ಒಳಚರಂಡಿ ದುರವಸ್ಥೆ; ತಲೆಕೆಡಿಸಿಕೊಳ್ಳದ ಪಾಲಿಕೆ !
Team Udayavani, Sep 4, 2019, 5:16 AM IST
ಮಹಾನಗರ: ಅಪಾಯ-1:ನವಭಾರತ್ ವೃತ್ತ ಸಮೀಪದ ಶಾರದಾ ವಿದ್ಯಾಸಂಸ್ಥೆ ಎದುರುಗಡೆ ಎರಡು ತಿಂಗಳಿನಿಂದ ಮ್ಯಾನ್‌ಹೋಲ್‌ನಿಂದ ಹೊರಬರುತ್ತಿರುವ ಗಲೀಜು ನೀರು!
ಅಪಾಯ-2:ಬೆಂದೂರುವೆಲ್‌ನ ಸೈಂಟ್ ತೆರೆಸಾ ಶಾಲೆಯ ಗೇಟ್ ಎದುರುಗಡೆಯೇ ಎರಡು ವಾರಗಳಿಂದ ಮ್ಯಾನ್‌ಹೋಲ್ ತೆರೆದುಕೊಂಡು ಅಪಾಯ ಸೂಚಿಸುತ್ತಿರುವುದು! ಅಪಾಯ-3: ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆ ಎದುರುಗಡೆ ಮ್ಯಾನ್‌ಹೋಲ್‌ನಿಂದ ಹಲವು ತಿಂಗಳಿನಿಂದ ಗಲೀಜು ರಸ್ತೆಯಲ್ಲೇ ಹರಿಯುತ್ತಿರುವುದು!
ಅಪಾಯ-4: ಶಕ್ತಿನಗರದ ಪ್ರತಿಷ್ಠಿತ ಕಲಾಂಗಣ್ ಎದುರುಗಡೆ ರಸ್ತೆಯಲ್ಲಿ ಯಾವುದೇ ಕ್ಷಣ ಸಂಪೂರ್ಣ ಮುರಿದು ಬೀಳುವ ಸ್ಥಿತಿಯಲ್ಲಿರುವ ಮ್ಯಾನ್‌ಹೋಲ್!
ಅಪಾಯ-5: ಅತಿಹೆಚ್ಚು ಜನ-ವಾಹನಗಳ ಓಡಾಟವಿರುವ ಕೆಎಸ್ ರಾವ್ ರಸ್ತೆಯಲ್ಲಿ ಸಿಟಿ ಸೆಂಟರ್ ಮಾಲ್ ಮುಂಭಾಗ, ಅದೇ ರಸ್ತೆಯಲ್ಲಿ ಅಪಾಯದ ಬಾವುಟ ಹಾಕಿದ ಸ್ಥಿತಿಯಲ್ಲಿರುವ ಮ್ಯಾನ್‌ಹೋಲ್!
ಇವೆಲ್ಲ ಸ್ಮಾರ್ಟ್‌ಸಿಟಿ ಎಂದು ಕರೆಸಿಕೊಂಡಿರುವ ಮಂಗಳೂರಿನ ಹೃದಯಭಾಗದಲ್ಲಿ ಹಲವು ದಿನಗಳಿಂದ ಸಾರ್ವಜನಿಕರು ಅದರಲ್ಲಿಯೂ ಮಕ್ಕಳು ಹಾಗೂ ವಾಹನ ಸವಾರರಿಗೆ ಅಪಾಯದ ಮುನ್ಸೂಚನೆ ನೀಡುತ್ತಿರುವ ಕೆಲವು ಮ್ಯಾನ್‌ಹೋಲ್‌ಗಳ ವಾಸ್ತವ ಸ್ಥಿತಿ. ಸುದಿನವು ಇಲ್ಲಿ ಹಾಕಿರುವುದು ಕೆಲವೊಂದು ಅಷ್ಟೇ. ಇನ್ನು ನಗರದ ಪ್ರಮುಖ ರಸ್ತೆಗಳ ಬಹಳಷ್ಟು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳ ಪರಿಸ್ಥಿತಿಯೂ ಇದೇರೀತಿ ಇವೆ. ವಿಪರ್ಯಾಸ ಅಂದರೆ, ನಗರದಲ್ಲಿ ಈ ರೀತಿ ತೆರೆದುಕೊಂಡಿರುವ ಅಪಾಯಕಾರಿ ಮ್ಯಾನ್‌ಹೋಲ್ ಸರಿಪಡಿಸುವುದಕ್ಕೆ ತುರ್ತು ಸ್ಪಂದಿಸಬೇಕಾಗಿರುವ ಪಾಲಿಕೆ ಅಧಿಕಾರಿಗಳು ಮಾತ್ರ ನೋಡಿಯೂ ನೋಡದಂತೆ ಸುಮ್ಮನಿದ್ದಾರೆ.
ಉದಾಹರಣೆಗೆ ಸೈಂಟ್ ತೆರೆಸಾ ಶಾಲೆಯ ಮುಂಭಾಗದಲ್ಲಿರುವ ಈ ಮ್ಯಾನ್‌ಹೋಲ್‌ನ ಬಗ್ಗೆ ಕಳೆದ ವಾರ ಸುದಿನ ವರದಿ ಪ್ರಕಟಿಸಿತ್ತು. ಆದರೆ ಪಾಲಿಕೆ ಗಮನಕ್ಕೆ ಬಂದಿದ್ದರೂ ಇಲ್ಲಿವರೆಗೆ ಯಾವ ಅಧಿಕಾರಿಯೂ ಅದನ್ನು ಸರಿ ಮಾಡದಿರುವುದು ಗಮನಾರ್ಹ.
ಶಾಲೆಯ ಮುಂದುಗಡೆಯೇ ಬಾಯೆ¤ರೆದುಕೊಂಡು ಮಳೆ ಬಂದಾಗ ಗಲೀಜು ನೀರು ೆುàಲೆಕ್ಕೆ ಚಿಮ್ಮುವ ಈ ಮ್ಯಾನ್‌ಹೋಲ್ ಸರಿಡಿಸುವುದಕ್ಕೆ ಇಷ್ಟೊಂದು ನಿರ್ಲಕ್ಷé ವಹಿಸಿರಬೇಕಾದರೆ, ಇನ್ನು ಉಳಿದ ಕಡೆ ಸಾರ್ವಜನಿಕರೇ ಮ್ಯಾನ್‌ಹೋಲ್ ಓಪನ್ ಆಗಿರುವ ಬಗ್ಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಎಷ್ಟರ ಮಟ್ಟಿಗೆ ಸ್ಪಂದನೆ ದೊರೆಯಲು ಸಾಧ್ಯ?
ಎರಡು ತಿಂಗಳುಗಳಿಂದ ನಗರದಲ್ಲಿ ಮಳೆ ಜಾಸ್ತಿಯಾಗಿದ್ದು, ಮಳೆ ನೀರು ಒಳಚರಂಡಿ ಪೈಪ್‌ಗೆ ಸೇರಿಕೊಂಡು ಬಹಳಷ್ಟು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳು ತೆರೆದುಕೊಂಡು ಅಪಾಯದ ಸ್ಥಿತಿಯಲ್ಲಿವೆ. ಇನ್ನು ಕೆಲವೆಡೆ ಜೋರು ಮಳೆ ಬಂದಾಗ ಮ್ಯಾನ್‌ಹೋಲ್ ಮೂಲಕ ನೀರು ಹೊರಕ್ಕೆ ಹರಿದು ಮಳೆ ನಿಂತಾಗ ಮತ್ತೆ ಯಥಾಸ್ಥಿತಿಗೆ ಬರುತ್ತವೆ. ಕೆಲವು ಕಡೆ ಈ ರೀತಿ ಮಳೆ ನೀರು ರಭಸವಾಗಿ ಮೇಲೆಕ್ಕೆ ಬಂದ ಬಳಿಕ ಮ್ಯಾನ್‌ಹೋಲ್ ಕೂಡ ನಿಧಾನಕ್ಕೆ ರಸ್ತೆ ಮಟ್ಟದಿಂದ ಸ್ವಲ್ಪ ಕೆಳಕ್ಕೆ ಕುಸಿದಿವೆ.
ಇದು ವಾಹನ ಸವಾರರಿಗೆ ಅದರಲ್ಲಿಯೂ ದ್ವಿಚಕ್ರ ಸವಾರರಿಗೆ ಹೆಚ್ಚು ಅಪಾಯವುಂಟು ಮಾಡುತ್ತಿದೆ. ಕೆಲವು ಕಡೆ ಮ್ಯಾನ್‌ಹೋಲ್ ರಸ್ತೆ ಮಟ್ಟದಿಂದ ತಗ್ಗಿನಲ್ಲಿರುವುದರಿಂದ ವಾಹನಗಳು ಸಂಚರಿಸಿದಾಗ ಮುರಿಯುತ್ತಿವೆ. ಒಂದುವೇಳೆ, ಮ್ಯಾನ್‌ಹೋಲ್‌ನ ಮುಚ್ಚಳ ತೆರೆದುಕೊಂಡಿದ್ದರೆ ಮಳೆ ಬಂದಾಗ ಪಾದಚಾರಿಗಳು-ವಾಹನ ಸವಾರರ ಗಮನಕ್ಕೂ ಬರುವುದಿಲ್ಲ. ಬೆಂಗಳೂರಿನಲ್ಲಿ ಈ ಹಿಂದೆ ಇದೇ ರೀತಿ ಮ್ಯಾನ್‌ಹೋಲ್ ಮುಚ್ಚಳ ತೆರೆದುಕೊಂಡು ಮಗುವೊಂದು ಅದರೊಳಗೆ ಕೊಚ್ಚಿ ಹೋಗಿರುವ ನಿದರ್ಶನವೂ ಇದೆ. ಹೀಗಾಗಿ, ನಗರದಲ್ಲಿ ಮ್ಯಾನ್‌ಹೋಲ್ ಓಪನ್ ಆಗಿರುವುದನ್ನು ಪಾಲಿಕೆ ಅಧಿಕಾರಿಗಳು ಇನ್ನಾದರೂ ಗಂಭೀರವಾಗಿ ತೆಗೆದುಕೊಂಡು ತುರ್ತು ಸ್ಪಂದಿಸಬೇಕೆನ್ನುವುದು “ಸುದಿನ’ ಕಳಕಳಿ.
ಗಲೀಜು ನೀರು ರಸ್ತೆಯಲ್ಲಿ
ಒಳಚರಂಡಿಯೊಳಗೆ ಹರಿಯ ಬೇಕಾದ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲವೆಡೆಗಳಲ್ಲಂತೂ ಮ್ಯಾನ್‌ಹೋಲ್ ಮುಚ್ಚಳವೇ ಮಾಯವಾಗಿದೆ. ಶಿಕ್ಷಣ ಸಂಸ್ಥೆಗಳು, ಜನನಿಬಿಡ ಪ್ರದೇಶಗಳಲ್ಲಿ ಬಾಯ್ದೆರೆದ ಮ್ಯಾನ್‌ಹೋಲ್‌ನಿಂದಾಗಿ ವಾಹನ ಸವಾರರರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಡೆಂಗ್ಯೂ ಸಹಿತ ಇನ್ನಿತರ ರೋಗಗಳು ಹರಡಬಾರದು ಎಂಬ ಉದ್ದೇಶಕ್ಕೆ ನಗರ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವತ್ಛವಾಗಿಡುವಂತೆ ಪಾಲಿಕೆಯು ಒಂದೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಮತ್ತೂಂದೆಡೆ ಮ್ಯಾನ್‌ಹೋಲ್‌ನಿಂದ ಹೊರ ಬರುವ ಕೊಳಚೆ ನೀರಿನಿಂದ ಸೊಳ್ಳೆ ಉತ್ಪತ್ತಿಯ ತಾಣವನ್ನಾಗಿ ಮಾರ್ಪಟ್ಟಿದೆ.
ಸಿಟಿ ಸೆಂಟರ್ ಮಾಲ್ ಎದುರು ಕೆಲವು ವಾರಗಳಿಂದ ಒಳಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಒಳಚರಂಡಿಗೆ ಅಳವಡಿಸಿದ್ದ ಸ್ಲಾéಬ್‌ನಿಂದಲೂ ಗಬ್ಬು ನಾರುತ್ತಿರುವ ನೀರು ಹೊರಬರುತ್ತಿದೆ.
ಇದರ ಮೇಲೆ ವಾಹನಗಳ ಸಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಶಾರದಾ ಶಾಲೆಯ ಬಳಿ ಕೆಲವು ದಿನಗಳಿಂದ ಒಳಚರಂಡಿಯೊಳಗಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲೇ ಪಕ್ಕದಲ್ಲಿರುವ ಮಳೆ ನೀರು ಹರಿಯುವ ಸಣ್ಣ ಕಣಿಯಲ್ಲೂ ಚರಂಡಿ ನೀರು ಹರಿಯುತ್ತಿದ್ದು, ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಸುರತ್ಕಲ್ ಬಳಿಯ ಗಣೇಶ್ ಬೀಡಿ-ಸಿರಿಗಳ ಬೀಡು ರಸ್ತೆಯ ಕೆಲವೊಂದು ಒಳಚರಂಡಿಯಲ್ಲಿ ಈ ಹಿಂದೆ ಮಲ ಹೊರ ಬರುತ್ತಿತ್ತು. ಈ ಬಗ್ಗೆ ಸುದಿನ ವರದಿ ಪ್ರಕಟಗೊಳಿಸಿದ ಬಳಿಕ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮ್ಯಾನ್‌ಹೋಲ್ ಸ್ವತ್ಛಗೊಳಿಸಿದ್ದಾರೆ.
ಆದರೂ ಕೊಳಚೆ ನೀರು ಬರುವುದು ಮಾತ್ರ ನಿಂತಿಲ್ಲ. ಪಾಂಡೇಶ್ವರದ ಈಶ್ವರಕಟ್ಟೆಯ ಬಳಿ ಇತ್ತೀಚೆಗೆ ನಡೆದ ಒಳಚರಂಡಿ ವ್ಯವಸ್ಥೆ ಕಾಮಗಾರಿ ಪೂರ್ಣಗೊಳ್ಳದೆ ಮಳೆ ಸುರಿದಾಕ್ಷಣ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಚರಂಡಿ ಮುಚ್ಚಳ ಕೂಡ ತೆರೆದ ಸ್ಥಿತಿಯಲ್ಲಿದ್ದು, ಇದೇ ರಸ್ತೆಯಲ್ಲಿ ಸಂಚರಿಸುವ ಮಂದಿಗೆ ಅಪಾಯವನ್ನುಂಟುಮಾಡುತ್ತಿದೆ.
ಕೆಳಗೆ ಜಾರಿದ ಮ್ಯಾನ್‌ಹೋಲ್ ಮುಚ್ಚಳ
ಕೆಲವೊಂದು ರಸ್ತೆಗಳ ಮಧ್ಯೆ ಇರುವ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟದಿಂದ ಕುಸಿದಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. “ಮ್ಯಾನ್‌ಹೋಲ್‌ಗಳನ್ನು ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಬಳಿಕ ರಸ್ತೆಗೆ ಕಾಂಕ್ರಿಟ್ ಅಳವಡಿಸಿದ್ದು, ಈ ವೇಳೆ ಮ್ಯಾನ್‌ಹೋಲ್ ಮುಚ್ಚಳ ಕೆಳಗೆ ನಿಂತಿದೆ. ಕೂಡಲೇ ಈ ಬಗ್ಗೆ ಗಮನಹರಿಸುತ್ತೇವೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಕಳೆದ ವರ್ಷವೂ ಪಾಲಿಕೆ ಇದೇ ಸಬೂಬು ನೀಡಿತ್ತು
ಕಳೆದ ವರ್ಷ ಮಳೆಗಾಲದಲ್ಲಿ ನಗರದಲ್ಲಿ ಇದೇ ಪರಿಸ್ಥಿತಿ ಇತ್ತು. ಮನೆಗಳಲ್ಲಿ, ಫ್ಲಾಟ್‌ಗಳ ಮಳೆನೀರನ್ನು ಒಳ ಚರಂಡಿಗೆ ಬಿಟ್ಟರೆ ಆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪಾಲಿಕೆ ಅಧಿಕಾರಿಗಳು ಕಳೆದ ವರ್ಷ ಹೇಳಿದ್ದರು. ಒಂದು ವರ್ಷ ಕಳೆದರೂ ಪರಸ್ಥಿತಿ ಹಾಗೇ ಇದೆ. ಮಳೆ ಬಂದಾಕ್ಷಣ ಒಳಚರಂಡಿಯಿಂದ ಗಲೀಜು ನೀರು ಹೊರಬರುತ್ತಿದೆ. ಪಾಲಿಕೆ ಅಧಿಕಾರಿಗಳು ಮತ್ತದೇ ಉತ್ತರ ನೀಡುತ್ತಿದ್ದಾರೆ.
ಹತ್ತು ವರ್ಷಗಳಿಂದ ತೊಂದರೆ
ಶಕ್ತಿನಗರದ ಗೌತಮ್ “ಸುದಿನ’ಕ್ಕೆ ಪ್ರತಿಕ್ರಿಯಿಸಿ, ನಗರದ ಶಕ್ತಿ ರೆಸಿಡೆನ್ಸಿ ಶಾಲೆಯ ಬಳಿಯಿರುವ ಕೆಲವೊಂದು ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ರಸ್ತೆಗೆ ಬರುತ್ತಿದೆ. ಹತ್ತು ವರ್ಷಗಳಿಂದ ಈ ಸಮಸ್ಯೆಯಿದ್ದು, ಅಧಿಕಾರಿಗಳಿಗೆಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಮನೆಯಲ್ಲಿ ಸಣ್ಣ ಮಗು ಕೂಡ ಇದ್ದು, ರಾತ್ರಿ ವೇಳೆಯಂತೂ ಸುತ್ತಮುತ್ತಲಿನ ಪ್ರದೇಶ ವಾಸನೆಯಿಂದ ಕೂಡಿರುತ್ತದೆ ಎನ್ನುತ್ತಾರೆ.
ನಿಯಮ ಉಲ್ಲಂಘಿಸಿದರೆ 25,000 ದಂಡ
ನಗರದಲ್ಲಿರುವ ಫ್ಲ್ಯಾಟ್ ಮತ್ತು ಮನೆಗಳಲ್ಲಿ ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ನೀಡಬಾರದು. ಅಲ್ಲದೆ ಗಲೀಜು ನೀರನ್ನು ಮಳೆ ನೀರು ಹರಿಯುವ ತೋಡಿಗೆ ಬಿಡಬಾರದು. ಈ ಬಗ್ಗೆ ಈಗಾಗಲೇ ಪಾಲಿಕೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಕಂಡುಬಂದರೆ ಮನೆ/ಫ್ಲ್ಯಾಟ್ ಮಾಲಕರಿಗೆ 25,000 ರೂ. ದಂಡ ವಿಧಿಸಲಾಗುವುದು. ಈಗಾಗಲೇ ಒಂದು ಹಂತದ ಕಾರ್ಯಾಚರಣೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು “ಸುದಿನ’ಕ್ಕೆ ತಿಳಿಸಿದ್ದಾರೆ.
ನನಗೆ ದೂರು ನೀಡಿ
ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ನೀಡುವುದು ಅಪರಾಧ. ನಗರದ ಕೆಲವೊಂದು ಕಡೆಗಳಲ್ಲಿ ಒಳಚರಂಡಿಯಿಂದ ರಸ್ತೆಗೆ ನೀರು ಹರಿಯುತ್ತಿರುವ ಬಗ್ಗೆ ನನಗೆ ದೂರುಗಳು ಬಂದಿವೆ. ಸಾರ್ವಜನಿಕರಲ್ಲಿ ಈ ಬಗ್ಗೆ ಯಾವುದೇ ದೂರುಗಳಿದ್ದರೂ ನನ್ನ ಗಮನಕ್ಕೆ ತರಬಹುದು. ಸಂಬಂಧ ಪಟ್ಟ ಅಧಿಕಾರಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಲ್ಲಿ ಕಾರ್ಯೋ ನ್ಮುಖನಾಗುತ್ತೇನೆ.
– ಡಿ. ವೇದವ್ಯಾಸ ಕಾಮತ್, ಶಾಸಕ
ಕಾರ್ಯಾಚರಣೆ ಆರಂಭವಾಗಿದೆ
ನಗರದ ಕೆಲವೊಂದು ಫ್ಲ್ಯಾಟ್‌ಗಳು, ಮನೆಗಳಿಂದ ಮಳೆ ನೀರಿನ ಸಂಪರ್ಕವನ್ನು ಒಳಚರಂಡಿಗೆ ನೀಡಿದ ಕಾರಣ ಸಣ್ಣ ಮಳೆ ಬಂದರೂ ಮ್ಯಾನ್‌ಹೋಲ್ ಒಳಗಿಂದ ಕೊಳಚೆ ನೀರು ರಸ್ತೆಗೆ ಬರುತ್ತಿದೆ. ಪಾಲಿಕೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ,ಸಂಪರ್ಕ ಕಲ್ಪಿಸಿದಂಥ ಹವರಿಗೆ ದಂಡ ವಿಧಿಸುತ್ತೇವೆ.
– ಗುರುರಾಜ್, ಮರಲಿಹಳ್ಳಿ, ಪಾಲಿಕೆ ಕಾರ್ಯಪಾಲಕ ಅಭಿಯಂತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.