ಪೂರ್ಣಗೊಂಡಿಲ್ಲದ ಚರಂಡಿ ನಿರ್ಮಾಣ ಕಾಮಗಾರಿ
Team Udayavani, May 26, 2018, 4:15 AM IST
ಬಜಪೆ : ಮಳೆಗಾಲ ಸಮೀಪಿಸುವಾಗ ಸಮಸ್ಯೆಗಳು ನೆನಪಾಗುತ್ತವೆ. ಬಜಪೆ ಗ್ರಾಮ ಪಂಚಾಯತ್ ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲ ಹಾಗೂ ಮನೆಮನೆ ತ್ಯಾಜ್ಯ ನೀರು ಯಾರಿಗೂ ಸಮಸ್ಯೆ ಎದುರಾಗದೇ ಹರಿದಾಡುವಂತೆ ಮಾಡಲು ಪರಿಹಾರ ಕಂಡುಕೊಳ್ಳಬೇಕಾಗಿದೆ. ಬಜಪೆ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆದು ಒಂದು ವರ್ಷಗಳಾಯಿತು. ಅದು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರಿಗೆ, ಪಾದ ಚಾರಿಗಳಿಗೆ ಇಲ್ಲಿ ನಡೆದುಕೊಂಡು ಹೋಗಲು ತೊಂದರೆ ಹಾಗೂ ಅಪಾಯ ಎದುರಾಗಿದೆ. ರಾತ್ರಿ ವೇಳೆಯಲ್ಲಿ ತೆರಿದಿಟ್ಟ ಚರಂಡಿಯಲ್ಲಿ ಅಯತಪ್ಪಿ ಬಿದ್ದವರು ಅದೇಷ್ಟು ಮಂದಿ ಗಾಯಗೊಂಡಿದ್ದಾರೆ.
ತುಂಬಿಕೊಂಡಿದೆ ಪ್ಲಾಸ್ಟಿಕ್ ತ್ಯಾಜ್ಯ
ಚರಂಡಿಯಲ್ಲಿ ಈಗ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಳ್ಳುತ್ತಿದೆ. ಅದರ ಜತೆ ಬೇರೆ ತ್ಯಾಜ್ಯಗಳು ಸೇರಿಕೊಂಡು ಕಸದ ತೊಟ್ಟಿಯಾಗಿ ಬಿಟ್ಟಿದೆ. ಕಸ ನೋಡಿದಾಗ ಅದಕ್ಕೆ ಬಿಸಾಡುವ ಜಾಯಾಮಾನ ಇಲ್ಲಿ ಬೆಳೆದಿದೆ. ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ರಾತ್ರಿವೇಳೆಯಲ್ಲಿ ಕೆಲವರು ಬೆಂಕಿಕೊಡುತ್ತಿದ್ದಾರೆ. ಇದರಿಂದ ಪೇಟೆಯಲ್ಲಿ ಹೊಗೆಗಳು ತುಂಬಿಕೊಳ್ಳುತ್ತಿವೆ.
ಪ್ಲಾಸ್ಟಿಕ್ ತ್ಯಾಜ್ಯ ತೊಟ್ಟಿಲಗುರಿ ಕೃಷಿಪ್ರದೇಶಕ್ಕೆ
ಮಳೆ ಬಂದರೆ ಈ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳು ನೀರಿನೊಂದಿಗೆ ಹರಿದಾಡಿ ತಗ್ಗು ಪ್ರದೇಶದಲ್ಲಿರುವ ತೊಟ್ಟಿಲಗುರಿ ಕೃಷಿ ಪ್ರದೇಶವನ್ನು ಅವೃತಗೊಳಿಸುತ್ತದೆ. ಈ ಬಾರಿ ಈ ಚರಂಡಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಿನ ಕೃಷಿಕರಿಗೆ ಹೆಚ್ಚು ಬಾಧಿಸಲಿದೆ. ಚರಂಡಿಯ ನೀರು ತುಂಬಿ ಅಲ್ಲಿಯ ಕೃಷಿಗೆ ತೊಂದರೆಯಾಗುವ ಬಗ್ಗೆ ಕೃಷಿಕರು ಗ್ರಾಮ ಪಂಚಾಯತ್‌ಗೆ ಹಲವಾರು ಬಾರಿ ದೂರು ನೀಡಿದ್ದಾರೆ.
ಹೊಸ ಯೋಜನೆ
ಈ ಬಗ್ಗೆ ಪಂಚಾಯತ್ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ತಿಳಿಸಿದರೂ ಇಷ್ಟರ ತನಕ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ತೆರಿದಿಟ್ಟ ಚರಂಡಿಯನ್ನು ಕಲ್ಲು ಹಾಸಿ ಮುಚ್ಚಬೇಕು ಎಂದು ಎಂಜಿನಿಯರ್ ಅವರಲ್ಲಿ ಮನವಿ ಮಾಡಲಾಗಿದೆ. ಮಳೆಗಾಲದ ನೀರು ಹಾಗೂ ಚರಂಡಿಯ ತ್ಯಾಜ್ಯ ನೀರು ಹರಿದಾಡಲು ಹೊಸ ಯೋಜನೆಯನ್ನು ಪಂಚಾಯತ್ ಹಾಕಿಕೊಂಡಿದೆ.
– ಸಾಯೀಶ್ ಚೌಟ, ಪಿಡಿಒ
— ಸುಬ್ರಾಯ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.