ಭರದಿಂದ ಸಾಗಿದೆ ಚರಂಡಿಗಳ ಹೂಳೆತ್ತುವ ಕಾರ್ಯ
Team Udayavani, May 11, 2022, 10:09 AM IST
ಮೂಲ್ಕಿ: ಮಳೆಗಾಲ ಸಮೀಪಿಸುತ್ತಿದ್ದಂತೆ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಚರಂಡಿ ಮತ್ತು ರಾಜ ಕಾಲುವೆಗಳ ಹೂಳೆತ್ತುವ ಕೆಲಸ ಭರದಿಂದ ನಡೆಯುತ್ತಿದ್ದು, ಮಳೆ ನೀರಿನಿಂದ ತುಂಬಿಕೊಳ್ಳುವ ಕೆಲವು ಪ್ರದೇಶಗಳ ಕಾಲುವೆ ಕೆಲಸ ಬಹುತೇಕ ವಾಗಿ ಪೂರ್ಣಗೊಂಡಿದೆ.
ಸಾರ್ವಜನಿಕರು ತಮ್ಮ ಮನೆ ಆವರಣದ ಕಸ ಕಡ್ಡಿಗಳನ್ನು ಪಕ್ಕದ ಚರಂಡಿಗೆ ಎಸೆಯುತ್ತಿರು ವುದರಿಂದಾಗಿ ನೀರು ಸರಾಗವಾಗಿ ಹೋಗಲಾರದೆ ಚರಂಡಿಯೊಳಗೆ ಹೂಳು ಮತ್ತು ಕಸ ತುಂಬಿಕೊಳ್ಳಲು ಮುಖ್ಯ ಕಾರಣವಾಗಿದೆ ಎಂದು ಪೌರಕಾರ್ಮಿಕರ ವಾದವಾಗಿದೆ.
ಪಂಚಮಹಾಲ್, ಕಾರ್ನಾಡು ಮತ್ತು ಬಪ್ಪನಾಡು ದೇವಸ್ಥಾನ ರಸ್ತೆಗಳ ಬದಿಯ ರಾಜ ಕಾಲುವೆಗಳು ಸುಮಾರು 10ರಿಂದ 15 ಕಿ.ಮೀ. ಉದ್ದದಿಂದ ಬರುವ ಮಳೆ ನೀರನ್ನು ನದಿಯತ್ತಾ ಸಾಗಿಸುವ ಮಾರ್ಗವಾಗಿದೆ. ಇಲ್ಲಿ ನೀರು ಹರಿಯಲು ಸಮಸ್ಯೆಯಾದರೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಇದನ್ನು ತಪ್ಪಿಸುವಲ್ಲಿ ಸಾರ್ವಜನಿಕರು ಕೂಡ ನಗರ ಪಂಚಾಯತ್ ಜತೆಗೆ ಸಹಕರಿಸಬೇಕಾಗುತ್ತದೆ ಎಂಬುವುದು ಸದಸ್ಯರ ಅಭಿಪ್ರಾಯ.
ನಗರದ ಪ್ರಮುಖ ಬಹುತೇಕ ರಾಜ ಕಾಲುವೆಗಳ ಹೂಳೆತ್ತುವ ಕೆಲಸ ಪೂರ್ಣ ಗೊಂಡಿದ್ದರೂ ಸಣ್ಣ ಚರಂಡಿಗಳ ಕೆಲಸವನ್ನು ನ.ಪಂ. ಹೆಚ್ಚುವರಿ ಸಿಬಂದಿ ಯನ್ನು ನಿಯೋಜಿಸಿ ವೇಗವಾಗಿ ಮುಗಿಸುವ ಪ್ರಯತ್ನ ಮಾಡುತ್ತಿದೆ.
ಒಳಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ
ಮುಖ್ಯವಾಗಿ ಮೂಲ್ಕಿ ನಗರ ಪಂಚಾಯತ್‌ನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಬಹಳ ವೇಗವಾಗಿ ಮೂಲ್ಕಿ ಒಳಪ್ರದೇಶದಲ್ಲೂ ವಸತಿ ಸಂಕೀರ್ಣ ತಲೆ ಎತ್ತಿ ನಿಂತಿದೆ. ಆದರೆ ಮಳೆ ನೀರು ಮತ್ತು ಕಟ್ಟಡದ ತ್ಯಾಜ್ಯಗಳನ್ನು ಹೇಗೆ ನಿಭಾಯಿಸುವುದು ಎಂಬುವುದರ ಪೂರ್ಣ ಯೋಜನೆಗಳು ಒಳಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲರಿಗೂ ತಲೆ ನೋವು ತಂದಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಬೇಕು. ಪ್ರತಿಯೊಬ್ಬರ ಮನೆ, ವಸತಿ ಸಂಕೀರ್ಣದ ಕಸ ಹಾಗೂ ತ್ಯಾಜ್ಯಗಳನ್ನು ರಸ್ತೆಗೆ ಎಸೆಯದೆ ನಗರ ಪಂಚಾಯತ್‌ನ ಕಸ ವಿಲೇವಾರಿ ವ್ಯವಸ್ಥೆಗೆ ನೀಡಿ ಸಹಕರಿಸಿದರೆ ಅರ್ಧ ಸಮಸ್ಯೆ ನೀಗಿಸಬಹುದು.
ನಿಭಾಯಿಸಲು ಸಿದ್ಧವಾಗಿದೆ
ಮೂಲ್ಕಿ ನಗರ ಪಂಚಾಯತ್‌ನ ಮೂರು ಬದಿಗಳಲ್ಲೂ ಶಾಂಭವಿ ನದಿ ಪ್ರದೇಶ ಆವರಿಸಿಕೊಂಡಿರುವ ಕಾರಣ ನಗರದ ಚರಂಡಿಗಳು ಅದರಲ್ಲೂ ರಾಜಕಾಲುವೆಗಳ ಮೂಲಕ ಹರಿದು ಹೋಗುವ ನೀರು ನದಿ ಸೇರುತ್ತದೆ. ಮಾತ್ರ ವಲ್ಲ ನದಿಯಿಂದ ಸಮುದ್ರ ಸೇರುತ್ತದೆ. ಆದರೆ ನೀರು ಹರಿದು ಹೋಗುವಾಗ ಸಮಸ್ಯೆ ಯಾಗದಂತೆ ನ.ಪಂ. ಕ್ರಮ ಕೈಗೊಂಡಿದೆ. ಬಹುತೇಕ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಮುಗಿದಿದೆ. ಮುಂದೆ ಹೆಚ್ಚುವರಿ ಸಿಬಂದಿಯನ್ನು ಚರಂಡಿ ಸಮತಟ್ಟಿನ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ. ಎಷ್ಟೇ ಜೋರಾಗಿ ಮಳೆ ಸುರಿದರೂ ಮೂಲ್ಕಿ ನಗರ ಪಂಚಾಯತ್ ನಿಭಾಯಿಸಲು ಸಿದ್ಧವಾಗಿದೆ. –ಪಿ. ಚಂದ್ರಪೂಜಾರಿ, ಮುಖ್ಯಾಧಿಕಾರಿ ನ.ಪಂ. ಮೂಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.