ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಒಣಗಿದ ಮರ
Team Udayavani, Apr 18, 2018, 11:43 AM IST
ಗಂಜಿಮಠ : ಮಂಗಳೂರು- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠದಲ್ಲಿ ಒಣಗಿದ ಮಾವಿನ ಮರದ ತುಂಡುಗಳು ಹೆದ್ದಾರಿಗೆ ಬೀಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಈ ಮಾವಿನ ಮರ ಹೆದ್ದಾರಿಗೆ ತಾಗಿಕೊಂಡೇ ಇದೆ. 5 ತಿಂಗಳ ಹಿಂದೆ ಈ ಮರ ಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕದಳದವರು ಬಂದು ನಂದಿಸಿದ್ದರು. ಬಳಿಕ ಈ ಮರ ಒಣಗುತ್ತಾ ಬಂದಿದೆ. ಎರಡು ತಿಂಗಳ ಹಿಂದೆ ಇದರ ಗೆಲ್ಲುಗಳು ತುಂಡಾಗಿ ಹೆದ್ದಾರಿ ಮೇಲೆ ಬಿದ್ದಿತ್ತು.
ಪ್ರತಿ ಸಲ ತಪ್ಪಿದ ದುರಂತ
ಕಳೆದ ಎರಡು ತಿಂಗಳಿನಿಂದ ಈ ಮರದ ಗೆಲ್ಲುಗಳು ಹೆದ್ದಾರಿಗೆ 5 ಬಾರಿ ಬಿದ್ದಿದೆ. ಪ್ರತಿ ಬಾರಿ ವಾಹನ ಹೋದ ಮೇಲೆ ಗೆಲ್ಲುಗಳು ಬಿದ್ದಿತ್ತು. ಶುಕ್ರವಾರ ಮಧ್ಯಾಹ್ನ 1ಗಂಟೆಯ ವೇಳೆಯಲ್ಲಿ ಒಣಗಿದ ಗೆಲ್ಲೊಂದು ಸ್ಕೂಟರ್ ಹೋದ ಅನಂತರ ಬಿದ್ದಿತ್ತು.
ಸ್ವಲ್ಪದರಲ್ಲೇ ದುರಂತವೊಂದು ತಪ್ಪಿದಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಇದು ಆಗಿರುವ ಕಾರಣ ಇಲ್ಲಿ ವಾಹನಗಳು ವೇಗವಾಗಿ ಸಂಚರಿಸು ತ್ತವೆ. ಆ ವೇಳೆ ಮರದ ಗೆಲ್ಲು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೇ ಈ ಮರದ ಸಮೀಪದಲ್ಲಿಯೇ ವಿದ್ಯುತ್ ಕಂಬ, ಎಚ್‌ಟಿ ತಂತಿಗಳು ಹಾದು ಹೋಗುತ್ತಿದ್ದು ಅಪಾಯದ ಸಾಧ್ಯತೆಯನ್ನು ಹೆಚ್ಚು ಮಾಡಿದೆ. ಈ ಮರ ತೆರವಿಗೆ ಈಗಾಗಲೇ ಗಂಜಿಮಠ ಗ್ರಾಮ ಪಂಚಾಯತ್‌ನ ಅಧಿಕಾರಿಗಳ ಗಮನ ತರಲಾಗಿದೆ. ಪಂಚಾಯತ್‌ನಿಂದ ಮರ ಕಡಿಯಲು ಸಾಧ್ಯವಿಲ್ಲ. ಅವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಎನ್ನುತ್ತಾರೆ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ ಚಂದ್ರಹಾಸ.
ಮರದ ಬಗ್ಗೆ ಹಾಗೂ ಇದರಿಂದ ಸಂಭವಿಸಬಹುದಾದ ಅಪಾಯದ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಮನವಿ ಬಂದಿಲ್ಲ. ವರದಿ ಬಂದ ಬಳಿಕ ಮರ ಕಡಿಯಲು ಕ್ರಮಕೈಗೊಳ್ಳುವುದಾಗಿ ಕೈಕಂಬ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಧೀರ್ ತಿಳಿಸಿದ್ದಾರೆ.
ತಿರುವಿನಲ್ಲಿರುವ ಮರ
ಮೂಡಬಿದಿರೆ ಕಡೆಯಿಂದ ಮಂಗಳೂರಿಗೆ ಬರು ವಾಗ ಸಿಗುವ ತಿರುವಿನ ಬಲಬದಿಯಲ್ಲಿರುವ ಈ ಮರ ಎದುರು ಬರುವ ವಾಹನ ಸವಾರರಿಗೆ ಕಾಣುವುದಿಲ್ಲ. ಅಲ್ಲದೇ ಹೆದ್ದಾರಿಯಲ್ಲಿ ಎತ್ತು ತಗ್ಗುಗಳೂ ಇವೆ. ಈಗಾಲೇ ಇಲ್ಲಿ ಎರಡು ಅಪಘಾತ ನಡೆದಿದ್ದು, ಮೂವರು ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.