ಗೋಹತ್ಯಾ ನಿಷೇಧ ಕಾನೂನಿಗೆ ಡಾ| ಸ್ವಾಮಿ ಆಗ್ರಹ
Team Udayavani, Jan 30, 2017, 3:45 AM IST
ಮಂಗಳೂರು: ದೇಶದ ಸಮಗ್ರ ಪ್ರಗತಿ ಹಾಗೂ ಪರಂಪರೆಯ ರಕ್ಷಣೆಗಾಗಿ ಗೋಸಂರಕ್ಷಣೆ, ಸಂಸ್ಕೃತದ ಪುನಶ್ಚೇತನ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕೂಡಲೇ ನಡೆಯಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಮುಂದಾಳು ಡಾ| ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟರು.
ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಪರಿಕಲ್ಪನೆಯಲ್ಲಿ ಮಂಗಲ ಗೋಯಾತ್ರೆಯ ಮಹಾತ್ರಿವೇಣಿ – ಮಹಾಮಂಗಲದಲ್ಲಿ ರವಿವಾರ ಅವರು ಪ್ರಧಾನ ಭಾಷಣವಿತ್ತರು.
ಸಪ್ತರಾಜ್ಯಗಳಲ್ಲಿ 81 ದಿನಗಳ ಕಾಲ ಸಂಚರಿಸಿ, ಗೋ ಸಂರಕ್ಷಣಾ ಜ್ಯೋತಿಧಿಯನ್ನು ಪ್ರಜ್ವಲಿಸಿದ ಈ ಅಭಿಯಾನ ಐತಿಹಾಸಿಕ ಎಂದು ಅವರು ಸ್ವಾಮೀಜಿಯವರನ್ನು ಅಭಿಧಿನಂದಿಸಿದರು.
ಸ್ವಾಮೀಜಿಯವರ ಪರಿಕಲ್ಪನೆಯ ಈ ಅಭಿಧಿಯಾನ ದೇಶಾದ್ಯಂತ ಗೋರಕ್ಷಣೆಯ ಜಾಗೃತಿಧಿಯನ್ನು ಸೃಷ್ಟಿಸಿದೆ. ಸಹಸ್ರಾರು ಮಠಾಧಿಪತಿಧಿಗಳು ಈ ಜಾಗೃತಿಗೆ ಸಹಕಾರ ನೀಡಿದ್ದಾರೆ. ಈ ಮಹಾಧಿತ್ರಿವೇಣಿಯಲ್ಲಿ ಉಪಸ್ಥಿತರಿದ್ದಾರೆ. ಇವೆಲ್ಲವೂ ಸಂತಸಕರವಾದ ಸಂಗತಿ ಎಂದರು.
ಕಾನೂನು ಜಾರಿಗೊಳಿಸಿ
ದೇಶದಲ್ಲಿ ಗೋಹತ್ಯಾ ನಿಷೇಧದ ಕಾನೂನನ್ನು ಕೂಡಲೇ ಜಾರಿಗೊಳಿಸಿ ಎಂದು ಡಾ| ಸುಬ್ರಹ್ಮಣ್ಯನ್ ಸ್ವಾಮಿ ಅವರು ಕೇಂದ್ರ ಸರಕಾರಧಿವನ್ನು ಆಗ್ರಹಿಸಿದರು. ಈ ಕುರಿತು ಯಾವುದೇ ಸಮಸ್ಯೆಗಳಿಲ್ಲ. ಸರ್ವೋಚ್ಚ ನ್ಯಾಯಾಧಿಲಯ ಕೂಡ ಈ ಬಗ್ಗೆ ರಾಜ್ಯ ಸರಕಾರಧಿಗಳಿಗೆ ವಿವರಿಸಿದೆ. ಭಾರತದ ಮೂಲ ಸಂವಿಧಾನಧಿದಲ್ಲೇ ಗೋ ಸಂರಕ್ಷಣೆ ಬಗ್ಗೆ ವ್ಯಾಖ್ಯಾನಧಿವಿದೆ. ಮಹಾತ್ಮಾ ಗಾಂಧಿ ಅವರು ಗೋಹತ್ಯೆಗೆ ವಿರುದ್ಧವಾಗಿದ್ದರು. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರೂ ವಿರೋಧಿಧಿಸಿದ್ದರು. ಆದ್ದರಿಂದ ಕೇಂದ್ರ ಕೂಡಲೇ ಸ್ಪಂದಿಸಲಿ. ಅಗತ್ಯ ಇದ್ದರೆ ತಾನು ರಾಜ್ಯಸಭೆಧಿಯಲ್ಲಿ ಈ ಬಗ್ಗೆ ವೈಯಕ್ತಿಕ ನಿಲುವಳಿ ಮಂಡಿಧಿಸುವುದಾಗಿಯೂ ಪ್ರಕಟಿಸಿದರು.
ಗೋಮಾಂಸ ರಫ್ತು ವ್ಯವಹಾರಕ್ಕೆ ಈ ಹಿಂದಿನ ಸರಕಾರವೇ ಸಬ್ಸಿಡಿ ನೀಡುತ್ತಿತ್ತು. ಆದರೆ ಈಗಿನ ಸರಕಾರ ಅದನ್ನು ಸ್ಥಗಿತಗೊಳಿಸಿರುವುದು ಸ್ವಾಗತಾರ್ಹ. ಗೋವಿನ ಹಾಲು ಅತ್ಯುತ್ತಮ ಪ್ರೊಟೀನ್ ಸಹಿತ ಸರ್ವಶ್ರೇಷ್ಠ ಆಹಾರವಾಗಿದೆ. ಗೋಮೂತ್ರ ಅನೇಕ ರೋಗಗಳಿಗೆ ಪರಿಹಾರಧಿವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿರುವ ಈ ಅಭಿಯಾನ ಪ್ರಶಂಸನೀಯ ಎಂದರು.
ಸಂಪತ್ತು: ವಿನಯ ಹೆಗ್ಡೆ
ನಿಟ್ಟೆ ವಿನಯ ಹೆಗ್ಡೆ ಅವರು ಪ್ರಸ್ತಾವನೆಧಿಗೈದರು. ದೇಶದ ಅತೀ ದೊಡ್ಡ ಸಂಪತ್ತು ಗೋವು ಸಂಪತ್ತು ಎಂದು ಹೇಳಿದರು. ರಾಘವೇಧಿಶ್ವರ ಶ್ರೀಗಳನ್ನು ಅಭಿನಂದಿಸಿದರು. ಕರಾಧಿವಳಿ- ರಾಜ್ಯ -ದೇಶದ 1,300ಕ್ಕೂ ಹೆಚ್ಚು ಮಠಾಧಿಪತಿಗಳು ವೇದಿಕೆಯಲ್ಲಿದ್ದರು. ರಾಘವೇಶ್ವರ ಶ್ರೀಗಳನ್ನು ಅಭಿನಂದಿಸಿದರು.
ಡಾ| ಕಲ್ಲಡ್ಕ ಪ್ರಭಾಕರ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಗೋಸಂರಕ್ಷಣೆಯ ಮಹಾಸಂಕಲ್ಪ
ರಾಘವೇಶ್ವರ ಶ್ರೀಗಳು ಸಹಸ್ರಾಧಿಕ ಮಠಾಧೀಶರು, ಲಕ್ಷೋಪಲಕ್ಷ ಗೋಭಕ್ತರ ಸಮ್ಮುಖದಲ್ಲಿ ನೀಡಿದ ಗೋಸಂರಕ್ಷಣೆಯ ಮಹಾ ಪ್ರತಿಜ್ಞೆ: ಮೂವತ್ತಮೂರು ಕೋಟಿ ದೇವತೆಗಳ ಆವಾಸ ಸ್ಥಾನವಾಗಿ ಚಲಿಸುವ ದೇವಾಲಯವೆನಿಸಿದ, ಪವಿತ್ರವಾದ ಪಂಚಗವ್ಯವನ್ನು ಕೊಡಮಾಡಿ ಚಲಿಸುವ ಔಷಧಾಲಯವೆನಿಸಿದ, ಸಕಲರೋಗ ನಿವಾರಕವಾದ ಔಷಧಗಳ ಖನಿಯಾಗಿ ಚಲಿಸುವ ಔಷಧಾಲಯವೆನಿಸಿದ ಭಾರತೀಯ ಗೋವಂಶವನ್ನು ಯಾವಜ್ಜೀವವೂ ಮೈಮಾತುಮನಗಳಿಂದ ಸಂರಕ್ಷಣೆ ಮಾಡುತ್ತೇನೆಂದು ಗೋಕಿಂಕರನಾಗಿ ಗೋಸೇವೆಗೆ ಬದ್ಧನಾಗುತ್ತೇನೆಂದು ಗೋ – ದೇವ – ಗುರು ಸನ್ನಿಧಿಯಲ್ಲಿ ಪ್ರತಿಜ್ಞಾಬದ್ಧನಾಗುತ್ತೇನೆ.
ಭೂ ಮಂಗಲ ಯಾತ್ರೆ: ಪೇಜಾವರ ಶ್ರೀ ಸಂದೇಶ
ಗೋಯಾತ್ರಾ ಮಹಾಮಂಗಲಕ್ಕೆ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ವಿಡಿಯೋ ಮೂಲಕ ಕಳುಹಿಸಿದ ಅನುಗ್ರಹ ಸಂದೇಶವನ್ನು ಪ್ರಸಾರ ಮಾಡಲಾಯಿತು.
ಸಾರಾಂಶ: ಗೋಮಾತೆಯು ಸರ್ವರ ಮಾತೆ. ಎಲ್ಲರಿಗೂ ಹಾಲುಣಿಸುವ ತಾಯಿ. ರಾಘವೇಶ್ವರ ಶ್ರೀಗಳ ನೇತೃತ್ವದ ಈ ಮಂಗಲ ಗೋಯಾತ್ರೆಯು ಭೂ ಮಂಗಲ ಯಾತ್ರೆಯೂ ಹೌದು. ಈ ಮೂಲಕ ರಾಜ್ಯ, ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲಿ. ಗೋರಕ್ಷೆಯಿಂದ ದೇಶ ಸುಭಿಕ್ಷವಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.