‘ಹೈನುಗಾರಿಕೆಗೆ ಡಾ| ಕುರಿಯನ್ ಕೊಡುಗೆ ಅಪಾರ’
Team Udayavani, Nov 23, 2017, 10:32 AM IST
ಮಹಾನಗರ: ಡಾ| ವರ್ಗೀಸ್ ಕುರಿಯನ್ ಅವರ 96ನೇ ಜನ್ಮದಿನಾಚರಣೆ ಅಂಗವಾಗಿ ಕೇರಳದಿಂದ ಗುಜರಾತಿನ ಆನಂದ್ ತನಕ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯು ಮಂಗಳವಾರ ಬೆಳಗ್ಗೆ ಮಂಗಳೂರಿನ ದ.ಕ. ಹಾಲು ಒಕ್ಕೂಟಕ್ಕೆ ಆಗಮಿಸಿದ್ದು, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಸ್ವಾಗತಿಸಿದರು.
ಒಕ್ಕೂಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲ ಬೈಕ್ ಸವಾರರನ್ನು ಹೂಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದ ಡಾ| ಸತ್ಯನಾರಾಯಣ, ಡಾ| ಕುರಿಯನ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರತಿಯೊಬ್ಬರು ನೆನಪಿನಲ್ಲಿಡಬೇಕು. ಭಾರತವು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ತಿಳಿಸಿದರು.
ರ‍್ಯಾಲಿಯನ್ನು ಡ್ರೋಣ್ ಕೆಮರಾ ಮೂಲಕ ಚಿತ್ರೀಕರಿಸಿದ್ದು, ಮುಂದಿನ ದಿನಗಳಲ್ಲಿ ಡಾ| ಕುರಿಯನ್ ಬಗ್ಗೆ ಸಾಕ್ಷ್ಯ ಚಿತ್ರವನ್ನು ಗುಜರಾತ್ ಮಿಲ್ಕ್ ಫೆಡರೇಶನ್ ನಿರ್ಮಾಣ ಮಾಡುವ ವಿಚಾರವನ್ನು ತಿಳಿಸಿದರು.
ವ್ಯವಸ್ಥಾಪಕರಾದ ಜಿ. ರಾಯ್ಕರ್, ಶಿವಶಂಕರ ಸ್ವಾಮಿ, ನಿತ್ಯಾನಂದ ಭಕ್ತ, ಸುಮಾರು 40 ಮಂದಿ ಹಾಲು ಉತ್ಪಾ
ದಕರು, ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮೊದಲಾದವರು ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ಹೇಮಶೇಖರಪ್ಪ ಎಸ್.ಪಿ. ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಲಕ್ಕಪ್ಪ ವಂದಿಸಿದರು. ಕೆ. ಸುಬ್ಬರಾವ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.