ಚುನಾವಣ ಆಯೋಗದ ಕೃತಿಗೆ ನಾಟಕ ಆಯ್ಕೆ
Team Udayavani, May 4, 2018, 1:29 PM IST
ಪುತ್ತೂರು: ಕರ್ನಾಟಕ ಚುನಾವಣಾ ಆಯೋಗವು ಹೊರತಂದಿರುವ ಮತದಾರರ ಜಾಗೃತಿಯ ಬೀದಿ ನಾಟಕಗಳ ಸಂಕಲನ ‘ಓಟು ಹಾಕೋಣ ಬನ್ನಿ’ ಕೃತಿಗೆ ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರಚನೆಯ ‘ಮತ ಮಾರಾಟಕ್ಕಲ್ಲ’ ಬೀದಿ ನಾಟಕ ಆಯ್ಕೆಯಾಗಿದೆ.
ಬೆಂಗಳೂರಿನ ಸಿಆರ್‌ಟಿ ಹಾಗೂ ಅಪ್ಸಾ ಸಂಸ್ಥೆ ಜಂಟಿಯಾಗಿ ಬೀದಿನಾಟಕ ಸಂಕಲನವನ್ನು ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಆಯ್ದ ಲೇಖಕರಿಗೆ ಮತದಾರರ ಜಾಗೃತಿಯ ನಾಟಕ ಬರೆಯಲು ನಿರ್ದೇಶನ ನೀಡಲಾಗಿತ್ತು.
ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಮೌನೇಶ ವಿಶ್ವಕರ್ಮ ಅವರು ‘ಮತ ಮಾರಾಟಕ್ಕಲ್ಲ’ ಅನ್ನುವ ಬೀದಿನಾಟಕ ಹಾಗೂ ‘ಮತದಾರ ಕೇಳಿಲ್ಲಿ’ ಎನ್ನುವ ಹಾಡನ್ನು ರಚಿಸಿದ್ದು, ಇವೆರಡೂ ಚುನಾವಣಾ ಆಯೋಗ ಹೊರತಂದಿರುವ ಕೃತಿಯಲ್ಲಿ ಪ್ರಕಟವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರು ಈ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ನೂರು ಪುಟಗಳ ಈ ಕೃತಿಯಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರು ರಚಿಸಿದ 15 ಬೀದಿನಾಟಕಗಳು ಪ್ರಕಟವಾಗಿವೆ.
ಪುತ್ತೂರಿನ ಸಂಪ್ಯ ನಿವಾಸಿ ಮೌನೇಶ್ ವಿಶ್ವಕರ್ಮ ಅವರು ಬಂಟ್ವಾಳದಲ್ಲಿ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ರಂಗನಾಟಕ, ಬೀದಿ ನಾಟಕಗಳ ಸಹಿತ ವಿವಿಧ ತರಬೇತಿ ನೀಡುತ್ತಿರುವ ಇವರು, 15ಕ್ಕೂ ಅಧಿ ಕ ನಾಟಕ ಬರೆದಿದ್ದಾರೆ. ಮಾಣಿಯಲ್ಲಿ ಸಂಸಾರ ಜೋಡುಮಾರ್ಗ ಕಲಾತಂಡವನ್ನು ಮುನ್ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.