಯೂ ಕೋವಿಡ್‌-19 ವಿರುದ್ಧ ಜಯ ಗಳಿಸಬಹುದು. ನಿಮ್ಮ ಕುಟುಂಬ ನಿಮ್ಮ ರಕ್ಷಣೆ ಹೀಗಾಗಿ ಜಾಗೃತರಾಗಿರಿ ಎಂದಷ್ಟೇ ನನ್ನ ಮನವಿ.

ಶಾಸಕರಿಂದ ಮಾದರಿ ಕಾರ್ಯ
ಕೋವಿಡ್‌-19 ವೈರಸ್‌ ನಿಯಂತ್ರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಲಾಕ್‌ಡೌನ್‌ ಆದ ಬಳಿಕದಿಂದ ಜನರ ನಡುವೆ ಇದ್ದಾರೆ. ಯಾರೂ ಹಸಿವಿನಿಂದ ಬಳಲಬಾರದು ಎಂದು ಮೂರು ಹಂತಗಳಲ್ಲಿ 45 ಸಾವಿರಕ್ಕೂ ಮಿಕ್ಕಿ ಪಡಿತರ ಕಿಟ್‌ಗಳನ್ನು ವಿತರಿಸಿದ್ದೇವೆ. ಮಾಸ್ಕ್ ನೀಡಿದ್ದೇವೆ. ನಮ್ಮ ಕಾರ್ಯಕರ್ತರು ವಲಸಿಗರಿಗೆ, ನಿರ್ಗತಿಕರಿಗೆ ಶಾಸಕರ ನೇತೃತ್ವದಲ್ಲಿ ಊಟ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ನೆರವು ನೀಡಲಾಗಿದೆ. ಕೋವಿಡ್‌-19 ಮಾದರಿ ಸಂಗ್ರಹಣ ವಾಹನವನ್ನು ನೀಡಿ ಕ್ಷೇತ್ರ ಮಾತ್ರವಲ್ಲ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮ ವಹಿಸುತ್ತಿರುವ ಯುವ ಶಾಸಕ.

– ತಿಲಕ್‌ ರಾಜ್‌ ಕೃಷ್ಣಾಪುರ, ಅಧ್ಯಕ್ಷರು, ಮಂಗಳೂರು, ಉತ್ತರ ಬಿಜೆಪಿ ಮಂಡಲ

ಶಾಸಕರಿಗೆ ಚಿರಋಣಿ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್‌ ಶೆಟ್ಟಿ ಇವರು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್‌, ಕೊಡೆ ಹಾಗೂ 1,000 ರೂ. ನಗದನ್ನು  ವಿತರಿಸಿ ಪ್ರೋತ್ಸಾಹಿಸಿರುತ್ತಾರೆ. ನಿಮ್ಮ ಬೆನ್ನ ಹಿಂದೆ ಎಂದಿಗೂ ನಾವು ನಿಂತು ಸಹಕರಿಸುತ್ತೇವೆ ಎಂದು ಭರವಸೆಯ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ರಾಜೇಶ್‌ ಕೊಟ್ಟಾರಿ ಹಾಗೂ ಗುರುಪುರ ಗ್ರಾಮ ಪಂಚಾಯತ್‌ ಸದಸ್ಯರಾದ ರಾಜೇಶ್‌ ಸುವರ್ಣ ಹಾಗೂ ಶಾಸಕರೊಂದಿಗೆ ಬಂದಂತಹ ಎಲ್ಲ ಗಣ್ಯ ವ್ಯಕ್ತಿಗಳಿಗೆ ಆಶಾ ಕಾರ್ಯಕರ್ತೆಯರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

– ಜಯಲಕ್ಷ್ಮೀ ಸುಭಾಶ್ಚಂದ್ರ, ಆಶಾ ಸುಗಮಕಾರರು.

ತತ್‌ಕ್ಷಣ ಸ್ಪಂದನೆ
ಹಗಲಿರುಳು ಪೊಲೀಸ್‌ ಇಲಾಖೆ ಜತೆ ಕೆಲಸ ಮಾಡುತ್ತಾ ಇರುವ ಗೃಹರಕ್ಷಕರ ಬಗ್ಗೆ ವಿಶೇಷ ಅಭಿಮಾನ, ಪ್ರೀತಿ, ಗೌರವವನ್ನು ಶಾಸಕ ಡಾ| ಭರತ್‌ ಶೆಟ್ಟಿ ಹೊಂದಿದ್ದಾರೆ. ಅವರ ಕಷ್ಟ-ಸುಖಗಳಿಗೆ ಈ ಕೋವಿಡ್ ಸಂದರ್ಭದಲ್ಲಿ ತತ್‌ಕ್ಷಣವೇ ಸ್ಪಂದಿಸಿದ್ದಾರೆ. ಅವರ ಕ್ಷೇತ್ರದ 200 ಸಿಬಂದಿಗೆ ಮನೆ ಮನೆಗೆ ಪಡಿತರ ಕಿಟ್‌ಗಳನ್ನು ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸಿದ್ದಾರೆ. ಇದು ಮತ್ತಷ್ಟು ಕೆಲಸ ಮಾಡಲು ಹುರುಪು ನೀಡಿದೆ.

– ಡಾ| ಮುರಳಿ ಮೋಹನ ಚೂಂತಾರು, ದ.ಕ. ಜಿಲ್ಲಾ ಕಮಾಂಡೆಂಟ್‌ ಗೃಹರಕ್ಷಕ ದಳ



ಸಂಸದ ನಳಿನ್‌ ಕುಮಾರ್‌ ಕಟೀಲು ಅವರೊಂದಿಗೆ ವೆನ್ಲಾಕ್‌ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ ಪರಿಶೀಲನೆ.

ಕೋವಿಡ್‌-19 ವೈರಸ್‌ ವಿರುದ್ಧ ಯುದ್ಧ

– ಮಂಗಳೂರಿಗೆ ಕೋವಿಡ್‌-19 ಟೆಸ್ಟಿಂಗ್‌ ಲ್ಯಾಬ್‌ ತರಿಸಿದ ಶಾಸಕ ಡಾ| ಭರತ್‌ ಶೆಟ್ಟಿ ವೈ.

– ಕ್ಷೇತ್ರದ ಜನತೆಗೆ 30 ಸಾವಿರ ಮಾಸ್ಕ್, ಅಗತ್ಯವಿರುವೆಡೆ ಸ್ಯಾನಿಟೈಸರ್‌ ವಿತರಣೆ

– ಬಡವರಿಗೆ, ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ, ನಗರ ಪ್ರದೇಶದಲ್ಲಿ ಅಂದಾಜು 45,000ಕ್ಕೂ ಮಿಕ್ಕಿ ದಿನಸಿ ಸಾಮಗ್ರಿ ಕಿಟ್‌ ವಿತರಣೆ

– ಜಿಲ್ಲಾಡಳಿತಕ್ಕೆ ಕೋವಿಡ್‌-19 ಸಂಚಾರಿ ಮಾದರಿ ಸಂಗ್ರಹ ಕೇಂದ್ರ ಕೊಡುಗೆ

– ಕೋವಿಡ್‌-19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ  ಸಭೆ, ಅಧಿಕಾರಿಗಳಿಗೆ ಸೂಚನೆ.

– ಜನಸಾಮಾನ್ಯರ ಜತೆ ಜತೆಗೆ ಆಶಾ ಕಾರ್ಯಕರ್ತೆಯರಿಗೆ, ಆಟೋ ರಿಕ್ಷಾ ಚಾಲಕರಿಗೆ, ಗೃಹರಕ್ಷಕ ಸಿಬಂದಿಗೆ,

– ಮಧ್ಯಮ ವರ್ಗದ ಕುಟುಂಬಗಳಿಗೂ ಕಿಟ್‌ ವಿತರಣೆ

– ಜಿಲ್ಲೆಯ ಸಂಸದರ ಜತೆ ಕೋವಿಡ್‌-19 ವೈರಸ್‌ ಕುರಿತಾದ ಸಭೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ.

– ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ದೊರಕಲು ಪ್ರತ್ಯೇಕ ಕೋವಿಡ್‌ ಆಸ್ಪತ್ರೆ ರೂಪಿಸಲು ಶ್ರಮ, ಪರಿಶೀಲನೆ.

ಗೋದಾಮಿನಲ್ಲಿ ಪಡಿತರ ಆಹಾರ ಸಾಮಗ್ರಿಗಳು.

ಟಾಪ್ ನ್ಯೂಸ್

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.