ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಡ್ರೆಜ್ಜಿಂಗ್‌; ಜಿಲ್ಲಾಡಳಿತ ತೀರ್ಮಾನ

ಹೆಚ್ಚು ನೀರು ಸಂಗ್ರಹಕ್ಕೆ ಎದುರಾಗಿದ್ದ ಅಡಚಣೆ ನಿವಾರಣೆಗೆ ಯತ್ನ

Team Udayavani, Apr 30, 2019, 6:00 AM IST

2904MLR103

ಮಹಾನಗರ: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಸಂಗ್ರಹವಾಗಿರುವ ಬೃಹತ್‌ ಪ್ರಮಾಣದ ಹೂಳು ಸಹಿತ ಮರಳನ್ನು ತೆಗೆಯಲು ದ.ಕ. ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಹೆಚ್ಚು ನೀರು ಸಂಗ್ರಹಕ್ಕೆ ಎದುರಾಗಿದ್ದ ಅಡಚಣೆಯನ್ನು ನಿವಾರಿಸುವ ಪ್ರಯತ್ನ ನಡೆದಿದೆ.

ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ರೆಜ್ಜಿಂಗ್‌ ಮಾಡುವ ಮೂಲಕ ಡ್ಯಾಂನ ನೀರಿನ ಸಂಗ್ರಹ ವನ್ನು ಸ್ವಲ್ಪ ಏರಿಸುವುದು, ಆ ಮೂಲಕ ದೊರೆಯುವ ಮರಳನ್ನು ಸರಕಾರಿ ಕಾಮಗಾರಿಗಳಿಗೆ ಬಳಸಲು ಚಿಂತಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆ
ಡ್ಯಾಂನ ಆಳದಲ್ಲಿ ತುಂಬಿರುವ ಬೃಹತ್‌ ಪ್ರಮಾಣದ ಮರಳನ್ನು ತುರ್ತಾಗಿ ಡ್ರೆಜ್ಜಿಂಗ್‌ ಮೂಲಕ ವಿಲೇವಾರಿ ಮಾಡಲು ಕೇಂದ್ರ ಪರಿಸರ ಇಲಾಖೆ ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು. ಅದರಂತೆ ದ.ಕ. ಜಿಲ್ಲಾಡಳಿತವು ಡ್ಯಾಂನ ಮರಳನ್ನು ತೆಗೆಯಲು ನಿರ್ಧರಿಸಿದ್ದು, ಟೆಂಡರ್‌ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ.

ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮನಪಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜಿಲ್ಲಾಧಿಕಾರಿ ರಚನೆ ಮಾಡಿದ್ದರು.

ಈ ಸಮಿತಿ ಮೂಲಕ ಟೆಂಡರ್‌ ಕರೆಯಲಾಗಿತ್ತು. ಕೆಲವೇ ದಿನದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿದ ಅನಂತರ ನಿಯಮಾವಳಿಗಳ ಪ್ರಕಾರ ಡ್ರೆಜ್ಜಿಂಗ್‌ ನಡೆಯಲಿದೆ.

ತುಂಬೆ ಡ್ಯಾಂನ ಪಂಪಿಂಗ್‌ ಜಾಗದಲ್ಲಿ ಇರುವ ಬಾವಿಯಲ್ಲಿ ಯಥೇತ್ಛವಾಗಿ ಮರಳು ತುಂಬಿ ಪಂಪಿಂಗ್‌ ಸಮಸ್ಯೆ ಆದಾಗ, ಬಾವಿಯಲ್ಲಿ ತುಂಬಿರುವ ಮರಳನ್ನು ಈ ಹಿಂದೆ ತೆಗೆಯಲಾಗಿತ್ತು. ಹಲವು ದಿನಗಳ ಹಿಂದೆ ಕೂಡ ಇದೇ ರೀತಿ ಬಾವಿಯ ಮರಳನ್ನು ತೆಗೆಯಲಾಗಿದ್ದು, ಅದಕ್ಕಾಗಿ ಒಂದು ದಿನ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ, ಡ್ಯಾಂ ಪೂರ್ಣ ಸಂಗ್ರಹವಾಗಿರುವ ಮರಳನ್ನು ಇಲ್ಲಿಯವರೆಗೆ ತೆಗೆದಿರಲಿಲ್ಲ. ಹೀಗಾಗಿ ಯಾವ ಪ್ರಮಾಣದಲ್ಲಿ ಮರಳು ಇಲ್ಲಿ ಲಭ್ಯವಿದೆ ಎಂಬ ಲೆಕ್ಕಾಚಾರ ಸಿಗುತ್ತಿಲ್ಲ.

ಡ್ರೆಜ್ಜಿಂಗ್‌ ಯಾಕಾಗಿ?
ಸೋಮವಾರ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ 4.82 ಮೀಟರ್‌ನಷ್ಟಿದೆ. ಆದರೆ, ನದಿಯಲ್ಲಿ ನೀರಿನ ಜತೆಗೆ ಮರಳು ಕೂಡ ಬಂದು ಡ್ಯಾಂ ಭಾಗದ ತಳಮಟ್ಟದಲ್ಲಿ ಸಂಗ್ರಹವಾಗಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜತೆಗೆ ಹಳೆ ಡ್ಯಾಂನಲ್ಲಿ ಮಳೆಗಾಲದ ಸಂದರ್ಭ ಎಲ್ಲ ಗೇಟುಗಳನ್ನು ತೆರೆಯುತ್ತಿದ್ದ ಕಾರಣದಿಂದ ಮರಳು ಡ್ಯಾಂನಿಂದ ಹೊರಭಾಗಕ್ಕೆ ಹೋಗುತ್ತಿತ್ತು. ಆದರೆ, ಹೊಸ ಡ್ಯಾಂ ಆದ ಬಳಿಕ ಇಲ್ಲಿ ಕೆಲವು ಗೇಟ್‌ಗಳನ್ನು ಬಂದ್‌ ಮಾಡಿದ್ದ ಕಾರಣ ಅಲ್ಲಿ ಮರಳು ಸಂಗ್ರಹವಾಗಿದೆ. ಭಾರೀ ಪ್ರಮಾಣದಲ್ಲಿ ಹೂಳು/ಮರಳು ತುಂಬಿದರೆ, ನೀರು ಹತ್ತಿರದ ಪ್ರದೇಶಗಳಿಗೆ ನುಗ್ಗುವ ಅಪಾಯವನ್ನು ನಿರಾಕರಿಸುವಂತಿಲ್ಲ. ಹಾಗಾಗಿ ಡ್ರೆಜ್ಜಿಂಗ್‌ಗೆ ತೀರ್ಮಾನಿಸಲಾಗಿದೆ.

ಮೀನುಗಾರಿಕಾ ಬಂದರ್‌ನ ರೀತಿಯಲ್ಲಿ ಡ್ರೆಜ್ಜಿಂಗ್‌
ನಗರದ ಮೀನುಗಾರಿಕಾ ಬಂದರ್‌ನಲ್ಲಿ ಮೀನುಗಾರಿಕಾ ದೋಣಿಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸಲು ಮಾಡಲಾಗುತ್ತಿರುವ ಡ್ರೆಜ್ಜಿಂಗ್‌ಗೆ ಬಳಕೆ ಮಾಡುವ ರೀತಿಯ ಬೃಹತ್‌ ಗಾತ್ರದ ಯಂತ್ರವನ್ನೇ ತುಂಬೆ ಡ್ಯಾಂನಲ್ಲೂ ಬಳಕೆ ಮಾಡುವ ಸಾಧ್ಯತೆ ಇದೆ. ಡ್ಯಾಂ ಪೂರ್ಣ ಮರಳನ್ನು ತೆಗೆದು ಅದನ್ನು ಸರಕಾರಿ ಕಾಮಗಾರಿಗಳಿಗೆ ಬಳಕೆ ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ.

 ಡ್ರೆಜ್ಜಿಂಗ್‌ಗೆ ಅನುಮತಿ
ತುಂಬೆ ಡ್ಯಾಂನಲ್ಲಿ ತುಂಬಿರುವ ಹೂಳು/ಮರಳನ್ನು ಡ್ರೆಜ್ಜಿಂಗ್‌ ಮಾಡಲು ಅನುಮತಿ ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕೆಲವೇ ದಿನದಲ್ಲಿ ಡ್ರೆಜ್ಜಿಂಗ್‌ ಕೆಲಸ ಆರಂಭವಾಗಲಿದೆ. ನೀರು ಸಂಗ್ರಹಕ್ಕೆ ಲಾಭ, ಮರಳು ಲಭ್ಯತೆ ಹಿನ್ನೆಲೆಯಲ್ಲಿ ಡ್ರೆಜ್ಜಿಂಗ್‌ ಮಾಡಲಾಗುತ್ತದೆ.
– ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ,ದ.ಕ

ಟಾಪ್ ನ್ಯೂಸ್

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.