ಮಳೆ ಬಂದರೆ ರಸ್ತೆ ಹೊಳೆಯಂತಾಗುವ ಭೀತಿ!
ಸುಳ್ಯ: ಎಚ್ಚರಿಕೆಯ ಕರೆಗಂಟೆ ಬಾರಿಸಿದ ಮೊದಲ ಮಳೆ
Team Udayavani, Mar 30, 2022, 9:59 AM IST
ಸುಳ್ಯ : ಸುಳ್ಯದಲ್ಲಿ ಮೊದಲ ಮಳೆಯೇ ಎಚ್ಚರಿಕೆಯ ಕರೆಗಂಟೆಯನ್ನು ಸ್ಥಳೀಯಾಡಳಿತಕ್ಕೆ ನೀಡಿದ್ದು, ಪೇಟೆಯ ಚರಂಡಿ ದುರಸ್ತಿ ಕಾರ್ಯ ನಡೆಯದೇ ಇದ್ದರೆ ರಸ್ತೆ ಹೊಳೆಯಂತಾಗುವ ಭೀತಿಯ ಸೂಚನೆ ನೀಡಿದೆ ಮೊನ್ನೆ ಸುರಿದ ಮಳೆ. ಕೃತಕ ನೆರೆ ಆತಂಕವೂ ಇಲ್ಲ ಎನ್ನುವಂತಿಲ್ಲ. ನಗರ ಪಂಚಾಯತ್ ವ್ಯಾಪ್ತಿಗೆ ಸೇರಿದ ಸುಳ್ಯದ ಮುಖ್ಯ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದ್ದು, ದುರಸ್ತಿ ಕಾರ್ಯ ನಡೆಯಬೇಕಿದೆ.
ಬೇಸಗೆಯಲ್ಲಿ ಕಸ-ಕಡ್ಡಿ, ತ್ಯಾಜ್ಯ ಸೇರಿಕೊಂಡು ಮಳೆ ನೀರಿನ ಹರಿವಿಗೆ ಅಡ್ಡಿಯುಂಟಾಗಿದ್ದು , ಕೆಲವೆಡೆ ಚರಂಡಿ ಬಂದ್ ಆಗಿರುವ ಸ್ಥಿತಿಯಲ್ಲಿದೆ. ಇದು ಕೃತಕ ನೆರೆ ಭೀತಿಯನ್ನು ತಂದೊಡ್ಡುವ ಆತಂಕವನ್ನು ಸೃಷ್ಟಿಸಿದೆ. ಸುಳ್ಯದಲ್ಲಿ ಹಳ್ಳ, ತೋಡು, ಕಾಲುವೆಗಳಿಂದ ನೀರು ಪೇಟೆಗೆ ನುಗ್ಗುವ ಭೀತಿ ಇಲ್ಲದಿದ್ದರೂ ಇರುವ ಚರಂಡಿಯಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾದಲ್ಲಿ ನೀರು ರಸ್ತೆಗೆ ನುಗ್ಗುವ ಆತಂಕ ಇದೆ.
ರಸ್ತೆಗೆ ನುಗ್ಗಿದ ಮಳೆ ನೀರು ಇತ್ತೀಚೆಗೆ ಸುಳ್ಯ ದಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಜಲಾ ವೃತಗೊಂಡಿದ್ದು, ವಾಹನ ಸವಾರರು ಸ್ಥಳೀಯಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆಗೇಟ್‌ನಲ್ಲಿ ಸಮರ್ಪಕ ಚರಂಡಿ ಇಲ್ಲದೆ ರಸ್ತೆಯಲ್ಲೇ ಮಳೆ ನೀರು ಸಂಗ್ರಹವಾಗಿತ್ತು. ಪೇಟೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದ್ದರೂ ಅದರ ನಿರ್ವಹಣೆ ಮಾತ್ರ ಸಮರ್ಪಕವಾಗಿಲ್ಲ ಎಂಬ ದೂರು ಕೇಳಿಬಂದಿದೆ.
ರಸ್ತೆಯ ನೀರು ಚರಂಡಿಗೆ ಸೇರುವಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ತುಂಬಿ ನೀರು ಹರಿಯಲು ಅಡ್ಡಿಯಾಗಿದೆ. ರಸ್ತೆಯ ನೀರು ಚರಂಡಿಗೆ ಸೇರಲು ಸಮರ್ಪಕ ವ್ಯವಸ್ಥೆಯೂ ಇಲ್ಲ ಎನ್ನಲಾಗಿದ್ದು, ಇದರಿಂದಾಗಿಯೇ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಒಳ ರಸ್ತೆಯಲ್ಲೂ ಚರಂಡಿ ದುರಸ್ತಿ ಕಾರ್ಯ ನಡೆಯಬೇಕಿದೆ.
ಅಪಾಯಕ್ಕೆ ಆಹ್ವಾನ
ಪೇಟೆಯಲ್ಲಿ ಚರಂಡಿಯ ಮೇಲ್ಭಾಗಕ್ಕೆ ಅಳವಡಿಸಿರುವ ಸ್ಲ್ಯಾಬ್ ಕೆಲವೆಡೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಕೆಲವೆಡೆ ಕಬ್ಬಿಣದ ಸರಳುಗಳು ಮೇಲೆದ್ದು ಕಾಣಿಸುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಕೆಲವೆಡೆ ಸ್ಲ್ಯಾಬ್ ತೆಗೆದಿದ್ದರೆ ಅದನ್ನು ಅಳವಡಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬ ದೂರು ವ್ಯಕ್ತವಾಗಿದೆ.
ದುರಸ್ತಿ ನಡೆಯಲಿ
ಇದೀಗ ಸಂಜೆ ಮಳೆ ಸುರಿಯುತ್ತಿದ್ದು, ಚರಂಡಿ, ಕಾಲುವೆಗಳ ದುರಸ್ತಿ ಕಾರ್ಯ ನಡೆಸಲು ಸೂಚನೆ ನೀಡಿದಂತಾಗಿದೆ. ಸ್ಥಳೀಯಾಡಳಿತ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕಿದೆ. ಕೆಲವೆಡೆ ಚರಂಡಿಗೂ ಕಾಯಕಲ್ಪ ನೀಡಿ ನೀರಿ ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕಸ-ಕಡ್ಡಿ, ಗಿಡ-ಗಂಟಿ ತೆರವು, ಮಣ್ಣು ತೆರವು ಕಾರ್ಯ ನಡೆಯಬೇಕಿದೆ. ಮಳೆಗಾಲದ ಮೊದಲು ದುರಸ್ತಿ ಕಾರ್ಯ ನಡೆಸಿದರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.