ಡಾ| ರಾಜ್‌ಕುಮಾರ್ ಸರಳತೆಯಿಂದ ಕನ್ನಡಿಗರ ಮನಗೆದ್ದರು: ವೆಂಕಟಾಚಲಪತಿ
ವರ ನಟ ಡಾ| ರಾಜ್‌ಕುಮಾರ್ 91ನೇ ಜನ್ಮದಿನಾಚರಣೆ
Team Udayavani, Apr 25, 2019, 6:15 AM IST
ಮಹಾನಗರ: ಕನ್ನಡದ ಮೇರುನಟ ಡಾ| ರಾಜ್ ಕುಮಾರ್ ತಮ್ಮ ಬದುಕಿನುದ್ದಕ್ಕೂ ಶ್ರದ್ಧೆ, ಸರಳತೆ ಮತ್ತು ಮಾನವೀಯತೆಯಿಂದ ಕನ್ನಡಿಗರ ಮನಗೆದ್ದವರು. ನಟನೆಯ ಜತೆಗೆ ಸಮಾಸೇವೆಯಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡು ಇತರರಿಗೆ ಮಾದರಿ ಯಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಂಗಳೂರು ಮತ್ತು ಶ್ರೀನಿವಾಸ್ ಶಿಕ್ಷಣ ಮಹಾವಿಶ್ವವಿದ್ಯಾನಿಲಯ ಸಂಯುಕ್ತ ಆಶ್ರಯದಲ್ಲಿ ಶ್ರೀನಿವಾಸ್ ಮಹಾವಿಶ್ವವಿ ದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾದ ಡಾ| ರಾಜ್ ಕುಮಾರ್ 91ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಮನಸ್ಸುಗಳಲ್ಲಿ ಅಚ್ಚಳಿಯದೆ ನಿಂತು ಚಲನಚಿತ್ರ ರಂಗದಲ್ಲಿ ಆರು ದಶಕಗಳಿಗೂ ಮಿಕ್ಕಿ ಜನಾದರವನ್ನು ಕಾಪಾಡಿಕೊಂಡ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ರಾಜ್ ಕುಮಾರ್, ಅವರ ಸರಳ, ಮುಗ್ಧ ಮಾನವಪ್ರೇಮ ಅವರನ್ನು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ವಾಗಿಸಿತು. ಯೋಗಿಯಂತೆ ಅವರು ಬದುಕಿದರು. ಅವರ ಚಿತ್ರಗಳೆಲ್ಲವೂ ಸಾಮಾಜಿಕ ಕಳಕಳಿ ಹಾಗೂ ನೀತಿಯುತ ಸಂದೇಶಗಳನ್ನೊಳಗೊಂಡಿದ್ದು, ನಮ್ಮ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.
ಅಪ್ರತಿಮ ಕಲಾವಿದ
ಸಂಪನ್ಮೂಲ ವ್ಯಕ್ತಿಯಾಗಿ ಆಕಾಶ ವಾಣಿಯ ಡಾ| ಶರಬೇಂದ್ರ ಸ್ವಾಮಿ ಮಾತನಾಡಿ, ತನ್ನ ಅದ್ಭುತ ನಟನೆಯ ಜತೆಗೆ ಇಂಪಿನ ಕಂಠದ ಗಾಯನದ ಮೂಲಕ ಎಲ್ಲರನ್ನೂ ಸೆಳೆದ ಅಪ್ರತಿಮ ಕಲಾವಿದ ಡಾ| ರಾಜ್ ಕುಮಾರ್. ಕನ್ನಡಿಗರ ಮನಃಪಠಲದಲ್ಲಿ ಸದಾಕಾಲ ಹಸಿರಾಗಿ ಉಳಿಯುವ ನಟ ಸಾರ್ವಭೌಮ ರಾಜ್ ಕುಮಾರ್ ಅವರು, ಕನ್ನಡ ನಾಡುನುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದÃತುಶ್ರೀನಿವಾಸ್ ಶಿಕ್ಷಣ ಮಹಾ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲರಾದ ಡಾ| ಜಯಶ್ರೀ ಕೆ. ಬೋಳಾರ ಉಪಸ್ಥಿತರಿದ್ದರು. ಹಿನ್ನೆಲೆ ಗಾಯಕ ಪ್ರಶಾಂತ್ ಡಾ| ರಾಜ್ ಕುಮಾರ್ ಅವರ ಹಾಡನ್ನು ಹಾಡಿ ರಂಜಿಸಿದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಸ್ವಾಗತಿಸಿದರು. ಶ್ರೀನಿವಾಸ್ ಮಹಾವಿಶ್ವವಿದ್ಯಾನಿಲಯ ಕಾಲೇಜು ಉಪನ್ಯಾಸಕರಾದ ಡಾ| ವಿಜಯಲಕ್ಷ್ಮೀ ನಾಯಕ್ ವಂದಿಸಿದರು. ವಾರ್ತಾ ಇಲಾಖೆಯ ಶ್ವೇತಾ ಎಲ್. ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.