ಲಕ್ಷದೀಪೋತ್ಸವ ದಿಕ್ಸೂಚಿ ನುಡಿ : ಜಗವು ಧರ್ಮದ ನೆಲೆಯಾಗಲಿ: ಡಾ. ಹೆಗ್ಗಡೆ


Team Udayavani, Nov 24, 2019, 11:50 PM IST

Veerendra-Heggade-730

ಶುಕ್ರವಾರ ಸಂಜೆ ಚಾಲನೆ ಕಂಡ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಸಕ್ತ ವರ್ಷದ ಮೌಲಿಕ ಸಂದೇಶ ಇಡೀ ಜಗತ್ತು ಒಳಿತಿನೆಡೆಗೆ ಸಾಗಬೇಕಾದ ಅಗತ್ಯವನ್ನು ಮನಗಾಣಿಸಿತು. ಉಜಿರೆುಂದ ಧರ್ಮಸ್ಥಳದವರೆಗಿನ ಪಾದಯಾತ್ರೆಯಲ್ಲಿ ಪಾಲ್ಗೊಂಡು ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ನುಡಿಗಳು ಲಕ್ಷ ದೀಪೋತ್ಸವದ ಈ ಸಲದ ಕೇಂದ್ರ ಆಶಯವನ್ನು ಧ್ವನಿಸಿದವು.

ಕಳೆದ ಆರು ವರ್ಷಗಳಿಂದ ಆಯೋಜಿತವಾಗುತ್ತಿರುವ ಪಾದಯಾತ್ರೆಯ ಮಹತ್ವ ವಿವರಿಸುತ್ತಲೇ ಈ ವರ್ಷದ ಲಕ್ಷದೀಪೋತ್ಸವದ ಮೂಲಕ ಕಂಡುಕೊಳ್ಳಬೇಕಾದ ಮೌಲ್ಯ ಯಾವುದು ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಧರ್ಮಸ್ಥಳ ಸಾನಿಧ್ಯದ ದೈವಿಕತೆ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಸಮೂಹದ ಸಕಾರಾತ್ಮಕ ಶಕ್ತಿಯನ್ನು ವಿಶ್ಲೇಸುತ್ತಲೇ ಇಡೀ ಜಗತ್ತು ಶಾಂತಿಗಾಗಿ ಕಂಡುಕೊಳ್ಳಬೇಕಾದ ಹಾದಿ ಯಾವುದಾಗಿರಬೇಕು ಎಂದು ವಿವರಿಸಿದರು.

ಇಡೀ ಜಗತ್ತು ಧರ್ಮಸ್ಥಳವಾಗಿ ಪರಿವರ್ತಿತವಾಗಬೇಕಿದೆ. ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಜೊತೆಯಾಗಿ ನಡೆದುಕೊಂಡು ಬರುವ ಭಕ್ತ ಸಮೂಹದ ನಡೆಯು ಅನೇಕ ಅರ್ಥಗಳನ್ನು ಹೊಳೆಸುತ್ತದೆ. ಧರ್ಮಸ್ಥಳ ಕೇವಲ ಊರೊಂದರ ಹೆಸರಾಗಿ ಮಾತ್ರ ಉಳಿಯಬೇಕಾಗಿಲ್ಲ. ಶ್ರೀ ಮಂಜುನಾಥೇಶ್ವರ ದೇವಳದ ಗರ್ಭಗುಡಿಯ ಸನ್ನಿಧಿ ಮಾತ್ರ ಧರ್ಮಸ್ಥಳದ ಪ್ರಭೆ ಇದೆ ಎಂದುಕೊಳ್ಳಬೇಕಾಗಿಲ್ಲ. ಇಡೀ ರಾಜ್ಯ, ರಾಷ್ಟ್ರ ಮತ್ತು ಒಟ್ಟಾರೆ ಜಗತ್ತು ಧರ್ಮಸ್ಥಳವಾಗಿ ಬದಲಾದಾಗ ಮಾತ್ರ ಶಾಂತಿ ನೆಲೆಸುತ್ತದೆ. ಸಮೃದ್ಧಿ ತಾನಾಗಿಯೇ ಜೊತೆಯಾಗುತ್ತದೆ. ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಧರ್ಮದ ಸ್ಥಳಕ್ಕೆ ಮಿತಿಯಿಲ್ಲ. ಗರ್ಭಗುಡಿಯಿಂದ ಹೊರಟ ಶಕ್ತಿ ಸರ್ವವ್ಯಾಪಿಯಾಗಬೇಕು. ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತಸಮೂಹ ಜೊತೆಯಾಗಿ ನಡೆಯುವುದನ್ನು ಕೇವಲ ಧಾರ್ಮಿಕ ನಡೆಯನ್ನಾಗಿ ನೋಡಲಾಗದು. ಜೊತೆಯಾಗಿ ನಡೆದು ಆತ್ಮವಿಶ್ವಾಸವನ್ನು ದೃಢೀಕರಿಸಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಹಾಗೆ ನಡೆದುಕೊಂಡು ಶ್ರೀ ಸನ್ನಿಧಿಯ ಮುಂದೆ ನಿಂತುಕೊಂಡು ಇಡೀ ವರ್ಷದಲ್ಲಿ ಭಿನ್ನವಾಗಿ ಬದುಕು ಕಟ್ಟಿಕೊಳ್ಳುವ ಭರವಸೆ ಜೊತೆಯಾಗಿಸಿಕೊಳ್ಳಬೇಕು. ಅಂಥ ಭರವಸೆಯೊಂದಿಗೆ ಬದುಕಬೇಕು. ಅಂಥ ಬದುಕಿನಿಂದ ಮಾತ್ರ ಇಡೀ ಜಗತ್ತು ಧರ್ಮಸ್ಥಳವಾಗುವುದಕ್ಕೆ ಸಾಧ್ಯ ಎಂದರು.

ಖ್ಯಾತ ಕಲಾವಿದ ರವೀಂದ್ರ ಜೈನ್ ಅವರು ಹೊಳೆಸಿಕೊಂಡ ಸಾಲನ್ನು ಪ್ರಸ್ತಾಪಿಸುತ್ತಲೇ ಇಡೀ ಜಗತ್ತು ಹೇಗೆ ಧರ್ಮಸ್ಥಳವಾಗಿ ಪರಿವರ್ತಿತವಾಗಬಹುದು ಎಂದು ವಿವರಿಸಿದರು. ’ಸಾರಿ ದುನಿಯಾ ಧರ್ಮಸ್ಥಳ್ ಹೋ’ ಎಂಬ ಅವರ ಸಾಲನ್ನು ಎಲ್ಲರೂ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಧರ್ಮಸ್ಥಳಕ್ಕೆ ವಿವಿಧ ಪ್ರದೇಶಗಳಿಂದ ಹಲವರು ಆಗಮಿಸುತ್ತಾರೆ. ತಾವು ಕಷ್ಟಗಳೊಂದಿಗೆ ಇರುವುದನ್ನು ಪ್ರಸ್ತಾಪಿಸಿ ಸಮಸ್ಯೆಗಳಿಂದ ಮುಕ್ತರಾಗಲು ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆ ಫಲಿಸಿದ ನಂತರ ಮತ್ತೆ ಆಗಮಿಸಿ ಭಾವುಕರಾಗಿ ಮನಃಪೂರ್ವಕ ವಂದನೆಗಳನ್ನು ಸಲ್ಲಿಸುತ್ತಾರೆ. ಶ್ರದ್ಧಾಪೂರ್ವಕ ಪ್ರಾರ್ಥನೆ ಮತ್ತು ವಂದನೆಗಳ ಭಾವದೊಂದಿಗೆ ಕೃತಾರ್ಥರಾಗಿ ಸಂಭ್ರಮಿಸುತ್ತಾರೆ. ಇಂಥದ್ದೊಂದು ಸಂಭ್ರಮದ ಭಾವಗಳೆಲ್ಲವೂ ಜಗತ್ತಿನದ್ದಾಗಬೇಕಾದರೆ ಇಡೀ ವಿಶ್ವದಲ್ಲಿ ಧರ್ಮಸ್ಥಳದ ಪ್ರಭೆ ಹರಡಬೇಕು ಎಂದು ಅಭಿಪ್ರಾಯಪಟ್ಟರು.

ದೀಪೋತ್ಸವದ ಅಂಗವಾಗಿ ಒಂದು ವಾರದಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಭಕ್ತರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಇದು ದೇಶಕ್ಕೆ ಮಾದರಿ. ಇವರ ದುಡಿಮೆಯಲ್ಲಿ ಶ್ರದ್ಧೆ ಇದೆ. ವಿಶ್ವಾಸ ಗಟ್ಟಿಯಾಗಿದ್ದರೆ ಯಾವ ಪ್ರವಾಹದ ಅಲೆಗಳು ನಮ್ಮನ್ನು ಸೋಕಲಾರವು. ಮೋಡಗಳು ಸೂರ್ಯನಿಗೆ ಅಡ್ಡ ಬಂದಂತೆ ಅವುಗಳು ಅರೆ ಕ್ಷಣದಲ್ಲಿ ಸರಿಯುತ್ತವೆ ಎಂದರು. ಕಷ್ಟಗಳು ಶಾಶ್ವತವಲ್ಲ. ನಿರಂತರ ಪರಿಶ್ರಮ, ನಂಬಿಕೆ, ಶ್ರದ್ಧೆಯೊಂದಿಗೆ ಪರಿವರ್ತನಾ ಪ್ರಪಂಚದಲ್ಲಿ ಬದುಕಬೇಕು ಎಂದರು.

ಪ್ರತಿವರ್ಷ ಉಜಿರೆುಂದ ಧರ್ಮಸ್ಥಳದವರೆಗೆ ಲಕ್ಷದೀಪೋತ್ಸವದ ಸಂದರ್ಭದಲ್ಲಿ ನಡೆಯುವ ಪಾದಯಾತ್ರೆಗೆ ದೈವಿಕ ಮಹತ್ವ ಇದೆ. ಇದರೊಂದಿಗೆ ಕಾಣದ ದೇವರ ಒಡನಾಟವಿದೆ. ಎಲ್ಲರೂ ಒಟ್ಟಾಗಿ ನಡೆಯುವ ಮತ್ತು ಹಾಗೆ ನಡೆಯುತ್ತಲೇ ಶ್ರೀ ಸನ್ನಿಧಿಗೆ ಬಂದು ಇಡೀ ವರ್ಷಕ್ಕೆ ಬೇಕಾಗುವ ಸಕಾರಾತ್ಮಕ ಶಕ್ತಿಯನ್ನು ಜೊತೆಯಾಗಿಸಿಕೊಳ್ಳುವ ನಡೆ ಮಹತ್ವದ್ದು ಎಂದು ನುಡಿದರು.

ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಜನಾರ್ದನ ದೇವಾಲಯದ ಮೊಕ್ತೇಸರ ‘ಜಯ ರಾಘವ ಪಡ್ವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ್‌ ರಾವ್ ಕಾರ್ಯಕ್ರಮ ನಿರೂಪಿಸಿದರು.

ವರದಿ-ಚಿತ್ರಗಳು: ದಿನೇಶ ಎಂ, ಪ್ರಥಮ ಎಂ.ಸಿ.ಜೆ, ಎಸ್.ಡಿ.ಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.